ಶ್ರೀ ರಾಮಚಂದ್ರಾಪುರ ಮಠದ ಶಿಷ್ಯರು  ಬಹಳ ಭಾಗ್ಯಶಾಲಿಗಳೇ ಸರಿ.ಅದೂ ಈ ಕಾಲಘಟ್ಟದ ರಾಮಚಂದ್ರಾಪುರದ ಹತ್ತು ಹಲವು ಪೂರ್ವಯೋಜಿತ ಒಂದೊಂದೇ ಕಾರ್ಯಗಳನ್ನು ಗಮನಿಸಿದರೆ;ಶಿಷ್ಯ ಸಾಗರದ ಪುರೋಭಿವೃದ್ಧಿಯೇ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಧ್ಯೇಯ. ಶ್ರೀಗಳವರ ಗಮನವೆಲ್ಲ ಶಿಷ್ಯಸಮೂಹದತ್ತ …,ಪ್ರತಿ ದಿನವೂ ಪ್ರತಿ ಕ್ಷಣವೂ. ಅದಕ್ಕೊಂದು  ನಾನು ಗಮನಿಸಿದ ಪುಟ್ಟ ಉದಾಹರಣೆಯೆಂದರೆ ; ಪ್ರತಿ ದಿನದ ಶ್ರೀ ಸಂಸ್ಥಾನ  ರಾಮಪೂಜೆಯಲ್ಲಿ  ಪುಷ್ಪಾರ್ಚನೆ ಮಾಡುವಾಗ ಶಿಷ್ಯಸಮೂಹದ ಸಭೆಗೆ ಮಂತ್ರಪುಷ್ಪವನ್ನು ಹಾಗೂ ಮಂಗಳಾರತಿಯನ್ನು ತೋರಿಸಿ ಶ್ರೀ ರಾಮದೇವರಿಗೆ ಅರ್ಚನೆ ಮಾಡುತ್ತಾರೆ. ಈ ದೃಶ್ಯ ಗಮನಿಸಿದಾಗ ;ಅಲ್ಲಿ ಕುಳಿತ ಪ್ರತಿಯೊಬ್ಬ ಶಿಷ್ಯನಿಗೂ ಮನದಲ್ಲಿ  ಕೃತಾರ್ಥ ಭಾವ ಮೂಡದೆ ಇರದು.ನಾನಂತೂ ಪ್ರತಿ ಬಾರಿ ಪುಳಕಿತಳಾಗುತ್ತೇನೆ.
ಶಿಷ್ಯರನ್ನು ಶ್ರೀ ಸಂಸ್ಥಾನ ಒಮ್ಮೆ ನೋಡಿದರೆ ಸಾಕು.ಮತ್ತೊಮ್ಮೆ ಹೆಸರಿಡಿದು  ಮಾತಾಡಿಸುವ  ಆ ನೆನಪಿನ ಶಕ್ತಿ ಅಗಾಧ!!.ಅದು…., ಶಿಷ್ಯರಿಗೋ ಕಾಶಿಗೆ ತೆರಳಿ ವಿಶ್ವನಾಥನ ದರ್ಶನವಾದಷ್ಟು ಸಂಭ್ರಮ.ಆ ಚೇತೋಹಾರಿ ನೆನಪೆಂದರೆ;ನಮಗೊಂದು ಅಳೆಯಲಾಗದ,ಮರೆಯಲಾಗದ, ಮರೆಯಬಾರದ ಮಾತೃತ್ವದ ತೂಕಕ್ಕೂ ಮೀರಿದ ನೆನಪೇ ಶ್ರೀ ಶ್ರೀ ರಾಘವೇಶ್ವರ ಸ್ಮರಣೆ.

ಸಂಘಟನೆ:- ಪ್ರಥಮವಾಗಿ ಪದ ತಲದಿಂದ ಶಿಖರದ ತನಕ ಎನ್ನುವಂತೆ; ಘಟಕ, ವಲಯ, ಸೀಮೆ, ಹೋಬಳಿ ಹೀಗೆ ವಿಂಗಡಣೆಯು ಒಗ್ಗಟ್ಟಿಗೆ ಪೂರಕ. ಅಂತೂ ಹವ್ಯಕ ಸಮಾಜದಲ್ಲಿ ಎಲ್ಲರಿಗೂ ಪರಸ್ಪರ  ಪರಿಚಯ, ಸ್ನೇಹ ವಿಸ್ತಾರವಾದುದೂ ಒಳ್ಳೆಯ ಬೆಳವಣಿಗೆ.
ಶ್ರೀ ಸಂಸ್ಥಾನ ಕೈಗೊಂಡ  ರಾಮಾಯಣ ಮಹಾಸತ್ರ, ಮಹಿಳಾ ಸಮಾವೇಶ, ಸೇವಕ ಸಮಾವೇಶ, ಮಂಗಲಗೋಯಾತ್ರೆ, ಗೋಸ್ವರ್ಗ,  ರಾಮಾಯಣ ಪಾರಾಯಣ, ವರ್ಷಕ್ಕೊಂದು ಸ್ತೋತ್ರ  ಪಾರಾಯಣ, ಹೀಗೆ ಪಟ್ಟಿ ಹಲವಾರು.
ತಮ್ಮ ಶಿಷ್ಯ ಸಮೂಹದಲ್ಲಿ ಸಂಘಟನಾಶಕ್ತಿ ಮೂಡಿಸುವ ಹಾಗೂ ಸತ್ಕಾರ್ಯ ಸೃಷ್ಟಿಸುವ  ಕಾರ್ಯಕ್ರಮಗಳು ಒಂದೇ ಎರಡೇ ಹತ್ತೇ ನೂರೇ ಸಾವಿರಾರು!!!.ಅವುಗಳಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಶ್ರೀ ಗುರುಗಳ ಕನಸಿನ ಕೂಸು!!!.
ಶ್ರೀಸಂಸ್ಥಾನದ ಒಂದೊಂದು ಯೋಚನೆ,ಯೋಜನೆಗಳೂ ವಿಸ್ತಾರಗೊಂಡು ಅವುಗಳು ಲೋಕೋತ್ತರ!!.
ಹಿಂದೆ ಗುರು , ಮುಂದೆ ವಿಷ್ಣುಗುಪ್ತವಿಶ್ವವಿದ್ಯಾ ಪೀಠ ನಮಗಿನ್ಯಾತರ ಚಿಂತೆ.

–  ವಿಜಯಾಸುಬ್ರಹ್ಮಣ್ಯ,ಕುಂಬಳೆ.
ಮೊ:8547214125.

Facebook Comments Box