ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
Audio :
Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
Audio :
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
December 18, 2010 at 6:48 AM
ಕಾಲಪುರುಷನು ವೈಷ್ಣವ ಶೈವ ಎ೦ಬ ಎಲ್ಲರನ್ನೂ ಒ೦ದೇ ಬಾರಿಗೆ ನು೦ಗಿ ಅದ್ವೈತವಾಗಿಸಿದ್ದಾನೆ ಅಲ್ಲಿ.
.
ಶ್ರೀ ಗುರುಭ್ಯೋ ನಮಃ
December 18, 2010 at 6:57 AM
ಅದ್ವೈತದ ಸರಿಯಾದ ಜ್ಞಾನವಿಲ್ಲ ನಮ್ಮಲ್ಲಿ, ಸಾಮಾನ್ಯರಿಗೆ ಅರ್ಥವಾಗುವ ಹಾಗೆ, ಹ೦ತ ಹ೦ತವಾಗಿ ಅದ್ವೈತವನ್ನು ತೋರಿಸಿದರೆ ಹೆಚ್ಚು ಅರ್ಥವಾಗಬಹುದೇನೊ.. ಗುರುಗಳು, ಶ್ರೀಮುಖದಲ್ಲಿ ಹೆಚ್ಚು ವಿವರಿಸಿದರೆ ಅದ್ಭುತ.
.
ಆದಿ ಶ೦ಕರಾಚಾರ್ಯರು ಜೀವದೇವರ ಸ೦ಗಮವೆ ಜೀವನದ ಪರಮ ಲಕ್ಷ್ಯ ಎ೦ದು ಹೇಳಿದ ಮೇಲೆ, ನಮ್ಮ ಲಕ್ಷ್ಯ ಹೆಚ್ಚಿಸಿಕೊಳ್ಳಬೇಕಾಗಿದೆ, ಗುರುಗಳು ಹರಸಬೇಕು ಜ್ಞಾನವ ಹರಿಸಬೇಕು ದಾರಿಯ ತೋರಿಸಬೇಕು ಎ೦ದು ಪೂರ್ಣ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
.
ಆತ್ಮಲಿ೦ಗನ ಪರಿಸರದಲ್ಲಿ ಅದ್ವೈತವ ಜಪಿಸಿದರೆ, ಶಿವ ತನ್ನಲಿರುವ ಆತ್ಮವ ನಮ್ಮೊಳು ಇಡುವನು. ಶಿವನಲ್ಲೆ ಅದ್ವೈತವಾದ ಮೇಲೆ ಮತ್ತೇನಿದೆ.
.
ಶ್ರೀ ಗುರುಭ್ಯೋ ನಮಃ
April 21, 2011 at 7:57 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಭಗವಂತ ಎಷ್ಟು ಕರುಣಾಮಯಿ… ನಾವಿರುವಲ್ಲಿಗೆ ಅವನು ಬಂದು ನಮ್ಮನ್ನುದ್ದರಿಸುತ್ತಾನೆ….
ಸಾಗರದಲ್ಲಿ ಎಲ್ಲ ಪುಣ್ಯ ನದಿಗಳ ನೀರು ಸೇರಿರುವಂತೆ ಗುರುವಿನಲ್ಲಿ ಎಲ್ಲ ದೇವರು ವಾಸಮಾಡುತ್ತಾರೆ…..
ಕಲುಷಿತವಾದ ನೀರು ತಿಳಿಯಾಗಬೇಕಾದರೆ ಸ್ವಲ್ಪ ಕಾಲ ಸುಮ್ಮನೆ ಬಿಡಬೇಕು….. ಹಾಗೆ ಸ್ವಲ್ಪ ಕಾಲ ಶಾಂತವಾಗಿದ್ದರೆ ನಮ್ಮ ಮನಸ್ಸು ತಿಳಿಯಾಗುತ್ತದೆ…..
April 22, 2011 at 8:05 AM
ಆದಿ ಗುರು ನಾರಾಯಣ, ಆದಿ ಪುರುಷ ನಾರಾಯಣ, ಆದಿ ಮಾಯೆ ನಾರಾಯಣ, ಪರಮಾತ್ಮನ ಸಾಕಾರ ರೂಪ ನಾರಾಯಣ, ನೀನಿತ್ತ ಹಾಸಿಗೆಯಲಿ, ನಿನ್ನ ಪಾದವೆ೦ಬ ಆಸರೆಯಲಿ ಮಲಗಿರುವೆ, ಚಿತ್ತವ ಶಾ೦ತಿಗೊಳಿಸು, ಅದು ಎದ್ದರೆ ಸುಳಿಯಲೆತ್ನಿಸಿದರೆ, ಸುಳಿಯಲಿ ನಿನ್ನ ಪಾದವೆ೦ಬ ಮಾನಸ ಸರೋವರವ.
ಮಾಯಾಲೋಕವ ಸೃಷ್ಟಿಸಿ ದೂಡಿದ ಸಹಸ್ರ ನಾರಾಯಣ ಪುತ್ರರ, ತನ್ನನ್ನೆ ತಾ ಕಾಣುತಿರುವ ಕೆಣಕುತಿರುವ ಗೇಲಿಮಾಡುತಿರುವ ಹುಡುಕುತಿರುವ, ಸಪ್ತಸಾಗರಗಳೇನು ಸುಪ್ತಲೋಕಗಳೇನು, ಹರಿಯೆ ನಿನ್ನ ಯೋಗನಿದ್ರೆಗೆ ಕೊನೆಯು೦ಟೆ, ಕಲ್ಪನಾಲೋಕವನು ನಸುನಗುತ್ತಾ ಕಾಣುತ್ತಿರುವೆ ವ್ಯಾಪಿಸಿರುವೆ, ಆಗಾಧದ ಶಾ೦ತಿ, ಪೂರ್ಣವೆ೦ಬುದು ಆ ಕಮಲ ನೇತ್ರಗಳಲಿ, ಶೂನ್ಯವಲ್ಲ ನಿನ್ನ ಲೋಕಗಳು ನಿನ್ನ ಮಕ್ಕಳಾಗಿ ನಾವಿರುವಾಗ, ಆ ಪೂರ್ಣದಿ೦ದಲೆ ಬ೦ದಿರುವ ಇದು ಪೂರ್ಣವೆ.
.
ಮಾಯೆಯಿ೦ದ ಪುರುಷನಿಗೆ ಸೇತು ಆಗಿ ಗುರು ಇಹನು,
.
ಶ್ರೀ ಗುರುಭ್ಯೋ ನಮಃ
April 22, 2011 at 3:11 PM
ನೀ ಎನ್ನ ತ೦ದೆಯಾದ ಮೇಲೆ ನಾ ನಿನ್ನ ದಾಸ ಹೇಗಾದೇನು? ನೀ ಎನ್ನ ದಾಸನೆ೦ದು ಹೇಗೆ ಕಾಣುವೆ?
ನಿನ್ನ ಬೀಜದಿ೦ದ ಹೊರಬ೦ದಿರುವ ನನಗೆ ನೀ ಸ್ವಾಮಿ ಹೇಗಾದೆಯೊ? ನಾ ನಿನ್ನನ್ನು ಸ್ವಾಮಿಯೆ೦ದು ಹೇಗೆ ಕಾಣಲಿ?
.
ಶ್ರೀ ಗುರುಭ್ಯೋ ನಮಃ
April 22, 2011 at 3:13 PM
ನೀ ಇರುವೆ, ನಾ ಇರುವೆ, ಮಾಯೆ ಇಹುದು.
ಅರಿವೆ ನೀನು ನಿರ್ಲಿಪ್ತನಾಗಿರುವೆ
ಅರಿಯೆ ನಾನು ವಿವರ್ಣನಾಗಿರುವೆ
.
ವರ್ಣವಾಗಿ ಕ೦ಡರು ನಿರ್ಲಿಪ್ತವಾಗಿಹುದು ಮಾಯೆ, ದೇಹ ಕಾಲ ಗುಣ ಅವಸ್ಥೆ ಬದಲಾಗುವವು ಕೊನೆಯಾಗುವೆವು, ಮೆಚ್ಚಲು ಮುಟ್ಟಲು ಭಯ, ವಿಷಯ ಸ೦ಗದಿ೦ದ ಕ್ಷಣ ಸುಖ, ಮರುಕ್ಷಣ ವಿಷಣ್ಣ ಭಾವ. ವಿಷಾದ, ಮಾ ನಿಷಾದ..
.
ನಾ ನಿನ್ನಿ೦ದ ಕ್ಷಣ ದೂರಾವಾದರು ಸೂತಕ ಭಾವ, ನಿನ್ನ ಕೈ ಹಿಡಿಯದೆ ಮಾಯೆಯ ನೋಡುತ್ತಿದ್ದರೆ ಸಾವಿನ ಶವದ ಛಾಯೆ.
.
ಮಾಯೆ ಸ್ವರ್ಣ ವರ್ಣ ಲೋಕಗಳನ್ನೆ ತೋರಿಸಿತ್ತದ್ದರು ಕೊನೆಗಳು೦ಟು… ಮಾಯೆ ಕೂಡ ಅನ೦ತವೆ? ಅನ೦ತನನ್ನು ಹೊರಗಣ್ಣಿ೦ದ ಕಾಣುವುದಾದರೆ ಮಾಯೆ ಅನ೦ತನೆ?
.
ಶ್ರೀ ಗುರುಭ್ಯೋ ನಮಃ
April 23, 2011 at 11:02 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಅದ್ಭುತ… “ನಿನ್ನ ಕೈ ಹಿಡಿಯದೆ ಮಾಯೆಯ ನೋಡುತ್ತಿದ್ದರೆ ಸಾವಿನ ಶವದ ಛಾಯೆ”
June 1, 2011 at 8:15 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ಜೀವ ದೇವರ ಮಿಲನವೇ ಅದ್ವೈತ”