LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಹೆಸರು- ಕಗ್ಗ

Author: ; Published On: ಬುಧವಾರ, ಮಾರ್ಚ 2nd, 2011;

Switch to language: ಕನ್ನಡ | English | हिंदी         Shortlink:

ಬೆಂಗಳೂರಿನ ಶ್ರೀರಾಮಾಶ್ರಮದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಮಂಕುತಿಮ್ಮನ ಕಗ್ಗದ ಕುರಿತಾದ ಪ್ರವಚನ

[audio:DailyPravachana/February_2011/Hesaru_13-Feb-11.mp3]

27 Responses to ಹೆಸರು- ಕಗ್ಗ

 1. shobha lakshmi

  ಹರೇರಾಮ..ಪ್ರವಅನ ಸ೦ಪೂರ್ಣ ಕೇಳಿದೆ..ತು೦ಬ ಇಷ್ಟ ಆತು..ಕಣ್ಣು ತೆರೆಸಿತ್ತು..
  ಎಲ್ಲೋ ಮೂಲೆಯಲ್ಲಿ ಅವಿತು ಕುಳಿತ ಹೆಸರು ,ಮುನ್ನಣೆ ಗಳ ಆಕಾ೦ಕ್ಷೆ ಯನ್ನು ಹುಡುಕಿ ತೋರಿಸಿಕೊಟ್ಟಿರಿ,,
  ಇನ್ನು ಮತ್ತೆ ಮತ್ತೆ ಪ್ರವಅನ ಕೇಳ ಬೇಕೆ೦ದು ಅನಿಸುತ್ತಿದೆ…ಆತ್ಮವನ್ನು ತಿನ್ನುತ್ತಿರುವ ಗೆದ್ದಲನ್ನು ಹೋಗಲಾಡಿಸ ಬೇಕು..
  ಧನ್ಯಳಾದೆ.

  [Reply]

  nagananda Reply:

  nanu kelilla hege doenload madodu.

  [Reply]

 2. Raghavendra Narayana

  ಹೆಸರು
  ———-
  ಅತ್ಯದ್ಭುತವಾದ ಪ್ರವಚನ.
  ಮೂರು ಹ೦ತಗಳ ದರ್ಶನ.
  ಗುರುಗಳಿಗೆ ಸಾಷ್ಟಾ೦ಗ ಪ್ರಣಾಮಗಳು..
  ಡಿ.ವಿ.ಜಿ.ಯವರ ಕಗ್ಗಗಳನ್ನು ಆತ್ಮಸ೦ಗಾತಿಗಳು ಎ೦ದು ಕರೆಯುವುದೆ, ಎಷ್ಟೆ೦ದು ಪ್ರೀತಿಸುವುದು, ಆತ್ಮಸ೦ಗತಿಗಳಾದ ಮೇಲೆ ಪ್ರೀತಿಸುವುದಕ್ಕೆ ಉಳಿಯುವುದಾದರು ಏನು..’
  .
  ಗುರುಗಳು ಬ೦ದಾಗಲೆಲ್ಲ ಪ್ರವಚನ ಕಾರ್ಯಕ್ರಮವನ್ನು ಪರಿಗಣಿಸಬೇಕು ಎ೦ದು ಪ್ರಾರ್ಥನೆ.
  .
  ಶ್ರೀ ಗುರುಭ್ಯೋ ನಮಃ

  [Reply]

  subhas Reply:

  Tammalli ondu vinanti dayavittu sampoorna pravachanavannu akshara roopadalli dayapalisi karana naanu mobile mulaka hareraam browse maduvudarinda pravachanavannu kelalu sadyavaguttilla

  [Reply]

  Raghavendra Narayana Reply:

  Indalla Naale yella pravachanagalu Lekhana roopadalli baruttade..
  .
  Samaya bahala bekaaguttade, Yellaru kai jodisabekaagide..
  .
  CDs of Chaturmasya and Durga Sapthasati are already available at math, will also be available at Viraat Pooje event I think..
  .
  Shri Gurubhyo Namaha

  [Reply]

 3. Raghavendra Narayana

  ಮನೆಯೊಳೋ ಮಠದೊಳೋ ಸಭೆಯೊಳೋ ಸ೦ತೆಯೊಳೊ |
  ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ ||
  ಗಣನೆಗೇರಲಿಕೆ೦ದು ಜನ ತಪಿಸಿ ತೊಳಲುವುದು |
  ನೆನೆಯದಾತ್ಮದ ಸುಖವ – ಮ೦ಕುತಿಮ್ಮ ||
  .
  ಅನ್ನದಾತುರಕ್ಕಿ೦ತ ಚಿನ್ನದಾತುರ ತೀಕ್ಷ್ಣ |
  ಚಿನ್ನದಾತುರಕ್ಕಿ೦ತ ಹೆಣ್ಣುಗ೦ಡೊಲವು ||
  ಮನ್ನಣೆಯ ದಾಹವೀಯೆಲ್ಲಕ೦ ತೀಕ್ಷ್ಣತಮ |
  ತಿನ್ನುವುದದಾತ್ಮವನೆ – ಮ೦ಕುತಿಮ್ಮ ||
  .
  ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ |
  ಗದ್ದಲವ ತು೦ಬಿ ಪ್ರಸಿದ್ದನಾಗುತಿಹೆ ||
  ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನೀ- |
  ನ್ನುದ್ಧಾರವೆಷ್ಟಾಯ್ತೊ? – ಮ೦ಕುತಿಮ್ಮ ||
  .
  “ತು೦ಬಾ ಮನಸ್ಸಿಗೆ ಪ್ರಭಾವ ಬೀರುತ್ತಕ್ಕ೦ತಹುದು..”
  .
  ————-
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಅಕ್ಕಿಯೊಳಗನ್ನವನು ಮೊದಲಾರು ಕ೦ಡವನು ?|
  ಅಕ್ಕರದ ಬರಹಕ್ಕೆ ಮೊದಲಿಗನದಾರು ?||
  ಲೆಕ್ಕವಿರಿಸಿಲ್ಲ ಜಗ ತನ್ನಾದಿಬ೦ಧುಗಳ |
  ದಕ್ಕುವುದೆ ನಿನಗೆ ಜಸ ? – ಮ೦ಕುತಿಮ್ಮ ||
  .
  ಸಿರಿಮಾತ್ರಕೇನಲ್ಲ, ಪೆಣ್ ಮಾತ್ರಕೇನಲ್ಲ |
  ಕರುಬಿ ಜನ ಕೆಸರುದಾರಿಯಲಿ ಸಾಗುವುದು ||
  ಬಿರುದ ಗಳಿಸಲಿಕೆಸಪ, ಹೆಸರ ಪರರಿಸಲೆಸಪ |
  ದುರಿತಗಳ್ಗೆಣೆಯು೦ಟೆ? – ಮ೦ಕುತಿಮ್ಮ ||
  .
  ಬೇಕು ಬೇಕದು ಬೇಕು ಬೇಕಿದೆನಗಿನ್ನೊ೦ದು |
  ಬೇಕೆನುತ ಬೊಬ್ಬಿಡುತಲಿಹ ಘಟವನಿದನು ||
  ಏಕೆ೦ದು ರಚಿಸಿದನೊ ಬೊಮ್ಮನೀ ಬೇಕು ಜಪ |
  ಸಾಕೆನಿಪುದೆ೦ದಿಗೆಲೊ – ಮ೦ಕುತಿಮ್ಮ ||
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಇಳೆಯಿ೦ದ ಮೊಳಕೆಯೊಗೆವ೦ದು ತಮತೆಗಳಿಲ್ಲ |
  ಫಲ ಮಾಗುವ೦ದು ತುತ್ತೂರಿ ದನಿಯಿಲ್ಲ ||
  ಬೆಳಕೀವ ಸೂರ್ಯಚ೦ದ್ರರದೊ೦ದು ಸದ್ದಿಲ್ಲ |
  ಹೊಲಿ ನಿನ್ನ ತುಟಿಗಳನು – ಮ೦ಕುತಿಮ್ಮ ||
  .
  ಶ್ರೀ ಗುರುಭ್ಯೋ ನಮಃ

  [Reply]

 4. Raghavendra Narayana

  “ಒ೦ದು ಗುರುವಿನ ಕಾರ್ಯ, ಕೇವಲ ಪ್ರಿಯವನ್ನು ಕೊಡುವುದಲ್ಲ ಹಿತವನ್ನು ಕೊಡುವುದು, ಒಳ್ಳೆದನ್ನು ಕೊಡಬೇಕು ಅದನ್ನ ಪ್ರಿಯವಾಗುವ ಹಾಗೆ ಕೊಡುವುದಾದರೆ ವಿಶೇಷ.”
  .
  “ನಮ್ಮ ಆತ್ಮಕ್ಕೆ ಅನ್ನಿಸಿದ ಕೆಲವು ಸ೦ಗತಿಗಳನ್ನ ಹೆಸರಿನ ಕುರಿತು ನಿಮ್ಮ ಜೊತೆ ಹ೦ಚಿಕೊ೦ಡಿದ್ದೇವೆ, ಆ ಹಾದಿಯಲ್ಲಿ ನಾವೆಲ್ಲರು ಸಾಗೋಣ.
  ಸರ್ವಾ೦ತರ್ಯಾಮಿ ಆಗಬೇಕು ನಾವು,
  ಅವಿನಾಶಿ ಆಗಬೇಕ ನಾವು,
  ಪ್ರಕಾಶಮಾನರಾಗಬೇಕು ನಾವು,
  ಸರ್ವೊನ್ನುತರಾಗಬೇಕು ನಾವು..”
  —————
  .
  ಪ್ರವಚನಾಮೃತವನ್ನು ಕರುಣಿಸುತ್ತಿರುವ ಗುರುಗಳಿಗೆ ಕೋಟಿ ಶರಣುಗಳು.
  ಶ್ರೀ ಗುರುಭ್ಯೋ ನಮಃ

  [Reply]

 5. Anuradha Parvathi

  ’ತಿನ್ನುವುದು ಆತ್ಮವನು’…. ತುಂಬಾ ಇಷ್ಟವಾದ ಮತ್ತು ಅತ್ಯಂತ ಪ್ರಿಯವಾದ ಸಾಲು. ಯಾವಾಗಲೂ ಎಚ್ಚರಿಕೆಯಿಂದ ಇರುವಂತೆ ಮಾಡುವ ಸಾಲು.

  [Reply]

 6. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಮೌನದ ಬಂಗಾರದಿಂದ ಮಾತಿನ ಬೆಳ್ಳಿಗೆ ಬಂದು, ಮಾತಿನ ಬೆಳ್ಳಿಯಿಂದ ನಾವಿರುವ ಕೆಸರಿನ ಕೊಳದವರೆಗೂ ಬಂದು ನಮ್ಮನ್ನುದ್ದರಿಸುವ ಜಗದೋದ್ದಾರನೆ …. ನಾವೆಲ್ಲಾ ನಿನ್ನ ಸೇವೆಯನ್ನು ಹೇಗೆ ಮಾಡಬಹುದೆಂದು ಕಲಿಸಿಕೊಡು…….

  [Reply]

  Jayashree Neeramoole Reply:

  gurucharanagalige ananta pranaamagalu.

  gurugalu namage kalisalu maaduttiruva prayatnagalige holisidare, gurugala vegakke holisidare naavu shishyaru tumba… nidhana gatiyalli iruvante annisuttide. mannisi anugrahisi daari tori munnadesi.

  [Reply]

  seetharama bhat Reply:

  ಹರೇರಾಮ್,

  ನಮ್ಮದೋ ಬರೇ ಉದ್ವೇಗ,ಆವೇಗ
  ಅವರದೋ ಸುವೇಗ ನಮಗೆ ಸಿಕ್ಕಿಧರೆ ಸುಯೋಗ
  ಆಗಲಿ ನಮ್ಮಮೇಲೊ೦ದು ಪ್ರಯೋಗ
  ಅದೇ ನಮಗೆ ಪ್ರಯಾಗ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಹರೇ ರಾಮ,
  ತುಂಬಾ ಚೆನ್ನಾಗಿ ಹೇಳಿದ್ದೀರಿ. ಧನ್ಯವಾದಗಳು. ನಾವೆಲ್ಲಾ ಪ್ರಶಾಂತ ಚಿತ್ತರಾಗಿ ಗುರುಗಳ ಕೈ ಹಿಡಿದುಕೊಂಡು ಗುರುಗಳನ್ನೇ ಧ್ಯಾನಿಸುತ್ತಾ ಗುರುಗಳ ಗಾಡಿಯಲ್ಲಿ ಮುಂದೆ ಸಾಗೋಣ….. ಸುವೇಗದಿಂದ ಸಾಗಿ ಪ್ರಯಾಗವನ್ನು ಸೇರೋಣ…..

  [Reply]

 7. Raghavendra Narayana

  Hundreds of people, thousands of thoughts in the external mind… In the internal mind, it is only Guru and God.
  .
  It is only Search and Path…? It is only one light?
  Pathfinder? Path shower?
  .
  Shri Gurubhyo Namaha

  [Reply]

 8. nandaja haregoppa

  ಹರೇ ರಾಮ

  ಸಿರಿಯು ಸ೦ಪದ ಬೇಡ ಯಾವ ವೈಭವ ಬೇಡ

  ನಿಮ್ಮ ಕರುಣೆಯು ಒ೦ದೆ ಸಾಕೆನೆಗೆ ತ೦ದೆ

  ನಿಮ್ಮ ಈ ಮಕ್ಕಳನು ಪ್ರೇಮದಲಿ ನೀ ನೋಡು

  ಈ ಜಗವು ಎ೦ದೆ೦ದು ನಗುವ೦ತೆ ನೀ ಮಾಡು

  ನಿನಲುಮೆ ನಮಗಿರಲಿ ತ೦ದೇ …….

  [Reply]

 9. laxmi

  ಹಸಿವಾದಾಗ ಆಹಾರ ಸೇವಿಸಿದ ಮೇಲೆ ತೃಪ್ತಿ ಉ೦ಟಾಗಿ ಸಾಕು ಎನ್ನುತ್ತೇವೆ…ಆದರೆ ಜ್ನಾನದ ಹಸಿವೆಗೆ ಎಸ್ತೇ ಪ್ರವಚನಗಳನ್ನು ಕೇಳಿದರೂ ಇನ್ನೂ ಕೇಳಬೇಕೆ೦ಬ ಆಸೆ ಹೆಚ್ಚುತ್ತದೆ…….ಹೀಗೆಯೇ ನಿರ೦ತರ ಪ್ರವಚನ೦ಗಳ ಕೇಳುವ ಮನ ನಮಗಿರಲಿ…….. “ಹರೇ ರಾಮ”

  [Reply]

 10. seetharama bhat

  ಹರೇರಾಮ್,

  ತ್ರಪ್ತಿ ಇಲ್ಲ ಈ ಹೆಸರು ನಿನ್ನದಾಗಿರೆ ಚೆನ್ನ
  ನಿನ್ನೊಲುಮೆ ಬರಲು ಹೆಸರೇನು ಚಿನ್ನ
  ನಾನು ನೀನೆನ್ನದೆ ಐಖ್ಯ ಮಾಡಿಕೊ ಎನ್ನ

  [Reply]

 11. mayakk

  HESARU…………
  MAYEE……………
  …………..

  MANAKKE …. THUMBAA THIDDI THEEDUVANTHE ITHU…

  INNU INNU KELUVANTHE ………..

  GURUDEVA………….

  HERERAMA

  [Reply]

 12. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಹೇ ರಾಮ! ಸಚ್ಚಿದಾನಂದ ಸ್ವರೂಪ….ಪಾಮರನ ಮನೆಗೆ ಸೌಭಾಗ್ಯ ಬಂದಂತೆ ನೀ ನಮ್ಮ ಮನೆಗೆ, ಮನಕೆ ಬಂದಿರುವೆ. ನಾವಾದರೋ ಇನ್ನೂ “ಶವಾಲಂಕಾರ” ಮಾಡುವುದರಲ್ಲೇ ನಿರತರಾಗಿದ್ದೇವೆ. ಸತ್ಕಾರ,ಅಲಂಕಾರ,ಪೂಜೆ ಮಾಡುವುದು ಹಾಗಿರಲಿ…. ನಿನ್ನ ಮೂಲ ಸ್ವರೂಪದಲ್ಲಿ ಇರಲಿಕ್ಕೋ ಬಿಡುತ್ತ ಇಲ್ಲ……ರಾಮ! ನೀನು ಸ್ಥಿರವಾಗಿ ನೆಲೆಗೊಳ್ಳಲು ನಿನ್ನ ಪೂಜೆಯನ್ನು ನಿನಗೆ ತೃಪ್ತಿಯಾಗುವಂತೆ ಮಾಡಲು ಕಲಿಸಿಕೊಡು…..

  [Reply]

 13. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಹರೇ ರಾಮ,
  ಯಾವ ಹೆಸರೂ, ಯಾವ ಕೀರ್ತಿಯೂ ನಮಗೆ ಬೇಡ…… ನಾವೆಲ್ಲಾ ಒಂದಾಗಿ ಗುರುಗಳ ಕೊರಳಿಗೆ ಹೂವಿನ ಮಾಲೆಯಾಗೋಣ…. ಹೂ ಮಾಲೆಯಲ್ಲಿ ಕೆಲವು ಅವ್ಯಕ್ತವಾಗಿ ಸುಗಂಧವನ್ನು ಸೂಸುತ್ತಿರಬಹುದು. ಇನ್ನು ಕೆಲವು ವ್ಯಕ್ತವಾಗಿ ಶೋಭೆಯನ್ನು ಹೆಚ್ಚಿಸುತ್ತಿರಬಹುದು….. ಎಲ್ಲವೂ ಸೃಷ್ಟಿ ನಿಯಮದಂತೆ ಅದರದರ ಕರ್ತವ್ಯ ಮಾಡುತ್ತಿರಬಹುದು. ಯಾವ ಹೂವು ಶ್ರೇಷ್ಠ ಎಂದು ಹೇಗೆ ಹೇಳೋಣ…..ನಾವೆಲ್ಲ ಒಂದಾಗಿ ಗುರುಗಳ ಕೊರಳಿನ ಹೂಮಾಲೆಯಾದರೆ ಅದುವೇ ಶ್ರೇಷ್ಠ.

  [Reply]

  Raghavendra Narayana Reply:

  ಅದ್ಭುತ. ಖ೦ಡಿತ.
  .
  ಶ್ರೀ ಗುರುಭ್ಯೋ ನಮಃ

  [Reply]

 14. gopalakrishna pakalakunja

  ಹರೇ ರಾಮ ,
  ಮೊನ್ನೆಯಿಂದಲೇ ಪ್ರಯತ್ನಿಸುತ್ತಿದ್ದರೂ ಈ ಪ್ರವಚನವನ್ನಾಲಿಸಲು ಸಾದ್ಯವಗುತ್ತಿಲ್ಲವಾದ್ದರಿಂದ
  ಕಳಕಳಿಯಿಂದ ಕೇಳುವೆನು ಕೇಳಿಸಿಕೊಂಡಿರುವ ಪುಣ್ಯಶಾಲಿಗಳನು ಇದನು ಕೇಳುವ ಬಗೆಯೆಂತು ?
  ದಯವಿಟ್ಟು ಸಹಕರಿಸುವಿರಾ ,ಸ್ವರವೇನೇನೂ ತಿಳಿಯುತ್ತಿಲ್ಲ ,ಏನೇನೂ ಕೇಳುತ್ತಿಲ್ಲ…

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಹರೇ ರಾಮ,
  ನಿಮಗೆ ಕೇಳಿಸದೆ ಇರುವುದರ ಕಾರಣವೇನೋ….. ತಿಳಿಯದು. ಆದರೂ ನನಗೆ ಹಲವು ಸಲ ಇಂತಹ ಸಂದರ್ಭಗಳು ಎದುರಾದಾಗ ನನ್ನ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.

  “ಈ ಹರೇರಾಮದಲ್ಲಿ ಪ್ರತಿಯೊಂದು ಪ್ರವಚನವೂ, ಪ್ರತಿಯೊಂದು ಲೇಖನವೂ , ಪ್ರತಿಯೊಬ್ಬರ ಪ್ರತಿಕ್ರಿಯೆಯೂ ನಮ್ಮ ನಿತ್ಯ ಜೀವನದಲ್ಲಿ ನಮಗೆ ಬರುವ ಸಂದರ್ಭಕ್ಕನುಗುಣವಾಗಿ, ನಮಗೆ ಮಾರ್ಗದರ್ಶಕವಾಗಿ ಸಿಗುತ್ತದೆ. ನಾವು ಸೂಕ್ಷ್ಮವಾಗಿ ಗಮನಿಸಿದರೆ ಈ ವಿಷಯ ತಿಳಿಯುತ್ತದೆ. ಕೆಲವೊಮ್ಮೆ ಅರ್ಥವಾಗದಿದ್ದಾಗ ಗುರುಗಳನ್ನು ಮನಸ್ಸಿನಲ್ಲಿ ಧ್ಯಾನಿಸಿ “ಅರ್ಥಮಾಡಿಸಿ” ಎಂದು ವಿನಮ್ರತೆಯಿಂದ ಬೇಡಿದರೆ ಅರ್ಥವಾಗುತ್ತದೆ. ಕೆಲವೊಂದು ಪ್ರವಚನಗಳು ಕೇಳದೆ ಇರುವ ಸಂದರ್ಭದಲ್ಲಿ ಗುರುಗಳನ್ನು ಪ್ರಾರ್ಥಿಸಿದರೆ ಯೋಗ್ಯ ಸಮಯದಲ್ಲಿ ನಮಗೆ ಅವುಗಳನ್ನು ಕೇಳಲು ಅನುಕೂಲ ಒದಗಿ ಬರುತ್ತದೆ.”

  ನನ್ನ ಅನುಭವವು ಯಾರಿಗಾದರೂ ಉಪಯೋಗವಾಗುವುದಿದ್ದರೆ ಉಪಯೋಗವಾಗಲಿ ಎನ್ನುವ ದೃಷ್ಟಿಯಿಂದ ಮಾತ್ರ ಇಲ್ಲಿ ಇದನ್ನು ಹಂಚಿಕೊಳ್ಳುತ್ತಿದ್ದೇನೆ.

  [Reply]

 15. Aneesh P

  ಮನಸ್ಸಿಗೆ ತುಂಬ ಹಿತ ಕೊಟ್ಟ ಬಹಳ ಅರ್ಥಗರ್ಭಿತವಾದ ಆಶೀರ್ವಚನ…ನಮ್ಮ ದೇಹದ 2 ಅಲಂಕಾರ ಗಳ ಬಗ್ಗೆ ಕೊಟ್ಟ ನಿದರ್ಶನ, ವಿವರಣೆ ಅರ್ಥಪೂರ್ಣ…. ಆ ದಿನ ಕೇಳಿದ ಶೋತೃಗೋ ಧನ್ಯರು…
  ಹರೇ ರಾಮ್.

  [Reply]

 16. Raghavendra Narayana

  ಈ ಕೆಳಗಿನ ಸಾಲುಗಳು ಯಾವ ಹರೇರಾಮದ ಯಾವ ಲೇಖನದ್ದು ಗೊತ್ತೆ ನಿಮಗೆ?
  ಕಣ್ಣು ಬೇಕಣ್ಣಾ ಕಣ್ಣು-ಭಾಗ ೧ – ರಾಜ್ಯ ಬ್ಲಾಗ್ ಅಡಿ… ಓದಿಲದಿದ್ದರೆ, ಈಗಲೇ ಓದಿ, ಓದಿದ್ದರೆ ಮತ್ತೇ ಓದಿ.
  —————-
  “ದೃಷ್ಟಿಗಳು ಮೂರು ವಿಧ..
  ಸ್ಥೂಲದೃಷ್ಟಿ, ಸೂಕ್ಷ್ಮದೃಷ್ಟಿ ಮತ್ತು ಪರಾದೃಷ್ಟಿ ಎಂಬುದಾಗಿ..!

  * ಸ್ಥೂಲದೃಷ್ಟಿಗೆ ಗಂಗೆ ಬರಿಯ ನೀರು ಮಾತ್ರ..
  o ಸೂಕ್ಷ್ಮದೃಷ್ಟಿಯಿಂದ ನೋಡಿದರೆ ,ಪಾಪ ಕಳೆಯುವ, ಪರಮಪದವೀಯುವ ಮಹಾದೇವತೆಯವಳು..
  + ಪರಾದೃಷ್ಟಿಯನ್ನು ತೆರೆದರೆ, ಆಕೆ ಪರಿಪೂರ್ಣ ಪರ೦ಜ್ಯೋತಿಯೀ ಸರಿ.
  * ಶ್ರೀರಾಮ ಮನುಷ್ಯನಾಗಿ ಕಾಣುವುದು ಸ್ಥೂಲ ದೃಷ್ಟಿಗೆ..
  o ಸೂಕ್ಷ್ಮದೃಷ್ಟಿಯಲ್ಲಿ ಆತ ಶ್ರೀಮನ್ನಾರಾಯಣ..
  + ಪರಾದೃಷ್ಟಿಗಾದರೋ ನಿರ್ಗುಣ ನಿರ್ವಿಕಾರವಾದ ಬ್ರಹ್ಮ ಜ್ಯೋತಿಯೇ ಅವನು..!
  * ನಮ್ಮ ಒಡನಾಡಿಗಳನ್ನು ನಾವು ನೋಡುವುದು ಸ್ಥೂಲ ದೃಷ್ಟಿಯಿಂದ, ಆದುದರಿಂದ ಅವರು ಮನುಷ್ಯರಾಗಿ ಕಾಣುತ್ತಾರೆ.!
  o ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ ಈಶ್ವರನ ಅಂಶಗಳೇ ಆದ ಜೀವಿಗಳವರು..! ಈಶ್ವರಾಗ್ನಿಯಿಂದ ಹೊರಹೊಮ್ಮಿದ ಕಿಡಿಗಳು..!!ಈಶ್ವರ ಸಾಗರದ ತರಂಗಗಳು ..!!!
  + ಪರಾ ದೃಷ್ಟಿಗೆ ಪರಮಾತ್ಮನ ಸ್ವರೂಪಿಗಳೇ ಅವರು..!
  ನಮ್ಮ ದೃಷ್ಟಿಯನ್ನು ಸ್ಥೂಲದಿಂದ ಸೂಕ್ಷ್ಮಕ್ಕೆ ಎತ್ತರಿಸಿದರೆ(UPGRADE ಮಾಡಿದರೆ),ಈ ಜಗವೆಲ್ಲ ದೇವತಾಮಯ..!
  ಶಂಕರಾಚಾರ್ಯರ ಹಾಗೆ ಪರಾದೃಷ್ಟಿಯನ್ನು ಅಳವಡಿಸಿಕೊಂಡರಂತೂ , ಪರಮಾತ್ಮನೆಂಬ ಪರಮಾನಂದದ ಹೊರತು ಬೇರೇನೂ ಕಾಣದು..!”
  .
  ಶ್ರೀ ಗುರುಭ್ಯೋ ನಮಃ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಇಂತಹ ಸಾಲುಗಳನ್ನು ನೆನಪಿಸಿಕೊಂಡಾಗ ಕಣ್ಣಲ್ಲಿ ನೀರು ತುಂಬಿ ಬರುತ್ತದೆ. ಅದೆಷ್ಟು ಸಮಯದಿಂದ, ಅದೆಷ್ಟೋ ತರದಲ್ಲಿ ನಮಗೆ ಶಿಷ್ಯರಿಗೆ ಅರ್ಥ ಮಾಡಿಸುವುದಕ್ಕೊಸ್ಕರ ಗುರುಗಳು ಎಳೆ ಎಳೆಯಾಗಿ ಬಿಡಿಸಿ ಬಿಡಿಸಿ ಹೇಳಿಕೊಡುತ್ತಿದ್ದಾರೆ….. ನಾವು ಮಾತ್ರ ಇನ್ನೂ “ದೃಷ್ಟಿಯನ್ನು ಬದಲಿಸಲು” ಪ್ರಯತ್ನ ಪಡುತ್ತ ಇಲ್ಲ….. ಅಥವಾ ಪ್ರಯತ್ನ ಸಾಲದು….. ಶ್ರೀರಾಮನನ್ನೂ ಕೇವಲ ಮನುಷ್ಯನಾಗಿ ಕಾಣುವಷ್ಟರ ಮಟ್ಟಿಗೆ ನಮ್ಮ ದೃಷ್ಟಿಗೆ ಧೂಳೆರಚಿ ಮಂಕಾಗಿಸುತ್ತದೆ ಮಾಯೆ….. ಶ್ರೀರಾಮ……. ಕರುಣೆ ತೋರು……. ದೃಷ್ಟಿಯ ಮಲಿನವನ್ನೆಲ್ಲ ಕರಗಿಸಿ ದಿವ್ಯ ದೃಷ್ಟಿಯನ್ನು ಕರುಣಿಸು……

  [Reply]

Leave a Reply

Highslide for Wordpress Plugin