ಗಿರಿನಗರದ ಶ್ರೀರಾಮಶ್ರಮದಲ್ಲಿ ನೆಡೆಯುತ್ತಿರುವ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಛಾತ್ರಚಾತುರ್ಮಾಸ್ಯದಲ್ಲಿ ನಾಳೆ (೦೫/೦೯/೨೦೧೫) ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಲೆಗಳಿಂದ ಶ್ರೀಕೃಷ್ಣಾರಾಧನೆ ಸಂಪನ್ನವಾಗಲಿದೆ.

ವಿಶಿಷ್ಟರೀತಿಯಲ್ಲಿ ವೃಂದಾವನದ ಮರುಸೃಷ್ಟಿ, ದಧಿಮಥನ,ಜಡೆಕೋಲಾಟ, ಮಾತೆಯರು ಮೊಸರುಕಡೆಯುವಾಗ ಬೆಣ್ಣೆ ಕದಿವ ಬಾಲಕೃಷ್ಣರ ದಿವ್ಯಕ್ರೀಡೆ ನೆಡೆಯಲಿದ್ದು, ಮಧ್ಯಾನಾನಂತರ ಕುಮಾರಿ ಶ್ರದ್ಧಾ ಇವರಿಂದ ಹರಿಕಥೆ, ಮಕ್ಕಳಿಂದ ಪ್ರತಿಭಾದರ್ಶನ ಹಾಗು ಮಾತೆಯರಿಂದ ಭಜನಾ ಕಾರ್ಯಕ್ರಮಗಳು ಸಂಪನ್ನವಾಗಲಿದೆ.

ಹಾಗೆಯೇ, ರಾತ್ರಿ ಕೃಷ್ಣ ಜನನ ಸಮಯದಲ್ಲಿ ಬಾಲಮುಕುಂದನನು ತೊಟ್ಟಿಲಲ್ಲಿಟ್ಟು ಮಾತೆಯರು ತೂಗುವ ವಾತ್ಸಲ್ಯದುತ್ಸವ ವಿಶಿಷ್ಟ ಪರಿಕಲ್ಪನೆಯಲ್ಲಿ ವಿಶೇಷವಾಗಿ ಮೂಡಿಬರಲಿದೆ. ಶ್ರೀಗಳ ಚಾತುರ್ಮಾಸ್ಯದ ಈ ಶುಭಸಂಧರ್ಭದಲ್ಲಿ ನೆಡೆಯಲಿರುವ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಸಾವಿರಾರು ಶಿಷ್ಯಭಕ್ತರು ಆಗಮಿಸುವ ನಿರೀಕ್ಷೆಯಿದೆ.

ದಿವಿಯಿಂದ ಭುವಿಗಿಳಿದ ಪರಮಪುರುಷನ ಜನ್ಮೊತ್ಸವ
 ಶ್ರೀಕೃಷ್ಣಜನ್ಮಾಷ್ಟಮೀ ಕಾರ್ಯಕ್ರಮ

ದೇಶ: ಶ್ರೀರಾಮಾಶ್ರಮ, ಬೆಂಗಳೂರು
ಕಾಲ: 05/09/2015

Invitation

Invitation

Facebook Comments