ಶ್ರೀ  ಕ್ಷೇತ್ರ ಗೋಕರ್ಣದ  ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಇಂದು ೩೧ ಶನಿವಾರದಂದು ಮಹಾರಾಷ್ಟ್ರ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಎಸ್.ಎಸ್.ಶಿಂಧೆ ತಮ್ಮ ಕುಟುಂಬ ಸಮೇತ ಆಗಮಿಸಿ, ಶೀ ದೇವರನ್ನು ಅರ್ಚಿಸಿದರು. ಶ್ರೀ ದೇವಾಲಯದ ಪರಿಸರ , ಪೂಜಾ  ವಿಧಾನಗಳನ್ನು  ಪ್ರಶಂಸಿದ ಮಾನ್ಯ ನ್ಯಾಯಾಧೀಶರು ಸ್ಥಳೀಯ ಕ್ಷೇತ್ರದ ಮಹತ್ವವನ್ನು ಆಸಕ್ತಿಯಿಂದ ಕೇಳಿ ತಿಳಿದುಕೊಂಡರು.
ಶ್ರೀ ದೇವಾಲಯದ ಆಡಳಿತದ ಪರವಾಗಿ ಜಿ.ಕೆ.ಹೆಗಡೆ ನ್ಯಾಯಮೂರ್ತಿಗಳನ್ನು ಸನ್ಮಾನಿಸಿದರು. ವೆ.ಮು. ರಮೇಶ್ ಪ್ರಸಾದ ಪೂಜಾ ವಿಧಾನಗಳನ್ನು ನೆರವೇರಿಸಿದರು. ಶ್ರೀ ದೇವಾಲಯದ  ಅಮೃತಾನ್ನ ವಿಭಾಗದಲ್ಲಿ ಪ್ರಸಾದ ಸ್ವೀಕರಿಸಿದ ಶ್ರೀ ಶಿಂಧೆ ಅಲ್ಲಿ ಊಟ ಮಾಡುತ್ತಿರುವ ಶಾಲಾ  ಮಕ್ಕ್ಕಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು.
Facebook Comments