LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶ್ರೀಗಳ ವಿರಾಟ್ ಆಶೀರ್ವಚನದ ತುಣುಕುಗಳು

Author: ; Published On: ರವಿವಾರ, ಮಾರ್ಚ 27th, 2011;

Switch to language: ಕನ್ನಡ | English | हिंदी         Shortlink:

ಹರೇ ರಾಮ

ವಿಶ್ವದ ವಿರಾಟ್ ಪುರುಷ, ನಮ್ಮ ದೇಹದಲ್ಲಿ ಸ್ವರಾಟ್ ಪುರುಷನಾಗಿ ವಿಹರಿಸುವ ರಾಮ…

ಇತ್ತ  ದೇವರುಗಳು, ಅತ್ತ ಜೀವರುಗಳು…
ಇತ್ತ ಪರಮಾತ್ಮ, ಅತ್ತ ಸಂಸಾರ…
ಮಧ್ಯೆ ನಾವು..!

ನಿನ್ನೆಬೆಳಗ್ಗೆ ನಡೆದದ್ದು ೯೯೯೯ ನೆಯ ಪೂಜೆ. ಅದರಲ್ಲಿನ ಅಂಕೆಗಳನ್ನು  ಕೂಡಿದರೆ ೩೬ ಬರುವುದು. ನಾವು ಮೂವತ್ತಾರನೆಯ ಪೀಠಾಧಿಪತಿಗಳು…!
ಹಾಗೆಯೇ ನಾವು ೯ನೆಯ ರಾಘವೇಶ್ವರರು…!
ಈ ಎರಡು ದಿನಗಳಲ್ಲಿನ ಒಂದೊಂದು  ಪೂಜೆ ಹತ್ತು ಸಾವಿರ ಪೂಜೆಗೆ ಸಮಾನ, ಯಾಕೆಂದರೆ ಅದನ್ನು ೧೦೦೦೦ ಜನ ಕೂಡಿ ಮಾಡಿದ್ದೇವೆ…

ಸಾವಿರ ಕಂಠಗಳು, ಒಂದು ಕರ…
ದೇವರ ಸನ್ನಿಧಿಯಲ್ಲಿ ನಾವು ಒಂದಾದೆವು, ಇನ್ನೆಂದೂ ಬೇರೆಯಾಗುವುದಕ್ಕೆ ಸಾಧ್ಯವಿಲ್ಲ…
ಪರಮಾತ್ಮನ ಸನ್ನಿಧಿಯಲ್ಲಿ “ಬೇರೆಯಾಗುವುದು”ಎಂಬ ಪದವಿಲ್ಲ..!
ಪೂಜೆಯಲ್ಲಿ ನೀವು ಹೇಳುವುದು, ನಾವು ಮಾಡುವುದು…

“ರಾಮಕಥೆ – ನಮ್ಮ ಬದುಕಿನ ಮಹತ್ತರ ತಿರುವು”..!

ಇಷ್ಟು ಹೊತ್ತು ಕುಳಿತು ಶ್ರಮ ಪಟ್ಟ ನಿಮಗೆಲ್ಲ ಈ ದಿನ ಎಣ್ಣೆ ಹಚ್ಚಿ ಸ್ನಾನ ಮಾಡಿಸುವ ತಾಯಿ ನಾವಾಗಬೇಕಿತ್ತು, ಎಂದು ನಮಗನಿಸುತ್ತಾ ಇದೆ…

ಎಂದೂ ಆಗದಷ್ಟು ಅರ್ಚನೆಗಳು ಈ ಎರಡು ದಿನಗಳಲ್ಲಿ ನಡೆದಿದೆ.  ೧ ಗಂಟೆ ೨೦ ನಿಮಿಷದಲ್ಲಿ ೧ ಕೋಟಿ ಕುಂಕುಮಾರ್ಚನೆ, ೧ ಕೋಟಿ ತುಳಸಿ ಅರ್ಚನೆ ನಡೆದಿದೆ..!

೧೬,೬೬೧ ಬಾರಿ ರುದ್ರ ಪಠಿಸಿದರೆ ಅತಿರುದ್ರ, ಆದರೆ ಇಂದು ಮುಕ್ಕಾಲು ಗಂಟೆಯಲ್ಲಿ ೨೨,೩೬೫ ಬಾರಿ ರುದ್ರ ಪಠಿಸಲಾಗಿದೆ, ‘ವಿಶ್ವ ವಿಕ್ರಮ’ ಇದು..!

ಕೌಸಲ್ಯೆ ರಾಮನಿಗಾಗಿ ಕಾದಂತೆ ಅಶೋಕೆಯೂ ಕಾದಿತ್ತು ರಾಮನಿಗಾಗಿ.. ಎಷ್ಟೋ ಕಾಲದಿಂದ, ಎಷ್ಟೋ ಶತಮಾನಗಳಿಂದ ಕಾದಿತ್ತು ಅಶೋಕೆ…

ಇಲ್ಲಿ ಮೊದಲು ಇದ್ದಿದ್ದು ಗೇಯರು. ಈಗ ಇರುವುದು ಗುರು…

ಶಂಕರಾಚಾರ್ಯರು ಹಲವು ಕಡೆ ಮಠಗಳನ್ನು ಸ್ಥಾಪನೆ ಮಾಡಿದ್ದಾರೆ. ಆದರೆ ಅಶೋಕೆಯ ಪರಂಪರೆ ಮಾತ್ರ ಈ ವಿಶ್ವದಲ್ಲಿ  ‘ಅವಿಚ್ಛಿನ್ನ’ವಾಗಿ ಉಳಿದಿದೆ..!

ಕರಪತ್ರದಲ್ಲಿ  ‘ಹತ್ತು ಸಾವಿರದೆಡೆಗೆ’ ಅಂತ ಬರೆದಿತ್ತು…
ಅಂದರೆ ಹತ್ತು, ಸಾವು ಇರದ ಕಡೆಗೆ… ಅಮೃತತ್ವದ ಕಡೆಗೆ..!

ಬೇಸಿಗೆಯಲ್ಲಿ ನದಿ ಬತ್ತಿದಂತೆ ಕಂಡರೂ ಅದು ಬತ್ತಿರುವುದಿಲ್ಲ. ಹಾಗೆಯೇ ಅಶೋಕೆಯ ಮಠವೂ ನಾಶವಾಗಿಲ್ಲ. ಅದು ಸುಪ್ತವಾಗಿತ್ತು. ಈ ಸಮಯ ಬಂದೊಡನೆ ಅದು ವಿಶ್ವರೂಪವಾಗಿ ಪ್ರಕಟವಾಯ್ತು…

ಹನುಮಾನ್ ಎಂದರೆ ದವಡೆಯುಳ್ಳವನು.  ಆತನಿಗೆ ಒಂದು ದವಡೆ ಹೋಯ್ತು, ನೂರು ದವಡೆ ಬಂತು…
ಹಾಗೆಯೇ ಅಶೋಕೆಗೆ ಒಂದು ಕಡೆ ಹಾನಿಯಾದರೆ ನೂರು ಕಡೆಯಿಂಡ ಶಕ್ತಿ ಬರುತ್ತೆ, ಅದಕ್ಕೆ ಸಾಕ್ಷಿ ಈ ಕಾರ್ಯಕ್ರಮ..!

ಕಡು ಬಡವನೊಬ್ಬ ದೇವರ ಕುರಿತು ತಪಸ್ಸು ಮಾಡಿ ‘ಆನೆ’ ಕೊಡು ಅಂತ ಕೇಳುತ್ತಾನೆ…
ದೇವರು, ಆನೆ ಯಾಕೆಂದು ಕೇಳಿದಾಗ ಆತ ಹೇಳುತ್ತಾನೆ-
ಆ – ಎಂದರೆ ಆರೋಗ್ಯ
ನೆ – ಎಂದರೆ ನೆಮ್ಮದಿ ಎಂದು.
ಶರೀರಕ್ಕೆ ಆರೋಗ್ಯ ಮನಸ್ಸಿಗೆ ನೆಮ್ಮದಿ ಬೇಕು…
ನಮ್ಮ ಗುರು ಪೀಠ  ಸಾವಿರ ಸಾವಿರ ವರ್ಷಗಳಿಂದ ಸಮಾಜಕ್ಕೆ ಅಂಥ ‘ಆನೆ’ಯನ್ನು ಕೊಡ್ತಾ ಬಂದಿದೆ…
ಈ ಸಭಾಂಗಣದಲ್ಲಿಟ್ಟ ೩೫ ಆನೆಗಳು ಅದರ ಪ್ರತೀಕ..!

ರಾಮ ಜಗತ್ತಿಗೆ ಒಬ್ಬನೇ, ನಮ್ಮ ರಾಮನ ವಿಗ್ರಹವೂ ಹಾಗೆಯೆ…
ಆತನ ಒಂದು ಕೈ ಊರ್ಧ್ವ ಮುಖ, ಇನ್ನೊಂದು ಅಧೋಮುಖವಾಗಿದೆ.
ಒಂದು ದಿವಿಯತ್ತ, ಇನ್ನೊಂದು ಭುವಿಯತ್ತ…

ಹೆಬ್ಬೆರಳು ಪರಮಾತ್ಮ, ತೋರುಬೆರಳು ಜೀವಾತ್ಮ..
ಜೀವಾತ್ಮ ಪರಮಾತ್ಮನನ್ನು ಸೇರಿದಾಗ ವೃತ್ತ ಪರಿಪೂರ್ಣವಾಗುತ್ತದೆ – ಚಿನ್ಮುದ್ರೆಯ ಸಂದೇಶವಿದು..!

ಮೌಳಿಸ್ಥಾನದಲ್ಲಿ ಚಂದ್ರನಿರುವಾತನೇ – ಚಂದ್ರಮೌಳೀಶ್ವರ..
ಅಂತೆಯೇ ನಮ್ಮ ಚಂದ್ರಮೌಳೀಶ್ವರ ಲಿಂಗವು ಹೆಸರಿಗೆ ಅನುರೂಪವಾಗಿದೆ…
ಸರಿಯಾಗಿ ಗಮನಿಸಿ ನೋಡಿದರೆ,  ಆ ಲಿಂಗದಲ್ಲಿ ಸಂಪೂರ್ಣ ಭಾರತದ ಚಿತ್ರವಿದೆ..!
ಚಂದ್ರಮೌಳೀಶ್ವರ ಲಿಂಗದ ಹಿಂಭಾಗದಲ್ಲಿ ಸುಸ್ಪಷ್ಟವಾಗಿ ಆತ್ಮಲಿಂಗದ ಛಾಯೆ ಮೂಡಿದೆ..!

ಇಲ್ಲಿನ ರಾಜರಾಜೇಶ್ವರಿಯ ಶ್ರೀಚಕ್ರವೂ ಅತ್ಯಂತ ಅಪರೂಪವಾದದ್ದು…
ಗಣಪತಿಯ ಮೂರ್ತಿಯೂ ಗೋಕರ್ಣದಲ್ಲಿರುವ ಗಣಪತಿಯಂತೆಯೆ ಇದೆ..!
ಹಾಗಾಗಿ ನಾವು ಸಲ್ಲಿಸುವ ಪೂಜೆಯೆಲ್ಲಾ ಗೋಕರ್ಣಕ್ಕೆ ಸಲ್ಲುತ್ತದೆ..
ಪೂರ್ಣಸಾನ್ನಿಧ್ಯದ ಈ ವಿಗ್ರಹಗಳು ಶತಶತಮಾನಗಳಿಂದ ಲೆಕ್ಕಕ್ಕೇ ಸಿಗದಷ್ಟು ಬಾರಿ ಪೂಜಿಸಲ್ಪಟ್ಟಿವೆ…

‘ಅಶೋಕೆಗೆ ಬರುವ ರಸ್ತೆ ಚಿಕ್ಕದಾಯ್ತು’ ಅಂತ ಅನೇಕರ ಅಭಿಪ್ರಾಯ…
ಆದ್ರೆ ಅಶೋಕೆಗೆ ಬರುವ ರಸ್ತೆ ಸಣ್ಣದಾದ್ದಲ್ಲ, ಬರುವಶಿಷ್ಯರ ಸಂಖ್ಯೆ ಜಾಸ್ತಿಯಾದದ್ದು..!

ಪೂರ್ವಂ ನ ಭೂತಃ – ಅಭೂತಪೂರ್ವ ಕಾರ್ಯಕ್ರಮ ಇದಾಗಿದೆ..!
ಪಶ್ಚಿಮ ಸಮುದ್ರದ ಅಶೋಕೆ ಪೂರ್ವ ಸಮುದ್ರದ ಕಲ್ಕತ್ತಾವನ್ನು ಸೆಳೆದಿದೆ…

ದೇವ, ಜೀವ, ಗುರು ಸಂಗಮ – ಈ ತ್ರಿವೇಣಿ ಸಂಗಮ ಎಂದಿಗೂ ಆಗುತ್ತಾ ಇರಲಿ…

25 Responses to ಶ್ರೀಗಳ ವಿರಾಟ್ ಆಶೀರ್ವಚನದ ತುಣುಕುಗಳು

 1. mayakk

  HARERAAMAAA,,,,,,,,,,,,,,,,,

  HATHTHU SAVIRADEDEGE,,,,,,

  ;;HATHTHU,,,,SAVU,,,IRADA,,KADEGE,,,,,
  AMARATHVADA KADEGE,,,,,,,,,

  HARERAMA,,,,,HARERAMA,,,HARERAMA,,,,,

  ;;;A GURIYEDEGE DARI THORUTHIRVA GURUDEVA,,,,,,,;;;

  NAVEE DHANYARUUU;;;;;NAVE BHAGYAVANTHARU;;;;;

  NAVELLA GURUTHORIDA GURIYATHTHA SAGONA,,,,,,,

  GURUBHYONAMAHA,,,,,,,

  HARERAMA,,,

  [Reply]

 2. shobha lakshmi

  ಹರೇರಾಮ….ವಿರಾಟ್ ಪೂಜೆ ಪ್ರತಿ ಮನೆಯಲ್ಲೂ ಪ್ರತಿ ಮನದಲ್ಲೂ ನಡೆಯಿತು ನೇರಪ್ರಸಾರದಿ೦ದ…ಇದು ನಮ್ಮ ಭಾಗ್ಯ..ಧನ್ಯಳಾದೆ…ತು೦ಬ ಅದ್ಭುತವಾಗಿ ಆಗಿತ್ತು ಎ೦ದು ಇಲ್ಲಿ೦ದ ನೋಡುವಗಲೇ ಅನುಭವಕ್ಕೆ ಬ೦ತು..
  ಆಶಿರ್ವಚನದ ಅಡಿಯೋ ಸಿ ಡಿ..ಹಾಗೂ ರಾಮಕಥಾ ಪ್ರವಚನ ವನ್ನೂ ನೋಡುವ ಭಾಗ್ಯ ಕರುಣಿಸಬೇಕೆ೦ದು ಪ್ರಾರ್ಥನೆ…..ಹರೇರಾಮ..

  [Reply]

  ಮಂಗ್ಳೂರ ಮಾಣಿ... Reply:

  ರಾಮಕಥೆ ಇದರಲ್ಲೂ ಬಂದರೆ????

  [Reply]

 3. ಮಂಗ್ಳೂರ ಮಾಣಿ...

  “ನೀವಿಂದು ಮಾಡಿದ ಪೂಜೆಯಿಂದ ಮಠದ ಎಲ್ಲ ಪೂರ್ವಾಚಾರ್ಯರುಗಳಿಗೆ ತ್ರುಪ್ತಿಯಾಗಿರಬಹುದು” – ಎಂದು ವ್ಯಾಸ ಪೀಠದಿಂದ ಗುರುಗಳು ನುಡಿದಾಗ ಮೈಯಲ್ಲಿ ವಿದ್ಯುತ್ ಸಂಚಾರ. ವರ್ಣನೆ ಮಾಡಲು ಮಾತು – ಶಬ್ದ ಇಲ್ಲವಾಗಿದೆ.
  ೧೪೬೪೧ ರುದ್ರಪಠಣ ಎಂದು ನಿರ್ಧಾರ ಆಗಿದ್ದಿದ್ದದ್ದು ೨೨೩೬೫ ಆದಾಗ, ಮುಕ್ಕಾಲು ಗಂಟೆಯಲ್ಲಿ ಕೋಟಿ ತುಳಸೀ ಅರ್ಚನೆ – ಒಂದೂವರೆ ಗಂಟೆಯಲ್ಲಿ ಕೋಟಿ ಕುಂಕುಮಾರ್ಚನೆ ಆಗುವಾಗ ಮೈ-ಮನ-ಕಣ್ಣು ತುಂಬಿದ್ದು ಸುಳ್ಳಲ್ಲ.

  ರಾಮಕಥೆ ಕೇಳುತ್ತಾ ರಾಮ ಜನ್ಮವಾದಾಗ ಕಣ್ಣು ತುಂಬಿದ್ದು – “ಇನ್ನೇಕೆ ನಾಚಿಕೆ ? ನರ್ತಿಸಿ, ರಾಮ ಸೀತಾ ಕಲ್ಯಾಣವಾಗಲಿ” ಎಂದು ಗುರುಗಳು ಆದೇಶಿಸಿದಾಗ ಸೇರಿದ ೧೦೦೦೦ಕ್ಕೂ ಹೆಚ್ಚು ಜನ ಮೈಬೆವರುವಂತೆ ಹುಚ್ಚೆದ್ದು ಕುಣಿದು ಆನಂದಿಸಿದ ಅನುಭವವನ್ನು ಶಬ್ದಗಳಲ್ಲಿ ಕಟ್ಟಿಡಲು ಹೇಗೆ ಸಾಧ್ಯ?

  ೯೯೯೯ನೆಯ ಪೂಜೆಯನ್ನು ಹತ್ತಿರದಿಂದ ನೋಡಿ ಸಪರಿವಾರ ಶ್ರೀ ಸೀತಾರಾಮಚಂದ್ರಚಂದ್ರಮೌಳೀಶ್ವರರಾಜರಾಜೇಶ್ವರಿ ದೇವರನ್ನು ಕಣ್ಣುತುಂಬಿಸಿಕೊಂಡದ್ದನ್ನು ಜೇವನದಲ್ಲಿ ಮರೆಯಲು ಸಾಧ್ಯವೇ? ಮರೆಯುವುದು ಸಾಧುವೇ?

  ಅಶೋಕೆಯ ಆ ಶೋಕರಹಿತ ಪರಿಸರದಲ್ಲಿ – ಚಿರತೆಗಳು ದಿನದ ಹೊತ್ತೇ ಓಡಾಡುತ್ತಿದ್ದ ಜಾಗದಲ್ಲಿ ಶ್ರೀರಾಮ ಮತ್ತೆ ವಿರಾಜಮಾನನಾಗಿ ದರ್ಶನವಿತ್ತದ್ದು ನಮ್ಮ ನಿಮ್ಮೆಲ್ಲರ ಪುಣ್ಯ. ಗುರುಗಳ ಶ್ರೀಮುಖದಿಂದ ಮಠದ ದೇವರುಗಳಬಗ್ಗೆ, ಪರಂಪರೆಯಬಗ್ಗೆ ತಿಳಿಯುವಂತಾಗುವುದು ಏನು ಸಣ್ಣ ಭಾಗ್ಯವೇ???
  ದರ್ಶನವಿತ್ತ ಆತ್ಮಲಿಂಗ, ಮನ ತಂಪಾಗಿಸಿದ ದೇವ ಮಲ್ಲಿಕಾರ್ಜುನ.

  ಅಲ್ಲಿ ಏನು ಪಡಕೊಂಡೆವೆಂದು ನಮಗೆ ಈಗಲೇ ತಿಳಿಯದು. ಅಲ್ಲಿ ಬಂದಿದ್ದವರೆಲ್ಲಾ ತಮ್ಮ ಪಾತ್ರೆಯಲ್ಲಿ ಹಿಡಿಸುವಷ್ಟು ತುಂಬಿಸಿಕೊಂಡರು ತಮಗರಿವಿಲ್ಲದಂತೆಯೇ. ಮತ್ತೆ ಪ್ರಾಣಾಶಕ್ತಿಯ ಸಂಚಾರ – ಕುಂಡಲಿನೀಶಕ್ತಿಯ ಜಾಗ್ರುತಿ ಸಾಧಕರ ಗಮನಕ್ಕೆ ಬಂದಿರದೇ ಹೋಗಿರಲಾರದು. The whole surrounding was filled with cosmic Energy, Goodness and Happiness. That place is really Ashoke. ಅನ್ವರ್ಥ ಆ ಹೆಸರು.

  ಕಡೀಮೆಯೆಂದರೆ ಮೂವತ್ತು ಸಾವಿರವಾದರೂ ಜನ ಸೇರಿದ್ದರಲ್ಲಿ. ಅಷ್ಟೂ ಜನರಿಗೆ ಊಟದ ವ್ಯವಸ್ಠೆ – ಇರಲು ಜಾಗ – ಪ್ರಯಾಣಾಕ್ಕೆ ಅನುವು ಮಾಡಿಕೊಟ್ಟಿತ್ತು ಮಠ. ತಮ್ಮೆಲ್ಲ ಕೆಲಸಕಾರ್ಯಗಳಿಗೆ ವಿರಾಮವನ್ನಿತ್ತು ಬಂದು ನಿಂತ ಕಾರ್ಯಕರ್ತರಿಗೆ ಎಷ್ಟೆಂದು ಧನ್ಯವಾದ ಹೇಳೋಣ? ಎಷ್ಟೆಂದರೂ ಕಡಿಮೆಯೇ…

  ಬಂದವರು ಭಾಗ್ಯವಂತರು, ಯಾಕೆ ಗೊತ್ತೇ? “ನಾವು ನಿಮ್ಮ ತಾಯಿಯಾಗಿದ್ದರೆ, ಇಷ್ಟುಹೊತ್ತು ಕುಳಿತಿದ್ದು ಶ್ರಮಪಟ್ಟ ನಿಮಗೆಲ್ಲ ಏಣ್ಣೆಹಚ್ಚಿ ಸ್ನಾನ ಮಾಡಿಸದೇ ಕಳಿಸುತ್ತಿರಲಿಲ್ಲ ” ಎಂದು ಗುರುಗಳೇ ಆಶೀರ್ವದಿಸಿದ್ದರು. “ರಾಮನ ದ್ರುಷ್ಟಿ ಎಂದೆಂದಿಗೂ ನಿಮ್ಮ ಮೇಲಿದೆ – ನಿಮ್ಮ ದ್ರುಷ್ಟಿ ಯಾವತ್ತೂ ರಾಮನ ಮೇಲಿರಲಿ” ಎಂದು ಹರಸಿದರು. ಅದಕ್ಕೇ, ಬಂದವರೆಲ್ಲ ಭಾಗ್ಯವಂತರು.

  ನೀವೂ ಬನ್ನಿ, ಮೊನ್ನೆ ಭಾಗವಹಿಸಲಾಗದಿದ್ದರೇನಂತೆ? hareraama.in ನಲ್ಲಿ ಆ ನೆನಪು , ಅನುಭವ ಮತ್ತು ಅದರ ಸವಿ ಇನ್ನೂ ಇದೆ, ಬನ್ನಿ ಸವಿಯೋಣ. ಸವಿದಷ್ಟು ಸವಿ ಹೆಚ್ಚಾಗುತ್ತಿದೆ…

  [Reply]

  Raghavendra Narayana Reply:

  ಧನ್ಯವಾದಗಳು, ಆಶೀರ್ವಾಚನ ಮಿಸ್ ಮಾಡಿಕೊ೦ಡವರಿಗೆ ಕೆಲವೊ೦ದು ತುಣುಕುಗಳು ಸಿಕ್ಕಿತು..
  .
  ವಿರಾಟಪೂಜೆಯ ವಿಡಿಯೊ ಸಿ.ಡಿ. ಬ೦ದರೆ ಒಳ್ಳೆಯದು.
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ಮತ್ತೆ ಹಸಿರಾಗುತಿವೆ ಸವಿ-ಸವಿ ನೆನಪುಗಳು..

  [Reply]

  ಮಂಗ್ಳೂರ ಮಾಣಿ... Reply:

  ಸವಿ ಸವಿ ನೆನಪು ಸವಿ ಸವಿ ನೆನಪು ಹತ್ತು ಸಾವಿರ ನೆನಪು..
  ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ಸಾವು ಇರದಾ ನೆನಪು..

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಎದೆಯಾಳದಲಿ ಬಚ್ಚಿಡಲೂ ಆಗದ, ಬಿಚ್ಚಿಡಲೂ ತಿಳಿಯದ ಮಧುರವಾದ ನೆನಪುಗಳವು…

  [Reply]

  Sri Samsthana Reply:

  ಅದೆಷ್ಟು ಸುಂದರ ಈ ಅಭಿವ್ಯಕ್ತಿ..!

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಕೃಪಾಸಾಗರ…ರಾಮ…

  [Reply]

 4. Aneesh P

  Idu ondu olleya yojane….. Bappale ediyaddavude dooranda netli nodiye dhanya appantha olleya avakasha…dhanyavadagalu…Virat puje nodi pavanaradavu ella shishya varga….

  Rgds,

  Aneesh.P

  [Reply]

 5. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಗುರುಗಳ ಅನಂತ ಕೃಪೆಯ ಮುಂದೆ….. ತ್ರಿವೇಣೀ ಸಂಗಮದ ಮುಂದೆ….. ಹೇಳಲುಳಿದಿರುವುದು ಬರಿ ಮೌನ…..

  [Reply]

  Sri Samsthana Reply:

  ಮೌನ = ಮುನಿಭಾವ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಕರುಣಾಸಾಗರ… ರಾಮ… ನಿನ್ನ ಭಾವಗಳನ್ನೆಲ್ಲ ತುಂಬಿ, ನೀ ನಡೆಸಿದಂತೆ ನಡೆಯುವ, ನೀ ನುಡಿಸಿದಂತೆ ನುಡಿಯುವ, ನೀ ಕುಣಿಸಿದಂತೆ ಕುಣಿಯುವ ಖಾಲಿ ಕೊಡವನ್ನಾಗಿಸು ಈ ದೇಹವ….

  [Reply]

 6. K.N.BHAT

  ಹರೇರಾಮ…
  ರಾಮಕಥಾ-ವಿರಾಟ ಪೂಜೆ…
  ಕರುಣಾಸಾಗರ ಗುರುಚಕ್ರವರ್ತಿಯ ಕಾರುಣ್ಯ ವರ,ಶಿಷ್ಯ ಕೋಟಿಗೆ.
  ಅಶೋಕೆ ಅಯೋಧ್ಯೆಯಾಯಿತು…
  ಕೌಸಲ್ಯೆಯ ಗರ್ಭದಿಂದ ರಾಮಾವತಾರ.
  ದಶರಥನಿಗೆ ಪುತ್ರೋತ್ಸವ…ಸ್ವರ್ಗ ಭುವಿಗಿಳಿದು ಬಂತು.ದೇವತೆಗಳಿಂದ ಪುಷ್ಪವೃಷ್ಟಿ .
  ಜೊತೆಗೆ ನೃತ್ಯೋತ್ಸವ….ಸಂಗೀತಸುಧೆ…ಸಹಸ್ರ ಸಹಸ್ರ ಮಂದಿಯ ಬಾಯಿಗೆ ಸಿಹಿ ಭಕ್ಷ್ಯ.
  ಕೊನೆಗೆ ಮೈಮರೆತ ಭಕ್ತ ಕೋಟಿಗೆ ಆನಂದೋತ್ಸವ…ಪರಮಾನಂದದ ನರ್ತನ ಆನಂದೋತ್ಸವ..
  ರುದ್ರಪಠಣ ..ಕುಂಕುಮಾರ್ಚನೆ..ಕೋಟಿ ತುಳಸಿ ಅರ್ಚನೆ…ಪಾಲ್ಗೊಂಡ ನಾವೇ ಧನ್ಯರು-ಗುರುಕೃಪೆಯಿಂದ.
  ಇದೆಲ್ಲವನ್ನು ಮನೆ ಮನೆಗೆ ಮನ ಮನಕೆ ಮುಟ್ಟಿಸಿದ ವಿದ್ಯುನ್ಮಾನ ಮಾಧ್ಯಮ ಅಭಿನಂದನೀಯ.
  ಗುರುಪದಕೆ ಅನಂತ ಕೋಟಿ ನಮನ…

  [Reply]

 7. Raghavendra Narayana

  ಅದ್ಭುತ, ಧನ್ಯವಾದಗಳು.
  .
  ಶ್ರೀ ಗುರುಭ್ಯೋ ನಮಃ

  [Reply]

 8. seetharama bhat

  ಹರೇರಾಮ್,

  ವಿಘ್ನಗಳು ಎಷ್ತೇ ಬ೦ದರೂ ಮನಸ್ಸಿನ ಸ೦ಕಲ್ಪಕ್ಕೆ ಸಾಕಾರ ದೊರೆತಿಧ್ಧು. ವಿರಾಟ್ ಪೂಜೆಯ ವಿರಾಟ್ ಸ್ವರೂಪ ನೋಡಿ ಧನ್ಯನಾದೆ.
  ಊಟ ವಸತಿಗಳು ಸುವ್ಯವಸ್ಥಿತ ವಾಗಿತ್ತು. ದಾರಿ ರಾಮನನ್ನು ತಲುಪಲು ಇಷ್ತು ಕಠಿಣ ಕಠಿಣವಲ್ಲ ವೆನಿಸುತ್ತೆ. ನಮ್ಮರೇ ನಮಗೆ ಸಿಗದ೦ತೆ ತು೦ಬಿದ ಜನಸ೦ಖ್ಯೆಯಲ್ಲಿ ಎಲ್ಲವರೂ ನಮ್ಮರೇ ಅನ್ನಿಸಿದ್ದು ವಿಶೇಷ.ಎ೦ದೂ ಬರಿಕಾಲಲ್ಲಿ ನಡೆಯದ ನನಗೆ ಹೋದಕೂಡಲೇ ಚಪ್ಪಲಿ ಕಳೆದು ಕೊ೦ಡು ಅನುಭವಿಸಿದ ನೋವು ಸರ್ವ ಪಾಪ ಪರಿಹಾರ-ಔಶದಿ ಎನ್ನಿಸಿ ಹಾಯೆನಿಸಿತು.ನಾವುಕರೆದುಕೊ೦ಡು ಹೊದ ಒಬ್ಬರಿಗೆ ಸ್ವಲ್ಪ ಪೆಟ್ಟಾಗಿ ಅವರನ್ನು ಮನೆಯವರೆಗೆ ಬಸ್ಸಲ್ಲಿ ಬಿಟ್ಟಾಗ ಬೇಸರ ಆತ೦ಕ ದಲ್ಲಿದ್ದ ಅವರ ಹೆ೦ಡತಿ ನಗುತಾ ನಮಗೆ ದನ್ಯವಾದ ಹೇಳಿದ್ದು ರಾಮನ ಅನುಗ್ರಹವಲ್ಲಧೆ ಇನ್ನೇನು.

  ಅಪರಿಮಿತ ಅನುಭವ ಆನ೦ದದ ಪರಾಕಾಷ್ತೇ ಬಲು ಅಪರೂಪದ ಸಾಕ್ಷಾತ್ಕಾರ.

  ಧನ್ಯೊಸ್ಮಿ

  [Reply]

 9. Ravindranath Patel L.S.

  Hare Rama
  Pranamagalu
  Virat puje Atee Adbutavagittu. Had I missed I would have missed every thing which cant be replaced or retraced. What more to tell. Nothing in words, cant be expressed. Virat Puje nodida naave dhanya, Dhanya, Dhanya.

  Shri Gurubhyo Namaha

  [Reply]

 10. mamata hegde

  || ಹರೇ ರಾಮ ||

  ಗುರು ಚರಣಗಳಿಗೆ ಅನಂತ ವಂದನೆಗಳು

  ಆ ಅಧ್ಬುತ ಕ್ಷಣಗಳ ಬಗ್ಗೆ ಹೇಗೆ ಬರೆಯಬೇಕೆಂದೇ ತೋಚುತ್ತಿಲ್ಲ.ನಿಜವಾಗಿಯೂ ಜೀವನದ ಒಂದು ಅವಿಸ್ಮರಣೀಯ ದಿನಗಳು.ಕುಂಕುಮರ್ಚನೆಗೆ ಅಶೋಕೆಯತ್ತ ಸಾಗಿ ಬಂದ ಮಾತೆಯರ ಉತ್ಸಾಹವನ್ನು ನೋಡಿ ನಿಜವಾಗಿಯೂ ಸಂತೋಷವೆನಿಸಿತು,ಹಾಗೆಯೇ ರುದ್ರ ಹೇಳಲು ಬಂದ ಪುರುಷರನ್ನು ನೋಡಿಯೂ ಸಂತೋಷವಾಯಿತು.ಅಂದು ಅಶೋಕೆ ಸಾಕ್ಷಾತ್ ದೇವಲೋಕದಂತೆ ಭಾಸವಗುತ್ತಿತ್ತು ,ಮನಸ್ಸು ನೀನೆಂತ ಧನ್ಯ ಎಂದು ಕುಣಿದಾಡುತ್ತಿತ್ತು.ಅಂತಿಮವಾಗಿ ಗುರುಗಳ ಆಶೀರ್ವಚನವಂತು ವಿರಾಟ್ ಪೂಜೆಯಲ್ಲಿ ಭಾಗವಹಿಸಿದುದಕ್ಕೆ ಸಾರ್ಥಕತೆಯನ್ನು ನೀಡಿತು.ಇಂಥ ಕಾರ್ಯಕ್ರಮಗಳು ಅಶೋಕೆಯಲ್ಲಿ ಪುನಃ ಪುನಃ ನಡೆಯಲಿ ಈ ನಿಟ್ಟಿನಲ್ಲಾದರು ನಮ್ಮ ಗುರು ಬಂಧುಗಳು ಒಂದು ಜಾಗದಲ್ಲಿ ಒಂದಾಗುವಂತಾಗಲಿ, ಗುರು ಚರಣವನ್ನು ಬಯಸುವವರಿಗೆ ಇಂಥ ಕಾರ್ಯಕ್ರಮಗಳು ದಾರಿಯಾಗಲಿ ಗುರುದೇವ ಎಂದು ಪ್ರಾರ್ಥಿಸುತ್ತೇನೆ.
  ||ವಂದೇ ಗೋ ಮಾತರಂ ||

  [Reply]

 11. Geetha Manjappa

  ಹರೇರಾಮ!

  ವೈಕುಂಠವೇ ಧರೆಗಿಳಿದಿತ್ತು ದೇವಲೋಕದಲ್ಲೇಇದ್ದ ಅನುಭವ.ನೋಡಲು ಎರಡು ಕಣ್ನುಗಳು ಸಾಲದಾಗಿತ್ತು. ಅಸಂಖ್ಯ ಕಣ್ನುಗಳು ಬೇಕಾಗಿತ್ತು. ರಾಮಕಥಾ,ಲಲಿತಾ ಸಹಸ್ರನಾಮ,ರುದ್ರ ಪಾರಾಯಣ,ರಾಮ ಸಹಸ್ರನಾಮ ಕೇಳಲು ಅಸಂಖ್ಯ ಕಿವಿಗಳು ಬೇಕಾಗಿತ್ತು.ಸೇವೆ ಮಾಡಲು ಅಸಂಖ್ಯ ಕೈಗಳು ಬೇಕಾಗಿತ್ತು.ಕುಣಿದು ಕುಪ್ಪಳಿಸಲು ಅಸಂಖ್ಯಕಾಲುಗಳು ಬೇಕಾಗಿತ್ತು.ಇವನ್ನೆಲ್ಲ ಗ್ರಹಿಸಲು ಒಂದು ತಲೆ ಸಾಲದೆನಿಸಿತು.ಅತ್ಯಧ್ಭುತ! ಅವರ್ಣನೀಯ!! ಅವಿಸ್ಮರಣೀಯ!!!!ಅನಿರ್ವಚನೀಯ!!!!!!!!!!!!!!!!.
  ಶ್ರೀಗಳವರ ಪೂಜೆಯಲ್ಲಿ ಭಾಗಿಯಾಗಲು ನಾವೆಷ್ಟು ಪುಣ್ಯ ಮಾಡಿದ್ದೆವೇನೋ! ಇವರು ಬರೇ ಗುರುಗಳಲ್ಲ ಭಗವಂತನ ಅವತಾರ.ಅವರ ಪರಿಕಲ್ಪನೆಯೆ ಇದಕ್ಕೆ ಸಾಕ್ಷಿ.ಯಾವ ಕವಿಗೂ ಯಾವ ಕಲಾವಿದನಿಗೂ ಅಸಾಧ್ಯ. ನಮ್ಮ ಪ್ರೀತಿಯ ಪೂಜ್ಯ ಶ್ರೀ ಸಂಸ್ಥಾನ ನಮಗೆಲ್ಲ ಎರಡು ದಿನಗಳ ಕಾಲ ಭೂಲೋಕವನ್ನು ಮರೆತು ವೈಕುಂಠದಲ್ಲಿರಲು ಅವಕಾಶವನ್ನು ಅನುಗ್ರಹಿಸಿದ್ದಕ್ಕೆ ಕೋಟಿ ! ಶತಕೋಟಿ!! ಸಹಸ್ರ ಕೋಟಿ!!!ಉಹುಂ, ಅನಂತ ಕೋಟಿ ನಮಸ್ಕಾರಗಳು.

  [Reply]

  ಮಂಗ್ಳೂರ ಮಾಣಿ... Reply:

  ನಿಜ ನಿಜ ನಿಜ….

  [Reply]

 12. Shreekant Hegde

  ಹರೇ ರಾಮ, ಪ್ರಣಾಮಾಃ | ಎಲ್ಲರ ಅಭಿಪ್ರಯಾದಲ್ಲೂ ನಂದೇ ಭಾವನೆಗಳು. ಕ್ರಿಯಾಸಿದ್ಧಿಃ ಸತ್ವೇ ಭವತಿ ಮಹತಾಂ ನೋಪಕರಣೇ | ಎಂಬುದನ್ನು ಗುರುಗಳು ಮತ್ತೊಮ್ಮೆ ದೃಢೀಕರಿಸಿದ್ರು.
  ಯಾವಾಗಲೂ ಅವರ ಆಣತಿಗೆ ಕುಣಿಯುವ ಮನದೊಂದಿಗೆ ಶ್ರೀರಾಮಕಥೆಯಲ್ಲಿ ತನುವನ್ನೂ ಕುಣಿಯುವಂತೆ ಮಾಡಿ …. ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ, ಕುಳಿತು ಪಾಡಲು ನಿಲುವ | ನಿಂತರೆ ನಲಿವ | ನಲಿದರೆ ಒಲಿವೆ ನಾ ನಿನಗೆಂಬ | ಸುಲಭನೋ ಹರಿ…. ಎಂಬ ದಾಸವಾಣಿಯನ್ನು ಮನದಟ್ಟು ಮಾಡಿಕೊಟ್ಟ ಕುಲಗುರುಗಳಿಗಿದೋ ಕೋಟಿ ಕೋಟಿ ನಮನ | ಹಲವಾರು ಸಬೂಬು ಹೇಳಿ ಬಾರದವರು ಕಂಗಳ ಭಾಗ್ಯವ ಕಳೆದುಕೊಂಡರು.

  [Reply]

 13. gopalakrishna pakalakunja

  ವೀರ ಹನುಮ ತನ್ನ ಹುಟ್ಟೂರ ಮನೆಯಲ್ಲಿಯೇ ಕುಳಿತು , ತನ್ನ ಅರಾಧ್ಯ ದೇವ ಮರ್ಯಾದಾ ಪುರುಷೋತ್ತಮನ ದಿವ್ಯಚರಿತ “ಶ್ರೀ ರಾಮಕಥಾ ” ವನ್ನು ತನ್ನ ಪ್ರಭುವಿನ ಕಿಂಕರ ರಾದ ಶ್ರೀ ಶಂಕರರಿಂದಲೇ ಕೇಳಿ , ನೋಡಿ, ಕುಣಿದು ,ಕುಪ್ಪಳಿಸಿ ದ್ದಲ್ಲದೆ ತನ್ನೊಡನೊದ್ದ ಇತರರಿಗೆಲ್ಲ ಆ ಆನಂದ ರುಚಿ ಹಂಚಿದ್ದು ಈಗ ಇತಿಹಾಸದ ಪುಟ ಸೇರಿತು.
  ದಿವ್ಯವೂ ಭವ್ಯವೂ ಅದ ಆ ಅನುಭವ ವಿವರಿಸುವ ಕ್ಟಪೆ ಸಾವಿರ ನಾಲಗೆಯ ಆದಿ ಶೇಷ ಮಾಡಿದರೂ ಅಪೂರ್ಣವೆನಿಸಬಹುದು…ಎಂದು ನನಗನಿಸಿದೆ.
  ನನಗೆ ನಾನೆ ಚಿವುಟಿಕೊಂಡು ನಾನು ಕನಸು ಕಾಣುತ್ತಿಲ್ಲವಲ್ಲಾ…ವರ್ತಮಾನ ದಲ್ಲೇ ಇದ್ದೇನೆ…ಇದಕ್ಕೆಲ್ಲ ಸಾಕ್ಷಿ ಆಗಿದ್ದೇನಲ್ಲಾ ಎಂದು ಮತ್ತೆ ಮತ್ತೆ ನೆನಪಿಸಿಕೊಂಡ ನಭೂತೋ…ಸಂಭ್ರಮದ ಅವಸರ ಅಗಿದ್ದದ್ದು ಪೂರ್ಣ ಸತ್ಯ.

  ರುದ್ರಾಧ್ಯಾಯದ ಅಧ್ಯಯನ “ಹತ್ತು.. ಸಾವಿರ”ದ ಒಂದನೇಯ ಅಭಿಷೇಕದಲ್ಲಿ ಸಾರ್ಥಕ್ಯ ಪಡೆದುದು ಮಾತ್ರವಲ್ಲದೆ, ೨೨೩೬೫
  ರಲ್ಲ್ಲೊಂದಾದ ಪುಣ್ಯವೂ ಲಭಿಸಿತು ಶ್ರೀ ಸಂಸ್ಥಾನದವರ ಕೃಪಾಶೀರ್ವಾದದೊಂದಿಗೆ…ಧನ್ಯ ಎನಿಸಿತು.

  [Reply]

 14. Raghavendra Narayana

  ಅದ್ಭುತ, ಎಲ್ಲರೂ ಅನಿಸಿಕೆಗಳನ್ನು ಅನುಭವಗಳನ್ನು ತಪ್ಪುಒಪ್ಪುಗಳನ್ನು ಹ೦ಚಿಕೊ೦ಡರೆ ಒಳ್ಳೆಯದೆ೦ದು ಅನ್ನಿಸುತ್ತದೆ, ಮು೦ದಿನ ಕಾರ್ಯಕ್ರಮಗಳಿಗೆ ಸಹಾಯವಾಗಬಹುದು..
  .
  ಶ್ರೀ ಗುರುಭ್ಯೋ ನಮಃ

  [Reply]

 15. laxmi

  ||ಶ್ರೀ ಗುರುಭ್ಯೊ ನಮ:|| ವಿರಾಟ ಪೂಜೆಯಲ್ಲಿ ಭಾಗವಹಿಸಿದ್ದೆ….ಮನೆಯಲ್ಲಿ ಕುಳಿತು ಈ ಅ೦ಕಣದಲ್ಲಿ ಆಶೀರ್ವಚನವನ್ನು ಓದಿದಾಗ ಪುನ: ಆ ಸ೦ಭ್ರಮದ ,ಪುಣ್ಯಮಯ ವಾತಾವರಣ ನೆನಪಾಗಿ ಪುಳಕಿತಳಾದೆ…ಜೀವನದ ದು:ಖ,ಕಷ್ಟಗಳನ್ನು ಕೆಲವು ಕಾಲ ಮರೆತು ರಾಮ ಭಜನೆಯಲ್ಲಿ ಮೈ ಮರೆತು ಹಾಡಿ ಕುಣಿದು ಮನ ಹಗುರಾಗಿದ್ದು… ಮು೦ದಿನ ಜೀವನ ಸ೦ತೋಷಮಯವಾಗಲು ದಾರಿ ದೀಪವು……ಆ ಪುಣ್ಯ ದಿನಗಳು ವರುಷವಿಡೀ, ಜೀವನ ಪರ್ಯ೦ತ ಎಲ್ಲರಿಗೂ ಸಿಗಲಿ……||ಹರೇ ರಾಮ||

  [Reply]

Leave a Reply

Highslide for Wordpress Plugin