1.08.2015 ಶನಿವಾರ: ಶ್ರೀ ರಾಮಾಶ್ರಮ, ಬೆಂಗಳೂರು:

ಬೆಳಗ್ಗೆ ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯನ್ನು ಶ್ರೀಗಳವರು ನೆರವೇರಿಸಿದರು.

ಸಭಾ ವೇದಿಕೆ:

ನಂತರ ಶ್ರೀ ಸಂಸ್ಥಾನದವರ ಯೋಜನೆಯಂತೆ ಛಾತ್ರಪುರಸ್ಕಾರದಲ್ಲಿ ಕೇವಲ ರಾಜ್ಯ,ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಕ್ಷೇತ್ರದಲ್ಲಿ ಉನ್ನತಮಟ್ಟದ ಸಾಧನೆಗೈದ ಕುಮಾರಿ ಈಶಾ ಶರ್ಮಾ ಆವವರನ್ನು ಶ್ರೀಗಳು ಸನ್ಮಾನಿಸಿದರು. ಶ್ರೀ ಭಾರತಿ ಪ್ರಕಾಶನದ ವತಿಯಿಂದ, ಡಾ|| ಸುವರ್ಣಿನಿ ರಾವ್ ಅವರು ರಚಿಸಿದ ‘ಅನುಪಮ ಗೊಭಕ್ತೆ ಅಹಲ್ಯಾಬಾಯಿ ಹೋಳ್ಕರ್’ ಎಂಬ ಕೃತಿಯನ್ನು ಕುಮಾರಿ ಈಶಾ ಶರ್ಮಾ ಅವರಿಂದ ಲೋಕಾರ್ಪಣೆಗೊಳಿಸಲಾಯಿತು.

ಪರಿವಾರದವರ ಭಿಕ್ಷೆಯ ವಿಶೇಷ ಸಂದರ್ಭದಲ್ಲಿ ಹಿಂದೆ ಗುರುಪೀಠಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದವರನ್ನು ಗುರುತಿಸುವ ಕಾರ್ಯಕ್ರಮದಲ್ಲಿ.. ಹನ್ನೆರಡು ವರ್ಷಗಳ ಕಾಲ ದೊಡ್ಡ ಗುರುಗಳ ಪರಿವಾರದಲ್ಲಿ ಸೇವೆಸಲ್ಲಿಸಿದ ಶ್ರೀ ಈಶ್ವರ್ ವೆಂಕಟ್ ಸುಬ್ಬಾ ಭಟ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತ ಈಶ್ವರ್ ಅವರ ಪರಿಚಯವನ್ನು ಶ್ರೀ ಸವಾರಿಯ ಆಚಾರ ವಿಚಾರ ಗಜಾನನ ಭಟ್ ಅವರು ಪರಿಚಯಿಸಿದರು. ಸನ್ಮಾನದ ಪತ್ರವನ್ನು ವಿದ್ವಾನ್ ಬಾಬಣ್ಣ ಅವರು ವಾಚಿಸಿದರು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ
ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.
~
ಶ್ರೀ ಗುರುಭಿಕ್ಷಾ ಸೇವೆ:
ಶ್ರೀ ಸವಾರಿಯ ಪೂರ್ವ ಮತ್ತು ಪ್ರಕೃತ ಪರಿವಾರ ಬಂಧುಗಳು
~
ಧರ್ಮಸಭೆ:
ಮಠ ಎಂದರೆ ವಿಶ್ವವಿದ್ಯಾಲಯ, ಇಲ್ಲಿ ಉತ್ತೀರ್ಣರಾದವರು ಜೀವನದಲ್ಲಿ ಎಲ್ಲಿಯೂ ವಿಫಲನಾಗಳು ಸಾಧ್ಯವೇ ಇಲ್ಲ. ಅಂತಹ ಜ್ಞಾನ ಮಠದ ಪರಿಸರದಲ್ಲಿ ಲಭಿಸುತ್ತದೆ. ಇಲ್ಲಿ ಸಲ್ಲಿದವನು ಎಲ್ಲೆಡೆಯೂ ಸೇರುತ್ತಾನೆ. ಗುರುಪೀಠ ಇದು ಬೆಂಕಿ ಇದ್ದಂತೆ, ಆದರೆ ಇದು ಕಾಡ್ಗಿಚ್ಚು ಅಲ್ಲ, ಬದಲಿಗೆ ಮನೆ ಬೆಳಗುವ ದೀಪ. ಕೈ ಹಾಕಿ ಸುಟ್ಟಿಕೊಂಡರೆ ಅದಕ್ಕೆ ದೀಪ ಜವಾಬ್ದಾರಿ ಅಲ್ಲ.. ಗುರುಗಳ ಹತ್ತಿರ ಇದ್ದವರ ಮೇಲೆ ಸಹಜವಾಗಿ ಹಲವರಿಗೆ ಅಸೂಯೆ ಮೂಡುತ್ತದೆ. ಹಾಗಾಗಬಾರದು, ಸಮಾಜದ ಶುಭ ಹಾರೈಕೆ ಎಲ್ಲ ಪರಿವಾರದವರ ಮೇಲೆ ಇರಲಿ. ಅಣ್ಣ-ತಮ್ಮಂದಿರ ಹಾಗೆ. ಮನೆಯ ಮಕ್ಕಳ ಹಾಗೆ ಸಂಬಂಧ ಇರಲಿ. ಎಲ್ಲರಿಗೂ ರಾಮನ ಆಶೀರ್ವಾದ ಇರಲಿ, ಹಾಗೂ ಎಲ್ಲರಿಗೂ ಕ್ಷೇಮವನ್ನು ಅಪ್ಪಣೆ ಮಾಡಿದರು.

~
ಯಾಗ ಶಾಲೆ:
ಶ್ರೀ ಮೇಧಾದಕ್ಷಿಣಾಮೂರ್ತಿ ಹವನ
~
ಕಲಾಮುಕುಲ:
ಕರ್ನಾಟಕ ಸಂಗೀತ ಕಾರ್ಯಕ್ರಮ-
ವಿದ್ವಾನ್ ಮುರಲಿಕೃಷ್ಣ ಪಟ್ಟಾಜೆ – ಹಾಡುಗಾರಿಕೆ
ವಿದ್ವಾನ್ ಅಚ್ಯುತ ರಾವ್- ಪಿಟೀಲು
ವಿದ್ವಾನ್ ಅನಿರುದ್ಧ ಭಟ್-ಮೃದಂಗ
ವಿದ್ವಾನ್ ರಘುನಂದನ ಎಸ್. – ಘಟ

English Summary:
Bhiksha Seva performed by Present and Past Parivara bandhus.
Kumari Eesha Sharma, who secured medals at International Level was felicitated by Shri samsthana. And she also Launched the book ‘Anupama Gobhakte Ahalya Baayi Holkar’ which is written by Dr. Suvarnini Konale.

Shri Ishwara Venkata Subba Bhat was felicitated by Shri Samsthana for his 12years of long service in the Parivara during the times of previous Sri Swamiji, Sri Raghavendra Bharati Maha Swamiji.

Kalamukula:
Karnataka Sangeeta Program

Shri Asheervachana:
Matha is like an University, those who excels here, will excel anywhere in the world. GuruPeetha is like a fire , not a wildfire but a lamp to enlighten the house. Lamp is not responsible for someone intentionally puts his hands and get burnt. Society should bless all the Parivara People.

ಚಿತ್ರಗಳು (Photo)
ಗಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರ ಚಾತುರ್ಮಾಸ್ಯದ ಎರಡನೇ ದಿನ..

Audio:

Download : Link

~*~*~

Facebook Comments