2.08.2015. ಭಾನುವಾರ, ಶ್ರೀ ರಾಮಾಶ್ರಮ, ಬೆಂಗಳೂರು

ಬೆಳಗ್ಗೆ
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯನ್ನು ಶ್ರೀಗಳವರು ನೆರವೇರಿಸಿದರು. ವಿಶೇಷವಾಗಿ ಸೀತಾ ಕಲ್ಯಾಣೋತ್ಸವ ನಡೆಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ
~
ಯಾಗಶಾಲೆ:
ಮೇಧಾ ದಕ್ಷಿಣಮೂರ್ತಿ ಹವನ: ಬಿಜು ಬೆಂಗಳೂರು
~
ಗುರುಭಿಕ್ಷಾ ಸೇವೆ:
ಕಂಪನಿ ಸೆಕ್ರಟರಿ ಬಳಗ, ಬೆಂಗಳೂರು.
~
ಸಭಾ ವೇದಿಕೆ:
ಶ್ರೀ ಸಂಸ್ಥಾನದವರ ಯೋಜನೆಯಂತೆ ಛಾತ್ರಪುರಸ್ಕಾರದಲ್ಲಿ ರಾಷ್ಟ್ರಮಟ್ಟದಲ್ಲಿ ಗಾಯನ ಹಾಗೂ ಭರತನಾಟ್ಯ ಪಟು ವಿದೂಷಿ ದೀಕ್ಷಾ ಅವರನ್ನು ಶ್ರೀಗಳು ಸನ್ಮಾನಿಸಿದರು. ಶ್ರೀ ಭಾರತಿ ಪ್ರಕಾಶನದ ವತಿಯಿಂದ ಪರಮಪದ ಸೋಪಾನ ಎಂಬ ವಿನೂತನ ಮಾದರಿಯ ಆಟಿಕೆಯನ್ನು ಕುಮಾರಿ ವಿದೂಷಿ ದೀಕ್ಷಾ ಅವರಿಂದ ಲೋಕಾರ್ಪಣೆಗೊಳಿಸಲಾಯಿತು
~
ಧರ್ಮಸಭೆ:
ಲೆಕ್ಕದಲ್ಲೂ ಆಧ್ಯಾತ್ಮವಿದೆ. ಜಮಾ ಖರ್ಚುಗಳು ಸರಿದೂಗಿದರೆ ಲೆಕ್ಕ ಸರಿಯಾಗುತ್ತದೆ. ಹಾಗೆಯೇ ಜೀವನದಲ್ಲಿ ಪಾಪ-ಪುಣ್ಯಗಳ ಲೆಕ್ಕ ಸರಿಹೊಂದಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಸಮಾಜದಿಂದ ನಾವು ಪಡೆದಿದ್ದನ್ನು ನಾವು ಮರಳಿ ಸಮಾಜಕ್ಕೆ ನೀಡಿದರೆ ಜೀವನದ ಲೆಕ್ಕ ಸರಿಹೊಂದುತ್ತದೆ ಎಂದು ನೆರೆದಿದ್ದ ಕಂಪನಿ ಸೆಕ್ರೆಟರಿ ಬಳಗಕ್ಕೆ ಶ್ರೀಗಳು ಲೆಕ್ಕದಲ್ಲೂ ಆಧ್ಯಾತ್ಮವನ್ನು ವಿವರಿಸಿದರು.

ನಮ್ಮ ಮತ್ತು ದೇವರ ನಡುವೆ ಹಾಗೂ ಪರಸ್ಪರವಾಗಿಯೂ ನಮ್ಮ ನಡುವೆ ಯಾವುದೇ ಅಂತರವಿರಬಾರದು. ದೇವರ ಹಾಗೂ ಗುರುವಿನ ಬಗ್ಗೆ ಶ್ರದ್ಧೆ ನಿರಂತರವಾಗಿರಬೇಕು. ಮೃದುವಾದ ಜಲವು ನಿರಂತರ ಹರಿಯುವಿಕೆಯಿಂದ ಕಠಿಣವಾದ ಶಿಲೆಯನ್ನೇ ಕೊರೆಯುತ್ತದೇ. ಅದೇ ರೀತಿಯಲ್ಲಿ ಅಂತರವಿಲ್ಲದ ನಿರಂತರ ಸಾಧನೆಯಿಂದ ಏನನ್ನೂ ಬೇಕಾದರೂ ಸಾಧಿಸಬಹುದು. ಹಾಗೆಯೇ ಸಭೆಯಲ್ಲಿ ನಿರಂತರವಾಗಿ ನಡುವೆ ಅಂತರವಿಲ್ಲದಷ್ಟು ಭಕ್ತ ಸಮೂಹ ಸೇರಿರುವುದು ಸಂತಸದ ವಿಚಾರ” ಎಂದು ಶ್ರೀಗಳು ಅಭಿಪ್ರಾಯಪಟ್ಟರು.
~
ಮಧ್ಯಾಹ್ನದ ಕಾರ್ಯಕ್ರಮ:
ಅಂತರ್ಜಾಲ ವಿಭಾಗದಿಂದ ಛಾತ್ರರಿಗೆ ವಿವಿಧ ರೀತಿಯ ನೀತಿ,ಆದರ್ಶಗಳುಳ್ಳ ವಿಡಿಯೋ ತುಣುಕುಗಳನ್ನು ತೋರಿಸಲಾಯಿತು
~
ಸಂಧ್ಯಾಕಾಲದ ಕಾರ್ಯಕ್ರಮ:
ಒಂದನೇ ತರಗತಿಯಿಂದ ಮೂರನೇ ತರಗತಿಯ ಮಕ್ಕಳ ಜೊತೆ ಶ್ರೀಗಳ ಸಂವಾದ
“ರಾಮನಿಂದ ನಾವೆಲ್ಲ ಏನು ಕಲಿಯಬಹುದು?” ಹಾಗೂ “ನಾವು ಏನು ಮಾಡಿದರೆ ಗುರುಗಳಿಗೆ ಇಷ್ಟ ಆಗುತ್ತದೆ?” ಎಂಬ ವಿಷಯಗಳ ಕುರಿತು ಶ್ರೀಗಳು ಚಿಣ್ಣರೊಡನೆ ಸಂವಾದ ನಡೆಸಿದರು

English Summary:

On 3rd day of Sri Sri Raghaveshwara Bharati Mahaswamiji’s Chatra Chaturmasya, Sri Sri blessed the students with Chatra-sangama event. Discussion session with students was very fruitful. Bharati Prakashana launched a new toy-game for kids “Paramapada Sopana” (similar to Snake&Ladder). Company Secretory association performed Sri Guru Bhiksha seva.

Install HareRaama Android App to receive updates: goo.gl/IBrhmT

Photos:

Audio:

Download : Link

~*~*~

Facebook Comments