ಶ್ರೀ ರಾಮಾಶ್ರಮ, ಬೆಂಗಳೂರು 31.07.2015, ಶನಿವಾರ

ಬೆಳಗ್ಗೆ ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ನಂತರ ವ್ಯಾಸಪೂಜೆ ಹಾಗೂ ಚಾತುರ್ಮಾಸ್ಯ ವ್ರತ ಸಂಕಲ್ಪ ಸಂಪನ್ನವಾಯಿತು.
~
ಸಭಾ ವೇದಿಕೆ:
ವಿದ್ವಾನ್ ಜಗದೀಶ ಶರ್ಮಾರವರು ಸಭಾಪೂಜೆ ಹಾಗೂ ಚಾತುರ್ಮಾಸ್ಯ ಮಹಾಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ ಎಂ. ಹೆಗಡೆ ಅವರು ಪುಷ್ಪಾರ್ಚನೆ ನಡೆಸಿದರು.
ನಂತರ ಶ್ರೀ ಸಂಸ್ಥಾನದವರ ಆಶಯದಂತೆ ವಿಕಲಚೇತನ ವಿದ್ಯಾರ್ಥಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೆಸ್ ಪಂದ್ಯಾವಳಿಯಲ್ಲಿ ಪದಕಗಳಿಸಿರುವ ಕಾರವಾರದ ಸಮರ್ಥ ರಾವ್ ಅವರನ್ನು ಶ್ರೀಗಳು ಸನ್ಮಾನಿಸಿದರು. ಶ್ರೀ ಭಾರತಿ ಪ್ರಕಾಶನ ಹೊರತಂದಿರುವ ‘ಗೋ ರಕ್ಷಾ’ ಎಂಬ ವಿನೂತನ ಮಾದರಿಯ ಆಟಿಕೆಯನ್ನು ಸಮರ್ಥ ರಾವ್ ಅವರಿಂದ ಲೋಕಾರ್ಪಣೆಗೊಳಿಸಲಾಯಿತು. ಎಲ್ಲ ಶಿಷ್ಯರ ಪರವಾಗಿ ಆಯಾ ಮಂಡಲದ ಪದಾಧಿಕಾರಿಗಳಿಗೆ ವ್ಯಾಸ ಮಂತ್ರಾಕ್ಷತೆಯನ್ನು ಸಂಸ್ಥಾನದವರು ಅನುಗ್ರಹಿಸಿದರು.
ಸಭೆಯಲ್ಲಿ ಭಟ್ಕಳದ ಶಾಸಕ ಶ್ರೀ ಮಂಕಾಳು ವೈದ್ಯ, ಹಾಗೂ ಬಸವನಗುಡಿಯ ಶಾಸಕ ಶ್ರೀ ರವಿ ಸುಬ್ರಹ್ಮಣ್ಯ, ಖ್ಯಾತ ಜ್ಯೋತಿಷಿ ಶ್ರೀ ಗೋಪಾಲಕೃಷ ಭಟ್, ಶ್ರೀಮತಿ ಉಷಾ ಅಗರವಾಲ್, ಶ್ರೀ ಎಂ.ಪಿ.ಸೋನಿಕಾ ಹಾಗೂ ಮಹಾಮಂಡಲದ ಪಧಾದಿಕಾರಿಗಳು ಉಪಸ್ಥಿತರಿದ್ದರು.
~
ಭಜನೆ:
ಸಾಮೂಹಿಕ ಹನುಮಾನ್ ಚಾಲೀಸ್, ಭಜಗೋವಿಂದಂ ಭಜನೆ
~
ಸಂಧ್ಯಾಕಾರ್ಯಕ್ರಮ:
ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.
~
ಶ್ರೀ ಗುರುಭಿಕ್ಷಾ ಸೇವೆ:
ಶ್ರೀ ತಿರುಮಲೇಶ್ವರ ಭಟ್, ಮಂಗಳೂರು ಮಂಡಲ
~
ಧರ್ಮಸಭೆ:
ಮಕ್ಕಳು ಎಂದರೆ ಭವಿಷ್ಯತ್ತು, ಮಕ್ಕಳನ್ನು ಕೇಂದ್ರವಾಗಿಸಿಕೊಂಡು ನೆಡೆಯುತ್ತಿರುವ ಈ ಚಾತುರ್ಮಾಸ್ಯವು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಲಿದೆ. ಈ ಮಕ್ಕಳು ಮುಂದಿನ ಭವ್ಯಸಮಾಜದ ಅಡಿಪಾಯವಾಗಲಿದ್ದಾರೆ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ‘ಛಾತ್ರ. ಚಾತುರ್ಮಾಸ್ಯ’ದ ಸಭೆಯಲ್ಲಿ ಆಶಿಸಿದರು.
ಸಾವಿರಾರು ವರ್ಷ ಇತಿಹಾಸ ಇರುವ ಈ ಗುರುಪರಂಪರೆಯಲ್ಲಿ ಹಲವಾರು ಬಾರಿ ಅಗ್ನಿಪರೀಕ್ಷೆಗಳು ಎದುರಾಗಿವೆ, ನಮ್ಮ ಮಠದ ಯೋಜನೆಗಳು ದೊಡ್ಡದು ಹಾಗೆಯೇ ಬರುವ ಪರೀಕ್ಷೆಗಳೂ ದೊಡ್ಡವು, ಪರೀಕ್ಷೆಗಳನ್ನು ಎದುರಿಸಿದರಷ್ಟೇ ಉನ್ನತ ಮಟ್ಟ ಏರಲು ಸಾಧ್ಯ. ಸಮಾಜವು ಚೆನ್ನಾಗಿರಬೇಕಾದರೆ ಒಬ್ಬರು ವಿಷವನ್ನು ಕುಡಿಯಬೇಕು, ವಿಷವನ್ನು ಕುಡಿದು ಜಗತ್ತಿಗೆ ಅಮೃತವನ್ನು ಕೊಟ್ಟ ಪರಶಿವನಿಂದ ಆರಂಭವಾದ ಪರಂಪರೆಯವರಾದ ನಾವು ಕೂಡ ಹಾಗೆ ಎಂದು ತಿಳಿಸಿದರು.
ಗಿರಿನಗರದ ರಾಮಾಶ್ರಮದಲ್ಲಿ ಪುನರ್ವಸು ಸಬಾಭವನ ನಿರ್ಮಾಣವಾಗುತ್ತಿದ್ದು, ಅದರ ಅಡಿಪಾಯದಲ್ಲಿ ಒಡೆಯಲಾರದ ಶಿಲೆ ಇದೆ, ಅದರಂತೆಯೇ ಎಂಥಹಾ ಪರೀಕ್ಕೆಗಳು ಎದುರಾದರೂ ಒಡೆಯಲಾಗದ ಗುರು-ಶಿಷ್ಯರ ಬಾಂಧವ್ಯ ನಮ್ಮ ನಿಮ್ಮ ಬಾಂಧವ್ಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ವಿಕಲಚೇತನ ಚೆಸ್ ಚಾಂಪಿಯನ್‌ ಸಮರ್ಥ ಅವರನ್ನು ಸನ್ಮಾನಿಸಿ, ಶ್ರೀ ಭಾರತೀ ಪ್ರಕಾಶನ ಹೊರತಂದಿರುವ ಗೋರಕ್ಷಾ ಎಂಬ ಮಕ್ಕಳಿಗೆ ಸಂಬಂಧಿಸಿದ ವಿನೂತನ ಆಟಿಕೆಯನ್ನು ವಿಕಲಚೇತನ ಸಮರ್ಥ ಅವರಿಂದ  ಲೋಕಾರ್ಪಣೆಮಾಡಿಸಲಾಯಿತು.

ಮಳೆಯ ನಡುವೆಯೂ ರಾಜ್ಯದ ನಾನಾ ಭಾಗದಿಂದ ಶಿಷ್ಯಸ್ತೋಮ ರಾಮಾಶ್ರಮದತ್ತ ಬಂದಿದ್ದು ವಿಶೇಷವಾಗಿತ್ತು.
~
ಯಾಗ ಶಾಲೆ:

ಗಣಪತಿ ಹವನ -ಶ್ರೀಮಠದ ವತಿಯಿಂದ
ಮೇದಾದಕ್ಷಿಣಮೂರ್ತಿ ಹವನ – ಶ್ರೀನಿವಾಸ ಬೆಂಗಳೂರು
~
English Summary:
Sri Sri Raghaveshwara Bharati Swamiji started observing 22nd Chaturmasya Vrata at Ramashrama – Girinagar. Vyasapooja, Sri Krishnadi poojas and other rituals performed by Sri Swamiji as part of the function. Over 2 thousands of shishyas gathered at the venue amidst of heavy rain. Chaturmasya will be on till next 2 months.

ಫೋಟೋ:


Audio:

Download: Link

Facebook Comments Box