08 – 11 -2015 :ಮುಳ್ಳೇರ್ಯ.
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲವ್ಯಾಪ್ತಿಯ ಎಣ್ಮಕಜೆ ವಲಯ ಸಭೆಯು ಬಾಳೆಮೂಲೆ ನರಸಿಂಹ ಭಟ್ಟರ ನಿವಾಸದಲ್ಲಿ ನಿವಾಸದಲ್ಲಿ ಜರಗಿತು.
ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಮಂಡಲ ಕೋಶಾಧಿಕಾರಿ ಕುಮಾರ ಸುಬ್ರಹ್ಮಣ್ಯ ಪೈಸಾರಿ , ಮಂಡಲ ಧರ್ಮ ಪ್ರಧಾನ ಕೇಶವ ಪ್ರಸಾದ ಭಟ್ ಅವರು ವಿಶೇಷ ಉಪಸ್ತಿತರಿದ್ದು ಸಮಕಾಲೀನ ವಿಚಾರಗಳ ಬಗ್ಗೆ ಮತ್ತು ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿಗಳನ್ನಿತ್ತರು. ವಲಯ ಅದ್ಯಕ್ಷ ಶ್ರೀ ಶಿವಪ್ರಸಾದ್ ವರ್ಮುಡಿ ವಲಯದಲ್ಲಿ ನಡೆಯಲಿರುವ ವಿವಿಧ ವಿಭಾಗಗಳ ಚಟುವಟಿಕೆಗಳ ಸಮಗ್ರ ಮಾಹಿತಿಗಳನ್ನು ವಿವರಿಸಿದರು.
ವಲಯ ಪದಾಧಿಕಾರಿಗಳು, ಗುರಿಕ್ಕಾರರುಗಳು ಉಪಸ್ಥಿತರಿದ್ದರು. ಸಾಂಘಿಕ ರಾಮನಾಮಸ್ಮರಣೆ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣ ದೊಂದಿಗೆ ಸಭೆ ಮುಕ್ತಾಯಗೊಂಡಿತು.

ವರದಿ: ಗೋವಿಂದ ಬಳ್ಳಮೂಲೆ,
ಪ್ರಸಾರ ಪ್ರಧಾನರು- ಮುಳ್ಳೇರ್ಯ ಮಂಡಲ

Facebook Comments