ಶ್ರೀ ರಾಮಾಶ್ರಮ,ಬೆಂಗಳೂರು 27/08/2 015, ಗುರುವಾರ

ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ಗಣಿತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈಷ್ಣವೀ ಇವರಿಗೆ ನೀಡಲಾಯಿತು.
~
ಸರ್ವಸೇವೆ ಮುಳ್ಳೇರಿಯಾ ಮಂಡಲಾಂತರ್ಗತ ಸುಳ್ಯ, ಈಶ್ವರಮಂಗಲ, ಗುತ್ತಿಗಾರು, ಕೊಡಗು ವಲಯದವರಿಂದ ನಡೆಯಿತು.
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಅರವಿಂದ ಭಟ್, ಮಹಾಮಂಡಲದ ಅಧ್ಯಕ್ಷ ಡಾ.ವೈ.ವಿ ಕೃಷ್ಣಮೂರ್ತಿ, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಛಾತ್ರಚಾತುರ್ಮಾಸ್ಯ ವಿವಿಧ ಸಮಿತಿ ಅಧ್ಯಕ್ಷ ಯು.ಎಸ್.ಜಿ ಭಟ್, ಜಿ,ಕೆ.ಹೆಗಡೆ ಗೋಳಗೋಡ ಮತ್ತಿತರರು ಉಪಸ್ಥಿತರಿದ್ದರು. ಕಾರ್ತಿಕ್ ನಿರೂಪಿಸಿದರು.

ಧರ್ಮಸಭೆ:

ತಾನು ಹೇಳಿದ್ದೇ ಸರಿ. ಅವನು ಹೇಳಿದ್ದು ತಪ್ಪು ಎಂಬ ಭಾವನೆಯಿಂದ ಜಗಳಗಳು ಸಂಭವಿಸುತ್ತವೆ. ಅವರವರ ಕೋನದಲ್ಲಿ ಅವರವರ ದೃಷ್ಟಿಕೋನ ಸರಿ ಇರುತ್ತದೆ. ಅವೆರಡು ದೃಷ್ಟಿಕೋನದ ಮಧ್ಯ ನಿಂತು ನೋಡಿದರೆ ನಿಜವಾದ ಸರಿ ಗೊತ್ತಾಗುತ್ತದೆ. ಅವನದ್ದೂ ಸರಿ ಇರಬಹುದಲ್ಲ ಎಂಬ ಭಾವನೆ ಬಂದರೆ, ಜಗತ್ತಿನಲ್ಲಿ ಜಗಳಗಳೇ ಇರುವುದಿಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀಶ್ರೀ ಹೇಳಿದರು.
ಗುರುವಾರ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಇಪ್ಪತ್ತೆಂಟನೇ ದಿನದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಗಜೇಂದ್ರಮೋಕ್ಷ’ ಪುಸ್ತಕದ ಲೋಕಾರ್ಪಣ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ನಮ್ಮ ಕಣ್ಣುಗಳಿಗೆ ಸೀಮಿತ ಶಕ್ತಿ. ಅತ್ಯಂತ ಸಣ್ಣ ವಸ್ತುವೂ ಗೋಚರಿಸುವುದಿಲ್ಲ, ದೊಡ್ಡದೂ ಗೋಚರಿಸುವುದಿಲ್ಲ. ತುಂಬಾ ದೂರದ ಹಾಗೂ ತುಂಬಾ ಹತ್ತಿರದ ವಸ್ತುಗಳೂ ಕಾಣುವುದಿಲ್ಲ. ಕತ್ತಲಿದ್ದರೂ ವಸ್ತು ಕಾಣುವುದಿಲ್ಲ, ಹಾಗೆಯೇ ತುಂಬಾ ಬೆಳಕಿದ್ದರೂ ಕಾಣುವುದಿಲ್ಲ. ಒಂದು ವಸ್ತು ಕಂಡರೂ ಅದರ ಒಂದು ಪಾಶ್ರ್ವ ಮಾತ್ರ ಕಾಣಿಸುತ್ತದೆ. ಇಷ್ಟೆಲ್ಲ ಸೀಮೆ ಇರುವ ಕಣ್ಣಿನಿಂದ ಸೀಮಾತೀತನಾದ ಭಗವಂತನನ್ನು ಅಳೆಯುತ್ತೇವೆ. ಭಗವಂತ ಇದನ್ನು ನೋಡಿ ನಗುತ್ತಿರುತ್ತಾನೆ ಎಂದರು.

Photos

SRI_0944

SRI_0946

ಆಗಸ್ಟ್ 28 ರ ಕಾರ್ಯಕ್ರಮಗಳು
ಛಾತ್ರಪುರಸ್ಕಾರ ಭೂಮಿಕಾ ಇವರಿಗೆ
ಶ್ರೀಭಾರತೀಪ್ರಕಾಶನದಿಂದ ಪ್ರಕಟಗೊಂಡ ‘ಗೋಕಥೆ-2 ಬಿಡುಗಡೆ
ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ, ಪಳ್ಳತ್ತಡ್ಕ, ಪೆರಡಾಲ, ಚಂದ್ರಗಿರಿ ವಲಯದವರಿಂದ ಸರ್ವಸೇವೆ

Audio:

Download: Link

video:

Facebook Comments