Author Sri Samyojaka

ಕೈರಂಗಳದಲ್ಲಿ ರಾಮಕಥಾ..

ಮಂಗಳೂರು. ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಕೈರಂಗಳದ ಅಮೃತಧಾರಾ ಗೋಶಾಲೆಯ ಆವರಣದಲ್ಲಿ  ಶ್ರೀರಾಮಕಥಾ ಆಯೋಜನೆಗೊಂಡಿದ್ದು, ದಿನಾಂಕ 5 ರಿಂದ ಪ್ರಾರಂಭಗೊಂಡು 9 ರ ವರೆಗೆ ನಡೆಯಲಿದೆ. ಪೂಜನ,ಪ್ರವಚನ.ಗಾಯನ, ವಾದನ, ಯಕ್ಷಗಾನ, ಚಿತ್ರಕಲೆ, ರೂಪಕಗಳ ಅದ್ಭುತ ದೃಶ್ಯ ವೈಭವಗಳೊಂದಿಗೆ ಪ್ರಸ್ತುತಗೋಳ್ಳಲಿದ್ದು,ಶಂಕರನಾರಾಯಣ ಕೊರಗಿಯವರ ರೂಪಕದಲ್ಲಿ ರಾವಣ, ಕುಂಭಕರ್ಣ ವಿಭೀಷಣ ಜನ್ಮ ವೃತ್ತಾಂತ ಮೇಳೈಸಲಿದೆ. ಖ್ಯಾತ… Continue Reading →

ವಿಜೃಂಭಣೆಯ ತ್ರಿಪುರಾಖ್ಯದೀಪೋತ್ಸವ.

ಗೋಕರ್ಣ. ಐತಿಹಾಸಿಕ ಯಾತ್ರಾಸ್ಥಳವಾದ ಗೋಕರ್ಣದ ಶ್ರೀ ಸಾರ್ವಭೌಮ ಮಹಾಬಲೇಶ್ವರ ದೇವರ ನಂದನಸಂವತ್ಸರದ  ಸಾಂಪ್ರದಾಯಿಕವಾದ ತ್ರಿಪುರಾಖ್ಯ ದೀಪೋತ್ಸವವು ೨೮ ಬುಧವಾರದಂದು ಅತ್ಯಂತ ವೈಭವದಿಂದ ಸಂಪನ್ನವಾಯಿತು.ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆದ ಈ ಇತಿಹಾಸಪ್ರಸಿದ್ಧ ಉತ್ಸವದಲ್ಲಿ ನೆರೆಯಜಿಲ್ಲೆಗಳ ಭಕ್ತರೂ ಸೇರಿದಂತೆ ಸಹಸ್ರಾರು ಸಂಖ್ಯೆಯ ಭಕ್ತರು  ಶ್ರದ್ಧಾಭಕ್ತಿಗಳಿಂದ ದೀಪವನ್ನು ಹಚ್ಚುವ ಮೂಲಕ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಪೂಜ್ಯಶ್ರೀಗಳು… Continue Reading →

ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳ ನವೀಕರಣಕ್ಕೆ ಶಿಲಾನ್ಯಾಸ.

ಗೋಕರ್ಣ. ಗೋಕರ್ಣಪರಿಸರದಲ್ಲಿರುವ ಕುಡ್ಲೆ ಸಾಗರತೀರದ ಬಳಿಯಿರುವ ಆಂಜನೇಯಜನ್ಮಭೂಮಿಯಲ್ಲಿ ಶ್ರೀರಾಮ ಹಾಗು ಆಂಜನೇಯ ದೇವಾಲಯಗಳ ನೂತನನಿರ್ಮಾಣಕ್ಕೆ ಇಂದು ವಿಧ್ಯುಕ್ತವಾಗಿ ಶಿಲಾನ್ಯಾಸವು ನೆರವೇರಿತು.ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ ಇಂದು ಗುರುವಾರ ಮಧ್ಯಾಹ್ನ ಸಂಪನ್ನವಾದ ಈಕಾರ್ಯಕ್ರಮದಲ್ಲಿ ಕೊಲ್ಕತಾದ ಉದ್ಯಮಿ ಶ್ರೀ ರಾಧೇಶ್ಯಾಂ ಗೋಯೆಂಕಾ ದಂಪತಿಗಳು ಹಾಗೂ ಶ್ರೀಮತಿ ಉಷಾ ಅಗರವಾಲ್ ಉಪಸ್ಥಿತರಿದ್ದು ಪೂಜಾದಿಕೈಂಕರ್ಯಗಳನ್ನು ನೆರವೇರಿಸಿದರು. ಹನುಮನುದಿಸಿದ ಭೂಮಿಯೆಂದು… Continue Reading →

ಬೆಳಕೀಯಲೆಂದೇ ಉಸಿರಾಡುವ ಪರಂಪರೆ – ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

ಬೆಳಕಿನ ಪ್ರಭುವಿನ, ಬೆಳಕಿನ ರಾಜ್ಯದ, ಬೆಳಕಿನ ಪ್ರಜೆಗಳಿಗೆ ಬೆಳಕಿನ ಹಬ್ಬದ ಬೆಳಗಿನಲ್ಲಿ, ಬೆಳಕಿನ ಬದುಕನ್ನು ಹಾರೈಸುವುದು ಬೆಳಕಿನಿಂದ, ಬೆಳಕಿಗಾಗಿ, ಬೆಳಕಿನಲ್ಲಿ, ಬೆಳಕಾಗಿ, ಬೆಳಕೀಯಲೆಂದೇ ಉಸಿರಾಡುವ ಪರಂಪರೆ ಶ್ರೀರಾಮಚಂದ್ರಾಪುರ ಮಠದ್ದು.  ಅಂತಹ ಪರಂಪರೆಯ ಪೀಠದಿಂದ ಬೆಳಕಿನ ಹಬ್ಬದ ಶುಭಹಾರೈಕೆಗಳನ್ನು ದೀಪಾವಳಿಯ ಸಂದರ್ಭದಲ್ಲಿ  ಹೊಸನಗರ ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ  ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಾಣಿಯ ಶಾಖಾಮಠದಲ್ಲಿ ನೀಡಿದರು. ಇದೇ… Continue Reading →

ಶ್ರೀಕ್ಷೇತ್ರಗೋಕರ್ಣದಲ್ಲಿ ಶಿವಗಂಗಾವಿವಾಹ

ಶ್ರೀ ಕ್ಷೇತ್ರ ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರನ ವಿವಾಹವು ದಿನಾಂಕ 13-11-2012 ಮಂಗಳವಾರ ನೆರವೇರಲಿದೆ.

ಬಜಕೋಡ್ಲು ಗೋಶಾಲೆಯಲ್ಲಿ ಶ್ರಮದಾನ

ದಿನಾಂಕ 6-10-12ರಂದು ಬಜಕೋಡ್ಲು ಗೋಶಾಲೆಯಲ್ಲಿ  ಹಸಿರು ಹುಲ್ಲಿನ ಬಿತ್ತನೆಯ ಶ್ರಮದಾನವು ನಡೆಯಿತು. ಸುಮಾರು 50 ಕಾರ್ಯಕರ್ತರು ಭಾಗವಹಿಸಿದ್ದರು. ಕುಟುಂಬಶ್ರೀ ಸ್ವಸಹಾಯ ಗುಂಪುಗಳ ಸದಸ್ಯರೂ ಭಾಗವಹಿಸಿದ್ದರು. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಯಿತು.

ಗಾಯತ್ರಿ ವಿಹಾರ ರಾಮಕಥಾ 2012: ವೀಡಿಯೋ

Bangalore, Sept 02 – 09, 2012:
Collection of all the videos of “Raamakatha” held at Palace Grounds, Bangalore:

ರುದ್ರಯಾನ ರಥಯಾತ್ರೆಯ ಶುಭಾರಂಭ

ಗೋಕರ್ಣ.೦೧. ಕೇರಳದ ಕಣ್ಣೂರಿನ ಶ್ರೀ ಧರ್ಮಶಾಸ್ತ ದೇವಾಲಯದಲ್ಲಿ ಅಕ್ಟೋಬರ ೩೧ರಿಂದ ನವೆಂಬರ ೧೧ ರವರೆಗೆ ಲೋಕಕಲ್ಯಾಣಕ್ಕಾಗಿಸಂಪನ್ನಗೊಳ್ಳಲಿರುವ ಅತಿರುದ್ರ ಮಹಾಯಾಗದ ಅಂಗವಾಗಿ ಆಯೋಜಿತವಾಗಿರುವ “ರುದ್ರಯಾನ ರಥಯಾತ್ರೆ”ಯು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹ-ಆಶೀರ್ವಾದಗಳೊಂದಿಗೆ ಇಂದು ಗೋಕರ್ಣದ ಶ್ರೀಮಹಾಬಲೇಶ್ವರ ದೇವರ ಸನ್ನಿಧಿಯಿಂದ ತನ್ನ ಯಾತ್ರೆಯನ್ನು ಪ್ರಾರಂಭಿಸಿತು. ಉಪಾಧಿವಂತಪುರೋಹಿತರಾದ ವೇ. ವಿಸ್ವನಾಥ ಭಟ್ಟ ಬಾಳೆಹಿತ್ಲು ಇವರು… Continue Reading →

ಅಂಬಾಗಿರಿ, ಸಿರಸಿ ಯಲ್ಲಿ “ಅಂಬಾ ಕಥಾ”

ಗೋಕರ್ಣದ ಚಿಂತಾಮಣಿ ವಿನಾಯಕನಿಗೆ ರಜತಕವಚದ ಸಮರ್ಪಣೆ

ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದ ಒಳಗಿರುವ ಚಿಂತಾಮಣಿ ವಿನಾಯಕ ದೇವರಿಗೆಂದು ನೂತನವಾಗಿ ನಿರ್ಮಿಸಲಾದ ರಜತ ಕವಚವನ್ನು ಗಣೇಶ ಚತುರ್ಥಿಯ ಶುಭ ದಿನವಾದ ಇಂದು ಸಮರ್ಪಿಸಲಾಯಿತು. ಶ್ರೀಮಹಾಬಲೇಶ್ವರ ಆತ್ಮಲಿಂಗದ ಮುಂಭಾಗದ ದಕ್ಷಿಣಪಾರ್ಶ್ವದಲ್ಲಿ ಸಂಸ್ಥಾಪಿತನಾಗಿರುವ ಬೇಡಿದ ಸತ್ಫಲಗಳನ್ನೆಲ್ಲ ನೀಡುವ ಕಾರಣಿಕ ದೇವರೆಂದೇ ಪ್ರಸಿದ್ಧನಾದ ಈ ಗಣಪತಿಗೆ ಆ ಕಾರಣದಿಂದಲೇ “ಚಿಂತಾಮಣಿ ಗಣಪತಿ” ಎಂದು ಪ್ರಸಿದ್ಧಿ. ಶ್ರೀಮಹಾಬಲೇಶ್ವರನನ್ನು ಅರ್ಚಿಸುವ ಮೊದಲು ಈ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑