ಶ್ರೀ ರಘೂತ್ತಮ ಮಠ ಕೆಕ್ಕಾರು : 14.08.2014, ಗುರುವಾರ

ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟೆ ಲೇಖಕರ ಭಾವವನ್ನು ಅಭಿವ್ಯಕ್ತಗೊಳಿಸಿದರು. ಪ್ರಾಯೋಜಕರಾದ ಗೇರಸೊಪ್ಪಾದ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೇಖರ ಭಟ್ಟ ಸೂರಾಲು ಶ್ರೀಗಳಿಂದ ಅನುಗ್ರಹ ಪಡೆದರು. ಇದೇ ಸಂದರ್ಭದಲ್ಲಿ ಮಾತೃ ಸಮಾವೇಶದ ಧ್ವನಿಮುದ್ರಿಕೆಯನ್ನು ಮೈಸೂರಿನ ಪ್ರಸಿದ್ಧ ವಕೀಲರಾದ ಒಡಿಯೂರು ಶಾಮ ಭಟ್ಟ ಲೋಕಾರ್ಪಣೆಗೊಳಿಸಿದರು. ಮಂಗಳೂರು ಮಂಡಲದ ಮುಡಿಪು, ಕೋಳ್ಯೂರು, ಕನ್ಯಾನ, ಹಾಗೂ ಬಾಯಾರು ವಲಯಗಳ ಸರ್ವಸೇವೆ ನಡೆಯಿತು. ದೂರದೂರಿಂದ ಬಂದಭಕ್ತರಿಗೆ ಹೃದಯದಾಳದಿಂದ ಶುಭ ಹರಸಿದ ಶ್ರೀಗಳು ಹೃದಯ ಸಾಮಿಪ್ಯವಿದ್ದರೆ ದೂರ ಎಂಬ ಭಾವ ಬರಲಾರದು ಎಂದು ನುಡಿದರು. ಅಚವೆ ಹಾಗೂ ಹಿಲ್ಲೂರಿನ ಗ್ರಾಮಪಂಚಾಯತದ ಅಧ್ಯಕ್ಷರುಗಳ ನೇತ್ರತ್ವದಲ್ಲಿ ಬಂದ ನೂರಾರು ಭಕ್ತರು ಸಮಗ್ರಪೂಜಾ ಸೇವೆ ಸಲ್ಲಿಸಿ ಶ್ರೀಗಳ ಪೂರ್ಣಾನುಗ್ರಹ ಪಡೆದರು. ಜಯಚಾತುರ್ಮಾಸ್ಯ ಸಮಿತಿಯಿಂದ ಚಂಡೀಹವನ ನಡೆಸಲಾಯಿತು. ಶ್ರೀ ಆಂಜನೇಯನ ಸನ್ನಿಧಿಯಲ್ಲಿ ಕುಮಟಾ ಹೊನ್ನಾವರ ಮಂಡಲದ ವತಿಯಿಂದ ಒಡೆ ಕಣಜಸೇವೆ ನಡೆಯಿತು. ಒಂದು ವಾರದಿಂದ ಅಖಂಡ ಭಜನಾ ಸೇವೆ ಸಲ್ಲಿಸಿದ ತಂಡಗಳನ್ನು ಶ್ರೀಗಳು ಹರಸಿದರು. ಎಸ್. ಜಿ. ಭಟ್ಟ ಕಬ್ಬಿನಗದ್ದೆ ನಿರೂಪಿಸಿದರು.

ಶ್ರೀ ಶ್ರೀಗಳ ಪ್ರವಚನ:

’ಹೃದಯ ಸಾಮಿಪ್ಯವಿದ್ದರೆ ದೂರ ಎಂಬ ಭಾವ ಬರಲಾರದು’

ಗೌತಮರಿಗೆ ಅದ್ಭುತ ವ್ಯಕ್ತಿತ್ವವಿದೆ. ಅಹಲ್ಯೆ ಸೌಂದರ್ಯದ ಪ್ರತಿರೂಪವಾದರೆ ಗೌತಮರು ಸಂಯಮದ ಪ್ರತಿರೂಪ. ಅಹಲ್ಯೆಗೆ ಕೊಟ್ಟದ್ದು ಶಾಪವಲ್ಲ. ಅದು ಒಂದು ಚಿಕಿತ್ಸೆ. ಆ ಮೂಲಕ ಆಕೆಗೆ ರಾಮ ದರುಶನದ ಭಾಗ್ಯವನ್ನಿತ್ತರು ಎಂದು ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ ಮೂವತ್ನಾಲ್ಕನೇ ಕೃತಿ ಮಹರ್ಷಿ ಗೌತಮವನ್ನು ಲೋಕಾರ್ಪಣೆಗೊಳಿಸಿ ಶ್ರೀಗಳು ನುಡಿದರು. ಜಯ ಚಾತುರ್ಮಾಸ್ಯದ ಧರ್ಮ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಅಂದು ನಡೆದ ಮಾತೃ ಸಮಾವೇಶ ಒಂದು ಹೃದಯ ಸಂವಾದ. ಮಾತೃತ್ವ ಗೆಲ್ಲಲಿ. ಎಲ್ಲ ತಾಯಂದಿರಲ್ಲಿ ಮಾತೃ ಭಾವ ಬೆಳೆಯಲಿ ಎಂದು ಕರೆನೀಡಿದರು.

Facebook Comments