ಮುಂಬಯಿ: ರಕ್ತದಾನ ಶಿಬಿರದ ವರದಿ

ಶ್ರೀಮಜ್ಜಗದ್ಗುರು ಶಂಕಾರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ, ಮುಂಬಯಿ ವಲಯ ಹಾಗೂ ಡೊಂಬಿವಿಲಿ ವಲಯಗಳು ಮತ್ತು ಶ್ರೀ ಪೇಜಾವರ ಮಠ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 22-11-2015 ರಂದು ಸತತ  11 ನೇ ವರ್ಷದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮ ಬೆಳಿಗ್ಗೆ 8.00 ಘಂಟೆಗೆ ಶಂಖನಾದ ಹಾಗು ಗುರುವಂದನೆಯಿಂದ ಪ್ರಾರಂಭವಾಯಿತು.  ಇದನ್ನು ಮುಂಬಯಿಯ ಜೆ ಜೆ ಆಸ್ಪತ್ರೆಯ ಘಟಕದವರೊಂದಿಗೆ ಆಯೋಜಿಸಲಾಗಿತ್ತು   ಒಟ್ಟು 94 ರಲ್ಲಿ 85 ಜನರು  ರಕ್ತದಾನ ಮಾಡಿದರು . ಮುಂಬಯಿ ಹಾಗು ಡೊಂಬಿವಿಲಿ ವಲಯದ  ರಕ್ತದಾನ ಶಿಬಿರದ ಇದುವರೆಗಿನ  ಒಂದು ದೊಡ್ಡ ಪ್ರಮಾಣದ  ದಾಖಲೆ.

ಅನಂತರ ಮುಂಬಯಿ ವಲಯದ ತಿಂಗಳ ಸಭೆ ನೆರವೇರಿತು. ಕರ್ನಾಟಕ ರಾಜ್ಯ ಸರ್ಕಾರ , ಗೋಕರ್ಣ ಠಾಣೆಯಲ್ಲಿ ದಾಕಲಾಗಿದ್ದ  ನಕಲಿ ಸಿ ಡಿ ಪ್ರಕರಣವನ್ನು ಯಾವುದೇ ಕಾರಣವಿಲ್ಲದೆ ಹಿಂಪಡೆದಿದೆ.  ಈ ವಿಚಾರ ಸರಕಾರ ಹೊರಡಿಸಿದ ಆದೇಶ ಸರಿಯಲ್ಲ ಎಂದು ಶ್ರೀ ಮಠದ ಮುಂಬಯಿ  ವಲಯ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದೆ. ಮುಂಬಯಿ ವಲಯದ ಅಧ್ಯಕ್ಷರು ಶ್ರೀ ಕೆ ಎಸ್ ಭಟ್ ಕೂಳೂರು, ಕಾರ್ಯದರ್ಶಿ ಶ್ರೀಮತಿ ಉಷಾ ಭಟ್,ಶ್ರೀ ಪ್ರಕಾಶ್ ಭಟ್, ಶ್ರೀಮತಿ ಈಶ್ವರಿ ಭಟ್, ಶ್ರೀ ಕೆ. ಎಸ್. ಭಟ್ ಕೊಳಾಡ್  ಹಾಗು ಇತರ ಗುರುಭಕ್ತರು ಈ ಸಭೆಯಲ್ಲಿ  ಉಪಸ್ಥಿತರಿದ್ದರು.

IMG-20151122-WA0014 IMG-20151122-WA0015 IMG-20151122-WA0024 IMG-20151122-WA0029 IMG-20151122-WA0032 IMG-20151124-WA0001

Facebook Comments