LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಹರೇರಾಮ

Author: ; Published On: ಶುಕ್ರವಾರ, ಜನವರಿ 14th, 2011;

Switch to language: ಕನ್ನಡ | English | हिंदी         Shortlink:

ರಾಮನ ಈ ತಾಣದಲ್ಲಿ ಜೊತೆಯಾದವರೇ..

‘ಹರೇರಾಮ’ ನಿಮಗೆ ಹೇಗನಿಸಿತು ?

‘ಹರೇರಾಮ’ದಿಂದ ನಿಮ್ಮ ಬದುಕಿಗೆ ಏನಾಯಿತು ?

‘ಹರೇರಾಮ’ ಇನ್ನೇನಾಗಬೇಕಿತ್ತು ?

ನಿಮ್ಮಿಂದಲೇ ಕೇಳುವಾಸೆ..

ಹೇಳುವಿರೇ ??

85 Responses to ಹರೇರಾಮ

 1. Raghavendra Narayana

  I am discovering / re-discovering myself after my engagement with Hareraama.
  I am re-discovering this world.
  .
  Shri Gurubhyo Namaha

  [Reply]

 2. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಬದುಕು ಸಾರ್ಥಕವಾಯಿತು

  [Reply]

 3. Anuradha Parvathi

  ಎನು ಹೇಳಲಿ? Hareraama is the best thing to happen in my life. ಬದುಕಿಗೆ ಹೊಸ ತಿರುವು ಸಿಕ್ಕಿತು. ಹಸಿದ ಆತ್ಮಕ್ಕೆ ಮೃಷ್ಟಾನ್ನ ಭೋಜನ ಸಿಕ್ಕಿದ ಹಾಗೆ, ಸಂಸಾರದಲ್ಲಿ ಮುಳುಗುತ್ತಿದ್ದವಳಿಗೆ ಆಸರೆ ಸಿಕ್ಕ ಹಾಗೆ ಇತ್ಯಾದಿ, ಇತ್ಯಾದಿ. ಸಮಾನ ವಿಚಾರವಿರುವವರು ಸೇರುವ ತಾಣವೇ ಹರೇರಾಮ. ಎಷ್ಟೂ ಜನರ ಪರಿಚಯವಾಯಿತು.
  ರಾಮ, ರಾಜ್ಯ ಬ್ಲಾಗ್ ನಿಂದ ಎಷ್ಟೋ ವಿಚಾರಗಳು ತಿಳಿದುಕೊಂಡೆ.
  ಶ್ರೀಮುಖ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. video ಇದ್ದರೆ ಚೆನ್ನಾಗಿತ್ತು.
  ಸಮ್ಮುಖದಲ್ಲಿ ಶಿಷ್ಯರ ಭಾವನೆಗಳು, ಅವರ ಅನುಭವಗಳು ತಿಳಿದುಕೊಂಡು, ರೋಮಾಂಚನವಾಯಿತು. ನಮ್ಮ ನಂಬಿಕೆಗಳಿಗೆ ಇಂಬು ಕೊಟ್ಟಹಾಗೆ ಆಯಿತು.
  ಸಂಸ್ಥಾನ ನಮ್ಮ ’comments’ ಓದುತ್ತಾರೆ, ಉತ್ತರ ಕೊಡುತ್ತಾರೆ ಅನ್ನೂದೇ ಒಂದು humbling experience.

  ಪ್ರಶ್ನೋತ್ತರದ ಒಂದು ವೇದಿಕೆ ಬೇಕು ಹರೇರಾಮದಲ್ಲಿ.

  [Reply]

  Raghavendra Narayana Reply:

  ನಿಜ, ಪ್ರಶ್ನೋತ್ತರದ ಒ೦ದು ವೇದಿಕೆ ಬೇಕು.
  .
  ಶ್ರೀ ಗುರುಭ್ಯೋ ನಮಃ

  [Reply]

 4. SUBRAHMANYA B.R.

  ಶ್ರೀ ಗುರುಭ್ಯೋ ನಮಃ

  ಶ್ರೀ ರಾಮನ ಹಾಗು ಗುರುಗಳ ಮು೦ದೆ, ಶಿಷ್ಯರ ಮದ್ಯೆ ಕುಳಿತ ನಿತ್ಯಾನುಭವ.

  ಹರೇ ರಾಮ ‘ ಇ’ ಗುರುಗಳನ್ನು ದಿನವೂ ನೋಡಲು ಅನುವು ಮಾಡಿಕೊಟ್ಟಿದೆ. ನಿತ್ಯವೂ ಗುರು ದರ್ಶನವಾಗುತ್ತಿದೆ. ನಮ್ಮ ಸಮಾಜದ ದಿನನಿತ್ಯದ ಸಮಸ್ಯೆಯ ಬಗ್ಗೆ ಚರ್ಚೆಗಾಗಿ ವೇದಿಕೆ ಇದ್ದರೆ ಚೆನ್ನ.ಇದರೊಟ್ಟಿಗೆ ಗುರುಗಳ ಮಾರ್ಗದರ್ಷನ ಬೇಕೆ ಬೇಕು. ಪ್ರತಿದಿನ ಗುರುಗಳ ‘ ಬ್ಲೊಕ್’ ತು೦ಬಿರಲಿ. updates ಇರಲಿ.

  [Reply]

 5. Shreekant Hegde

  ಹರೇ ರಾಮ, ಗುರುಗಳೇ ಪ್ರಣಾಮ,
  ‘ಹರೇ ರಾಮ’ ಜಾಲಂಗಳದ ಸುಮಂಗಳ,
  ಆರಾಮ, ಆ ರಾಮನು ಇಲ್ಲಿ ಮನೋಭಿರಾಮ,
  ಶ್ರೀರಾಮಾರಾಧಕರ ತಮ್ಮ ಸಾನ್ನಿಧ್ಯ ಸಿಗದಿದ್ದಾಗಲೂ
  ಈ ಮಾಧ್ಯಮದಿಂದ ಶ್ರೀ ಚರಣ ಸಂಪರ್ಕ ದೊರಕಿದ
  ನಯನಾಭಿರಾಮ, ಮಂಗಳಧಾಮ, ಧನ್ಯ ಹವ್ಯಕಸೋಮ,
  “ಶ್ರೀರಾಮ ರಾಮ ರಘುನಂದನ ರಾಮ ರಾಮ ||

  [Reply]

 6. ಮಂಗ್ಳೂರ ಮಾಣಿ...

  ಶ್ರಧ್ಧೆಯ ಪ್ರಣಾಮಗಳೊಂದಿಗೆ,
  ನೋದುತ್ತಿದ್ದ ಹಲವಾರು website ಗಳಲ್ಲಿ ಮನಸ್ಸಿಗೆ ಹತ್ತಿರವಾದ – ಆತ್ಮಕ್ಕೆ ಆಹಾರ ಕೊಟ್ಟ site ಇದೊಂದೇ.
  ತಪ್ಪು ಮಾಡುತ್ತಿದ್ದಾಗ ತಿಳಿಹೇಳಿದ್ದಿದೆ, ಚಿಂತೆಗಳಿಗೆ – ಉದ್ವಿಗ್ನ ಮನಸ್ಸಿಗೆ ಶಾಂತಿಯ ಸಿಂಚನ ಮಾಡಿದ್ದಿದೆ.
  ಮನದ ಹಲವಾರು ಸಂಶಯಗಳಿಗೆ ಗುರುಗಳೇ ಉತ್ತರಿಸಿದ್ದು, ಹೊಸ ಹೊಸ ಆಲೋಚನೆಗಳಿಗೆ ಕಾರಣ ಮಾಡಿಕೊಟ್ಟದ್ದು ಹರೇ ರಾಮ.
  ಜೀವನಕ್ಕೆ ಹೊಸ ಹುರುಪು ಧ್ಯೆಯ ಕೊಟ್ಟಿದ್ದು ಹರೇ ರಾಮ.
  ಮನದ ಕಿವಿ ತೆರೆಯುವನ್ತೆ ಮಾಡಿದ್ದು e-ಮಠ.
  ಹೀಗೇ ಮುನ್ದುವರೆಯಲೆಂದು ಬಯಕೆ.
  ಇಲ್ಲಿರುವ ಲೇಖನ ಮತ್ತು audio fileಗಳನ್ನು print ಅಥವಾ download ತೆಗೆಯುವ ಸೌಲಭ್ಯ ಇದ್ದರೆ ಹೇಗೆ?

  [Reply]

 7. Vidya Ravishankar

  ಹರೇರಾಮ.

  ಶ್ರೀ ಗುರುಭ್ಯೋ ನಮಃ

  ಹರೇರಾಮದಿಂದಾಗಿ ಪ್ರತಿದಿನ-ಪ್ರತಿಕ್ಷಣ ಶ್ರೀ ಗುರುಗಳ ಸಂಪರ್ಕ ಸಾದ್ಯವಾಗಿದೆ. ಬ್ಲೋಗ್, ಅಂಕಣ, ಪ್ರವಚನಗಳು ತುಂಬಾ ಚೆನ್ನಾಗಿ ಮನಮುಟ್ಟುವಂತೆ ಮೂಡಿಬರುತ್ತಿದೆ. ಸಮ್ಮುಖದಲ್ಲಿ ಸಾಮಾನ್ಯ ಶಿಷ್ಯರಿಗೂ ತಮ್ಮ ಭಾವನೆಗಳನ್ನು ವ್ಯಕ್ತ್ತಪಡಿಸಲು ಅವಕಾಶವಿದೆ. ಈ “ಹರೇರಾಮ”ವು ಪ್ರತಿಮನೆಯ ಮನಗಳನ್ನು ತಲುಪುವಂತಾಗಲಿ. ಪ್ರತಿಮನಕ್ಕೂ ಶ್ರೀರಾಮದೇವರ(ಶ್ರೀ ಗುರುಗಳ) ರಕ್ಷೆಸಿಗುವಂತಾಗಲಿ ಎಂದು ಹಾರೈಕೆ.

  ಹರೇರಾಮ.

  [Reply]

 8. DR.RAVISHANKAR YELKANA

  ಹರೇರಾಮ.

  ಶ್ರೀಗುರುಭ್ಯೋ ನಮಃ.

  ಆಶೀರ್ವಚನ, ರಾಮ-ರಾಜ್ಯ, ಶ್ರೀಮುಖದಿಂದಾಗಿ ಶ್ರೀಗುರುಗಳ ಸಾಮೀಪ್ಯದರ್ಶನವಾಗುತ್ತಿದೆ. ಈ ಹರೇರಾಮವು ದಣಿದಮನಕ್ಕೆ ಉಲ್ಲಾಸ ನೀಡುತ್ತಿದೆ. ಆದ್ಯಾತ್ಮದ ಹಸಿವು ನೀಗುವ ತಾಣವಾಗಿದೆ. ಈ “ಹರೇರಾಮ”ವೆಂಬ ಜ್ಯೋತಿಯು ಪ್ರತಿಯೊಬ್ಬನ ಮನಬೆಳಗಲಿ.

  ಹರೇರಾಮ.

  [Reply]

 9. gopalakrishna pakalakunja

  ಹರೇ ರಾಮ!
  ದಿನ ನಿತ್ಯವೂ ಶ್ರೀ ಸಾನ್ನಿಧ್ಯದಲ್ಲಿ ಕೆಲವಾರು ಗಂಟೆಗಳನ್ನು ಕಳೆನಾನುಭವ…
  ಅತ್ಯಂತ ಪ್ರೀಯವೂ ಹಿತವೂ ಆಗುವ ಇಂತಹ ಇ-ಜಗತ್ತು ಇನ್ನೊಂದಿಲ್ಲ…
  ವನ ಸುಮ ಗಳದೆಷ್ಟು ಕಾಡಿನ ಸೊಬಗನ್ನ ಹೆಚ್ಹಿಸಿ ಜನ್ಮ ಸಾರ್ಥಖ್ಯ ಪಡೆದರೂ,
  ಸಿರಿ ಚರಣ ಸೇರಿ ಪ್ರಸಾದವಾಗಿ ಮುಡಿಯೇರಿದರೆ ಅದು ಸೆಳವ ಗಮನವೇ ಬೇರೆ..
  ಹಲವರ ಅನುಭವ ಸಾರಾಮೃತಧಾರಾಸುಧೆ ಇದು ನಿರಂತರವಾಗಿ ಹರಿಯುತ್ತಿರಲಿ
  ಶ್ರೀ ಸಂಸ್ಥಾನದವರ ಅನುಗ್ರಹವರ್ಷಾಧಾರೆ ಸತತ ವಾಗಿರಲಿ ನಮ್ಮನಿಮ್ಮೆಲ್ಲರ ಮೇಲೆ.

  [Reply]

 10. nandaja haregoppa

  ಹರೇ ರಾಮ

  ಬಿಸಿಲಲ್ಲಿ ನೆಡೆದು ಬಳಲಿ ಬಾಯಾರಿ ಬ೦ದವರು

  ಸಿಹಿ ನೀರು ಕುಡಿದು ಮರದ ನೆರಳಲ್ಲಿ ಕುಳಿತು

  ದಣಿವಾರಿಸಿಕೊ೦ಡ೦ತಿದೆ ಈ ಸು೦ದರ ತಾಣ

  ಇನ್ನೇನು ಬೇಕು ?

  [Reply]

 11. shrinivas hegde

  hare raama,

  nannadondu sanna praarthane gurugale, hindu panchaangada tithi, vaara, paksha edela mukaputa dalli kanuvantadre esto janrige valledu anstu…..

  [Reply]

 12. seetharama bhat

  ಹರೇರಾಮ——

  ಇಲ್ಲೋ-
  ರಾಮ ಸಿಗುವನು ಇಲ್ಲಿ ಆರಾಮವಾಗಿ
  ಗುರುದೊರೆಯುವನು ಇಲ್ಲಿ ಗುರುತರವಾಗಿ
  ಹರಿಹರರಿರುವರು ಇಲ್ಲಿ ನಮ್ಮ ಹತ್ತಿರವಾಗಿ
  ನೆರವಾಗುವುದು ಇದೆಲ್ಲಾ ನಮಗೆ ನೇರವಾಗಿ.

  ಇಲ್ಲವೋ–
  ನಿಧಿಯಾಗಿದೆ ಸ೦ಸ್ಥಾನದ ಸನ್ನಿಧಿ
  ಸದಾ ಹರಿದಿದೆ ದಾರ್ಮಿಕತೆಯ ಶರಧಿ
  ಶ್ರುತಿಯಾಗಿದೆ ಎಲ್ಲರ ಪ್ರಸ್ತುತಿ
  ಮತಿಗೆ ಬರುವುದೆ ಗೆಳೆಯರ ಅಭಿಮತಿ.

  ಬೇಕು–
  ದಿನಾ ಒ೦ದು ಹೊಸತನದ ಪ್ರವೇಶ
  ಗುರುವಿನಿ೦ದ ಬೇಕು ಒ೦ದು ಉಪದೇಶ
  ಸ೦ದೇಹ,ದುಃಖ,ದುಮ್ಮಾನಗಳಿಗೆ ಒ೦ದು ಸ೦ದೇಶ
  ಪ್ರಶ್ನೆ-ಉತ್ತರ,ವಿಷಯ ಚರ್ಚೆಗಳಿಗೆ ಒ೦ದು ಅವಕಾಶ.

  ಸಾಕು–
  ಶ್ರಿ ಮುಖ,ಸಮ್ಮುಖ,ಪ್ರಮುಖ, ಮಾದ್ಯಮಗಳ ಅತೀವ ಸುಖ
  ರಾ ಮ-ರಾಜ್ಯಗಳ ರಾರಾ, ಚಿತ್ರ-ಪ್ರವಚನಗಳ ದಾರಾ
  ಮ ಠದ ಸುದ್ದಿ-ಪ್ರವಾಸಗಳ ಪ್ರಭೇದ,ಶ್ರಿಗುರುವಿನ ಪೂರ್ಣಾಶೀರ್ವಾದ.

  ಗುರುಬ್ಯೋನಮಃ

  [Reply]

 13. Raghavendra Narayana

  ಗುರುಗಳೇ, ಈ ಮೊದಲೇ ಕೋರಿಕೊ೦ಡ೦ತೆ, ಮಕ್ಕಳಿಗಾಗಿ ಒ೦ದು ವಿಭಾಗ ಇದ್ದರೆ ಒಳ್ಳೆಯದು. ಬಹಳಷ್ಟು ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಇ೦ಟರನೆಟ್ ಉಪಯೋಗಿಸಲು ಶುರು ಮಾಡುತ್ತಾರೆ. ಮಕ್ಕಳು ಹರೇರಾಮದ೦ತ ವೆಬ್ ಸೈಟ ಉಪಯೋಗಿಸಿದರೆ ಒಳ್ಳೆಯದು ಎ೦ದು ನನ್ನ ಭಾವನೆ. ಸತ್ಸ೦ಗ ಅತ್ಯುನ್ನತ್ತ.
  ಗುರುಗಳ ಹಿತನುಡಿಯೊ೦ದಿಗೆ, ರಾಮಾಯಣ ಮಹಾಭಾರತದಲ್ಲಿ ಇರುವ ಉಪಕಥೆಗಳನ್ನು ಪ್ರಕಟಿಸಬಹುದು, ಮಕ್ಕಳೇ ಪ್ರಶ್ನೆಗಳನ್ನು ಕೇಳುವ ಹಾಗಿದ್ದರೆ – ಗುರುಗಳು ಉತ್ತರಿಸುವ ಹಾಗಿದ್ದರೆ ಅತ್ಯದ್ಭುತ.
  .
  ಶ್ರೀ ಗುರುಭ್ಯೋ ನಮಃ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಹರೇ ರಾಮ,
  ಮಕ್ಕಳಿಗೆ ಸತ್ಸಂಗ ಅತುನ್ನತ ಸರಿಯೇ….. ನಮ್ಮ ಮುಂದಿನ ಪೀಳಿಗೆಯು ಪ್ರಕೃತಿಯ ಮಡಿಲಲ್ಲಿ, ನೈಜ್ಯವಾದ ಸತ್ಸಂಗವನ್ನು ಪಡೆಯುವಂತಾದರೆ ಒಳ್ಳೆದೇನೋ… ಅನ್ನಿಸುತ್ತಿದೆ. ಅವರಿಗೆ ನೇರವಾಗಿ internet ನತ್ತ
  ಜಾಸ್ತಿ ಒಲವು ಮೂಡಿಸುವ ಬದಲಿಗೆ ನಾವು ತಂದೆ ತಾಯಂದಿರು ಮಕ್ಕಳನ್ನು ಯಾವ ತರ ಆದರ್ಶವಾಗಿ ಬೆಳೆಸಬಹುದು…. ಎನ್ನುವಲ್ಲಿ ಮಾರ್ಗದರ್ಶನ ಇದ್ದರೆ ಒಳ್ಳೆದೇನೋ…..ಅನ್ನಿಸುತ್ತಿದೆ.

  [Reply]

  SUBRAHMANYA B.R. Reply:

  ಹರೇ ರಾಮ
  ಮಕ್ಕಳಿಗಾಗಿ ಸತ್ಸ೦ಗ ಸ೦ಗಡ ಪಾಲಕರಿಗಾಗಿಯು ಇ೦ತಹ ಒ೦ದು dedicated section ಇದ್ದರೆ ಪಾಲಕರು ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಲು ಸಾಧ್ಯವಾಗಬಹುದೇನೋ, ಎಷ್ಟೇ೦ದರು ” ಮನೆಯೆ ಮೊದಲ ಪಾಠಶಾಲೆ- ಜನನಿ ತಾನೆ ಮೊದಲ ಗುರು” ಅಲ್ಲವೆ…..

  [Reply]

 14. Raghavendra Narayana

  Requesting all the viewers to share their experiences and feedback, you would be sharing and spreading the happiness.
  ಎಲ್ಲರೂ ತಮ್ಮ ಅನಿಸಿಕೆ ಅನುಭವ ಸಲಹೆಗಳನ್ನು ಹ೦ಚಿಕೊ೦ಡರೆ ಒಳ್ಳೆಯದು ಎ೦ದು ನನ್ನ ಭಾವನೆ ಮತ್ತು ಕೋರಿಕೆ.
  .
  ಶ್ರೀ ಗುರುಭ್ಯೋ ನಮಃ

  [Reply]

 15. Raghavendra Narayana

  ಗುರುಗಳೇ,
  ಮಿಸ್ಸಿ೦ಗ್ ರಾಜ್ಯ ಬ್ಲಾಗ್ಸ್. ರಾಜ್ಯ ಬ್ಲಾಗ್ಸ್ ಮತ್ತೇ ಎ೦ದಿನ೦ತೆ ಬರಲು ಶುರುವಾದರೆ ಅದ್ಭುತ..
  .
  ವಸ೦ತನೆ೦ದರೇನು ಎ೦ದು ಅನುಭವಿಸಿದ್ದು “ಮಾರನ ಮೀರಲು ‘ಮೂರನೇ ಕಣ್ಣು’…!’ ಬ್ಲಾಗಲ್ಲಿ
  http://hareraama.in/blog/%e0%b2%ae%e0%b2%be%e0%b2%b0%e0%b2%a8-%e0%b2%ae%e0%b3%80%e0%b2%b0%e0%b2%b2%e0%b3%81-%e2%80%99%e0%b2%ae%e0%b3%82%e0%b2%b0%e0%b2%a8%e0%b3%87-%e0%b2%95%e0%b2%a3%e0%b3%8d%e0%b2%a3%e0%b3%81%e2%80%99/
  .
  ಮೃತ್ಯುವನ್ನು ವೀರನ೦ತೆ ಸ್ವಾಗತಿಸಬೇಕು ಎ೦ದು ಅನಿಸಿದ್ದು ’ಮೃತ್ಯು೦ವಿ೦ ಭಯವೇಕೆ?’ ಬ್ಲಾಗ್ ಓದಿದ ಮೇಲೆ
  http://hareraama.in/blog/%e0%b2%ae%e0%b3%83%e0%b2%a4%e0%b3%8d%e0%b2%af%e0%b3%81%e0%b2%b5%e0%b2%bf%e0%b2%82-%e0%b2%ad%e0%b2%af%e0%b2%b5%e0%b3%87%e0%b2%95%e0%b3%86/
  .
  ‘ಆನೆ ಬಲಿ (ಆನ೦ದ ನೆಮ್ಮದಿ ಬಲಿ), ಎ೦ತಹ ಸರಳ ಸೂತ್ರ, ಆದರೂ ನಾವು ಅದೆಷ್ಟೂ ದೂರ ಆನೆಯಿ೦ದ..

  http://hareraama.in/blog/%e0%b2%86%e0%b2%a8%e0%b3%86-%e0%b2%ac%e0%b3%87%e0%b2%95%e0%b2%af%e0%b3%8d%e0%b2%af%e0%b2%be/
  http://hareraama.in/blog/all-about-mother/
  .
  ’ಯುದ್ಧ – ಮೋಕ್ಷದಾಟವೋ..? ಮೋಸದಾಟವೋ..?’ ಓದಿ ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಎನಿಸಿತು.. ಅದೊ೦ದು ಅಜ್ಞಾತ ಭಾರತವೆನಿಸಿತು.. ಖ೦ಡಿತ ಭಾರತ ವಿಶ್ವಕ್ಕೆ ಗುರು.
  http://hareraama.in/blog/%e0%b2%af%e0%b3%81%e0%b2%a6%e0%b3%8d%e0%b2%a7-%e0%b2%ae%e0%b3%8b%e0%b2%95%e0%b3%8d%e0%b2%b7%e0%b2%a6%e0%b2%be%e0%b2%9f%e0%b2%b5%e0%b3%8b-%e0%b2%ae%e0%b3%8b%e0%b2%b8%e0%b2%a6%e0%b2%be%e0%b2%9f/
  .
  ‘ಆಲಿಸಿರಿ ದೊರೆಗಳೇ..!’ ಓದಿ ಆಶ್ಚರ್ಯವಾಯಿತು ದುಖಃವಾಯಿತು.. ವಿಶ್ವಜನನಿ ಎ೦ದರೆ ಏನು ಎ೦ದು ತಿಳಿಯಿತು.
  http://hareraama.in/blog/%e0%b2%86%e0%b2%b2%e0%b2%bf%e0%b2%b8%e0%b2%bf%e0%b2%b0%e0%b2%bf-%e0%b2%a6%e0%b3%8a%e0%b2%b0%e0%b3%86%e0%b2%97%e0%b2%b3%e0%b3%87/
  .
  ‘ಅಮ್ಮನ ಮಗುವಿಗೆ – ಅಮ್ಮನ ಕುರಿತು..!!’ – ನಮ್ಮನೆಲ್ಲ ಅದೆಷ್ಟು ಎಚ್ಚರಿಸಿತು, ಕಣ್ಣ ಮು೦ದೆ ಇರುವ ದೇವರನ್ನು ಮರೆತಿದ್ದೇವು.. ಭಾವ ಭಾಗಿರಥಿ ಸುರಿಯಿತು..
  http://hareraama.in/blog/all-about-mother/
  .
  ’ಕಣ್ಣು ಬೇಕಣ್ಣಾ ಕಣ್ಣು .. !!’ ಮೂರು ಭಾಗಗಳು, ಕಣ್ಣು ತೆರೆಸುವ ಲೇಖನ, ಶುರುವಾದ ರೀತಿ ಸಮಾಪ್ತಿಗೊ೦ಡ ರೀತಿ ಅದ್ಭುತ.
  http://hareraama.in/blog/%e0%b2%95%e0%b2%a3%e0%b3%8d%e0%b2%a3%e0%b3%81-%e0%b2%ac%e0%b3%87%e0%b2%95%e0%b2%a3%e0%b3%8d%e0%b2%a3%e0%b2%be-%e0%b2%95%e0%b2%a3%e0%b3%8d%e0%b2%a3%e0%b3%81-01/
  http://hareraama.in/blog/%e0%b2%95%e0%b2%a3%e0%b3%8d%e0%b2%a3%e0%b3%81-%e0%b2%ac%e0%b3%87%e0%b2%95%e0%b2%a3%e0%b3%8d%e0%b2%a3%e0%b2%be-%e0%b2%95%e0%b2%a3%e0%b3%8d%e0%b2%a3%e0%b3%81-%e0%b2%8e%e0%b2%b0%e0%b2%a1%e0%b2%a8/
  http://hareraama.in/blog/%e0%b2%95%e0%b2%a3%e0%b3%8d%e0%b2%a3%e0%b3%81-%e0%b2%ac%e0%b3%87%e0%b2%95%e0%b3%87-%e0%b2%ac%e0%b3%87%e0%b2%95%e0%b2%a3%e0%b3%8d%e0%b2%a3%e0%b2%be-%e0%b2%ae%e0%b3%82%e0%b2%b0%e0%b2%a8%e0%b3%86/
  .
  ’ಈ ಪರಿ ನೋಡುವುದೇ… ಪರಿವಾರವ..?’ – ಸೂಪರ್ ಡೂಪರ್ ಹಿಟ್.. ಓದದವರಾರು, ಮನ ಮೀಡಿಯದದು ಯಾರಿಗೆ..
  http://hareraama.in/blog/ee-pari-noduvude-parivarava/
  .
  ‘ಮತ್ತೆ ಮತ್ತೆ ಬ೦ದೆ… ತ೦ದೇ….! ನೀ ಅಮೃತ ತ೦ದೆ….!’ – ಭಗವ೦ತ ಪ್ರತಿ ದಿನವೂ ನಮ್ಮ ಮನೆಗೆ ಬರುತ್ತಾನೆ ಎ೦ದರೆ…
  http://hareraama.in/blog/%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%ac%e0%b2%b0%e0%b3%81%e0%b2%b5-%e0%b2%a4%e0%b2%82%e0%b2%a6%e0%b3%86-%e0%b2%85%e0%b2%ae%e0%b3%83/
  .
  ‘ಮೂರು ಮೆಟ್ಟಿಲುಗಳ ಮೀರಿ ಮೆರೆವನೋ ಗುರುಮೂರುತಿ’ – ಸ್ವದರ್ಶನವೆನಿಸಿತು ಈ ಲೇಖನ.. ಅದ್ಭುತ ಮನೋಹರ..
  http://hareraama.in/blog/mooru-mettilugala-meeri-merevanao/
  .
  ‘ಅ-ಮೃತತಿಥಿ’ – My all time favourite.. ಗುರುಗಳ ಸಾಧು ಸ೦ತರ ಭಕ್ತರ ಭಾಗವತರ ಜ್ಞಾನಿಗಳ ಸಾಧನೆಯಿ೦ದ ಇರುವಿಕೆಯಿ೦ದ ನಮ್ಮ ದೇಶ ಇನ್ನು ಭಾರತವಾಗೆ ಉಳಿದಿದೆ, ಪೂರ್ಣವಾಗಿ ಇ೦ಡಿಯ ಆಗಿಲ್ಲ..
  http://hareraama.in/blog/amruta-tithi/
  .
  ಶ್ರೀ ಗುರುಭ್ಯೋ ನಮಃ

  [Reply]

 16. maruvala narayana

  ಹರೇ ರಾಮ ನಿಮಗೆ ಹೇಗನಿಸಿತು?

  ೧. ಶಂಕರಾಚಾರ್ಯರು ಆ ಯುಗದಲ್ಲಿ ಲಭ್ಗವಿದ್ದ ವಿಧಾನಗಳಲ್ಲಿ ನಮ್ಮ ಸಂಸ್ಕೃತಿಯನ್ನು ಪುನರುತ್ಥಾನ ಮಾಡಿದರೆ ಈ ಶಂಕರಾಚಾರ್ಯರು ee ಯುಗದಲ್ಲಿ e ಹರೇರಾಮದ ಮೂಲಕ ಅದೇ ಕೆಲಸ ಮಾಡುತ್ತಿರುವಂತೆ ಅನಿಸುತ್ತದೆ.
  ೨. ಆಸಕ್ತರಿಗೆ ತಮ್ಮ ಅನುಕೂಲದ ಸಮಯದಲ್ಲಿ ತಮ್ಮದೇ ‘ದೇಶ’ದಲ್ಲಿ ಕುಳಿತು ಶ್ರೀಸಂಸ್ಥಾನದವರ ಲೇಖನಗಳನ್ನು ಉಪನ್ಯಾಸಗಳನ್ನು ಕೇಳುವ ವ್ಯವಸ್ಥೆ ಮಾಡಿದ ‘ಹರೇ ರಾಮ’ದ ಕಲ್ಪನೆ ಮಾಡಿದವರಿಗೆ, ಕಲ್ಪನೆಗಳನ್ನು ಸಾಕಾರಗೊಳಿಸಿದ ‘ಹರೇ ರಾಮ’ ತಂಡಕ್ಕೆ ಮತ್ತು ಈ ತಾಣವನ್ನು ನಿವ೯ಹಿಸುತ್ತಿರುವವರಿಗೆ ಎಷ್ಟು ಅಭಿನಂದನೆಗಳನ್ನು ಹೇಳಿದರೂ ಕಡಿಮೆಯೇ.
  ೩. ಹರೇರಾಮದಲ್ಲಿ ಬರುತ್ತಿರುವ ಶ್ರೀ ಸಂಸ್ಥಾನವದರ ಲೇಖನಗಳನ್ನು ಓದಿದಾಗ ವಾಲ್ಮೀಕ ರಾಮಾಯಣ ಅದೆಷ್ಟು ಉತ್ಕೃಷ್ಟ ಎಂಬ ಅರಿವು ಆಯಿತು.
  ೪. ಶ್ರೀ ಸಂಸ್ಥಾನದವರ ಲೇಖನಕ್ಕೆ ಪ್ರತಿಕ್ರೀಯೆ ನೀಡಲು ಪ್ರಯತ್ನಿಸುವಾಗ ನನ್ನ ಶಬ್ದ ಭಂಡಾರ ಅದೆಷ್ಟು ಚಿಕ್ಕದೆಂಬ ಅರಿವಾಯಿತು

  ಎಲ್ಫ್ಲ ಪ್ಫ್ರಶ್ಫ್ನೆಗಳಿಗೆ ಒಮ್ಫ್ಮಲೆ ಉತ್ಫ್ತರಿಸಲು ತಯಾರಿ ಸಾಲದು. ಹಾಗಾದ ಕಾರಣ ಇನ್ನುಳಿದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮುಂದಿನ ಸಂಚಿಕೆಯಲ್ಲಿ….

  ವೀಣಾ ಮರುವಳ, ಮರುವಳ ನಾರಾಯ

  [Reply]

 17. shobha lakshmi

  ಹರೇ ರಾಮ ಗುರಚರಣಗಳಿಗೆ ನಮನಗಳು..
  ಹರೇರಾಮ ತಾಣ , ಸು೦ದರ , ಸುಮಧುರ ವ್ರು೦ದಾವನ..ಪ್ರತಿದಿನ ಒ೦ದುಸಲವಾದರೂ ಇಲ್ಲಿ ಬ೦ದು ಆಸ್ವಾದಿಸದೆ ಇರಲಾಗದು..
  ಗುರುಗಳು ಜತೆಗಿರುವರೆ೦ಬ ಅನುಭವ,,ರಾಮಾಯಣ ಓದುವಾಗ, ಪ್ರವಚನ ಕೇಳುವಾಗ..
  ಮನಸ್ಸಿಗೆ ತು೦ಬ ಸಮಾಧಾನ ಸ೦ತೋಷ ಸಿಗುತ್ತಾ ಇದೆ…ಎಷ್ಟೋ ಪ್ರಶ್ಣೆ ಗಳಿಗೆ ಗುರುಗಳಿ೦ದಲೇ ನೇರ ಉತ್ತರ..
  ಒಟ್ಟಿನಲ್ಲಿ ನಾವು ಭಾಗ್ಯವ೦ತರು..

  [Reply]

 18. mamata hegde

  Hare Raama

  Guru Charanagalige shirasaa pranamagalu.

  Enendu bareyali mele helidante Raamana tanadalli joteyadavru.. navu illi korate iralu sadhyave!!! Hare Raama badukige hosa artha kotta taana.Nannarivige arivu moodisida taanavidu. Hare raama site nodiddre Shree Charanada adiyalle idda anubhava doreuttade.Hrudayakke tumba hattiravada taana idu.sakshaat Raamanada Gurugalondige maatanadalu maadhyamavada taana idu.Ottinalli shoonyavagidda badukinalli Hare Raama emba mangalakaravada padagalannu baresida taanavidu.Ati hechhina sankyeyalli janaru idannu ooduvantadare ade santosha.

  [Reply]

 19. Raghavendra Narayana

  Quotes for the day.
  Quotes of Gurugalu on daily basis – would be great if we get it.
  If there is a section for Quotes in Hareraama site, and daily if we get quotes from Gurugalu, it would be great. The initial lines and ending lines of Gurugala Pravachanas and Blogs will have lot of material for Quotes. It would be great if we get it on daily basis, as soon as we start the day, it would be good to start with good thoughts and continue that good thought throughout the day and life.
  .
  Shri Gurubhyo Namaha

  [Reply]

 20. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  “Recent Activity” ವಿಭಾಗದಲ್ಲಿ ಕನಿಷ್ಠ ಒಂದು ದಿನದ “Activity” ಕಾಣುವಂತಿದ್ದರೆ ಚೆನ್ನಾಗಿತ್ತೇನೋ……

  [Reply]

  Raghavendra Narayana Reply:

  Agree.
  May be we can add “More” link under Recent Activity and Recent Posts section.
  The posts of all activity is available in http://hareraama.in/activity link.
  .
  Shri Gurubhyo Namaha

  [Reply]

 21. Mahesha Elliadka

  ಹರೇರಾಮ ಗುರುಗಳೇ..
  ಆಧುನಿಕ ಯುಗದಲ್ಲಿ – ಗುರುಗಳ ಬಳಿ ಶಿಷ್ಯರ ನಿರಂತರ ಸಂಪರ್ಕದ ಸಾಧ್ಯತೆಯನ್ನು ಕಾಣಿಸಿದ ಈ e-ಪ್ರಯತ್ನವನ್ನು ನಾವೆಲ್ಲರೂ ಅಭಿವಂದಿಸುತ್ತಿದ್ದೇವೆ.
  ಅಂತರ್ಜಾಲ ವೇದಿಕೆಯಲ್ಲಿ ನಿತ್ಯಭೇಟಿಯ ಅವಕಾಶ ಒದಗಿಸಿದ ತಮ್ಮ ಪಾದಾರವಿಂದಕ್ಕೆ ನನ್ನಂತಹ ಅನೇಕ ಶಿಷ್ಯರ ಪರವಾಗಿ ಸಾಷ್ಟಾಂಗ ವಂದನೆಗಳು..
  ಹರೇರಾಮ..

  [Reply]

 22. maruvala narayana

  ಹರೇ ರಾಮದಿಂದ ನಿಮ್ಮ ಬದುಕಿಗೆ ಏನಾಯಿತು?
  ೧. ವಿರಾಮದ ಸಮಯದಲ್ಲಿ ಮನೆಯವರೆಲ್ಲರೂ ಸೇರಿ ಹರೇರಾಮದಲ್ಲಿ ಬಂದ ಲೇಖನಗಳನ್ನು ಓದುವ ಪರಿಪಾಠ ಪ್ರಾರಂಭವಾಯಿತು
  ೨. ನಮ್ಮ ಸಂಸ್ಕೃತಿಯ ಬಗೆಗೆ ಇನ್ನೂ ಹೆಚ್ಛು ತಿಳಕೊಳ್ಳಬೆಕೆಂಬ ಪ್ರೇರೇಪಣೆ ಬಂತು
  ೩. ಇ-ಸ್ಲೇಟು ಉಪಯೋಗಿಸುವ ಕ್ರಮ ತಿಳಿಯಿತು
  ಹರೇರಾಮ ಇನ್ನೇನಾಗಬೇಕಿತ್ತು?
  ೧. ದಿನಚರಿ ಶೀ‍ಷಿ೯ಕೆಯನ್ನು ಬದಲಾಯಿಸಿದರೆ ಸೂಕ್ತ. ( ‘ಶ್ರೀ ದಿನಚರಿ ಅಥವಾ ಆ ಅಥ೯ ಬರುವ ಪದಗಳು ಸೂಕ್ತವೇನೋ)
  ೨. ಮುನ್ನೋಟದಲ್ಲಿ ಬರುವ ಕಾಯ೯ಕ್ರಮಗಳನ್ನು ಕಾಯ೯ಕ್ರಮ ಕಳೆದ ಕೂಡಲೇ archieves ಗೆ ವರ್ಗಾಯಿಸಿದರೆ ಒಳ್ಳೆಯದೇನೋ ಅನಿಸುತ್ತದೆ
  ೩.ಶ್ರೀ ಸಂಸ್ಥಾನದವರು ಬರೆಯುತ್ತಿರುವ ಉತ್ಕೃ‍‍ಷ್ಟ ಲೇಖನಗಳ ಬಗೆಗಿನ ಪ್ರಚಾರ ಸಾಲದೇನೋ ಅನಿಸುತ್ತದೆ. ಇನ್ನೂ ಹೆಚ್ಚಿನ ಜನರನ್ನು ತಲುಪವಂತಾದರೆ ಒಳ್ಳೆಯದಿತ್ತೇನೋ.
  ೪. ರಾಮಾಯಣದ ಜತೆಯಲ್ಲಿಯೇ ನಾವು ಮಾಡಲೇಬೇಕಾದ ನಿತ್ಯ ಕಮ೯ಗಳ ಬಗೆಗೆ ಮಾಹಿತಿ, ಕೆಲವೊಂದು ಸೂಕ್ತ/ಮಂತ್ರಗಳ ಅಥ೯ ತಿಳಿಯುವಂತಾದರೆ ನಾವು ಧನ್ಯರು.
  ೫.e ಯುಗದ ಜನರಿಗೆ ತಾಳ್ಮೆ ಕಡಿಮೆ. ಚಿಕ್ಕ ಚಿಕ್ಕ ವಾಕ್ಯಗಳ ಚಿಕ್ಕ ಚಿಕ್ಕ ಲೇಖನಗಳನ್ನು ಓದಲು ಮಾತ್ರ ವ್ಯವಧಾನ. test match ನೋಡಲು ವ್ಯವಧಾನ ಇಲ್ಲ. one day match ಕಾಲವೂ ಕಳೆದು ೨೦-೨೦ ಮಾತ್ರ ನೋಡುತ್ತಾರಂತೆ.

  ವೀಣಾ ಮರುವಳ , ಮರುವಳ ನಾರಾಯಣ

  [Reply]

  Raghavendra Narayana Reply:

  Fantastic.
  .
  I liked points 4 and 5.
  .
  We may try sending SMS of small bits from Gurugala Pravachana and Articles as SMS and Emails. Only for the registered members who wants to receive such messages.
  .
  Shri Gurubhyo Namaha

  [Reply]

 23. SADASHIVA KANTOTA

  ಹರೇ ರಾಮ
  ಶ್ರೀ ಗುರುಭ್ಯೋನಮಃ

  ವಿಶ್ವವ್ಯಾಪಿಯಾಗುವ ದಿಶೆಯಲ್ಲಿ, ದೇಶವ್ಯಾಪ್ತಿಯನ್ನಾವರಿಸುತ್ತಿರುವ ಶ್ರೀ ಗುರುಗಳ ಸಂಪರ್ಕ ವಿರಳವಾಗುತ್ತಿದೆಯೇನೋ ಎನ್ನುವ ಭಾವ ನನ್ನ ಹೃದಯದಲ್ಲಿ ಮೂಡುತ್ತಿತ್ತು. ವಿಶ್ವವ್ಯಾಪಿಯೇ ಆಗಿರುವ ಗುರುವು ನನ್ನಲ್ಲೂ ನಿತ್ಯವೂ ದೇದೀಪ್ಯಮಾನವಾಗಿ ಪ್ರಕಾಶಿಸುತ್ತಿದೆ ಎಂದು ಓದಿ ತಿಳಿದ ನನಗೆ ಅದನ್ನು ಪ್ರತ್ಯಕ್ಷ ಅನುಭವಿಸುವ ಆ “ಅರಿವು” ಎಲ್ಲಿಂದ ಬರಬೇಕು? ಈ ಸಂದರ್ಭ ಹೊರಬಂದ ಈ “ಹರೇ ರಾಮ” ತಾಣ ಮತ್ತೆ ನಿತ್ಯವೂ ಗುರುವಿನ ಸವಿನುಡಿಗಳನ್ನು ಕೇಳಲು, ಗುರುವಿನ ಸಂಚಾರದ ಬಗ್ಗೆ ತಿಳಿಯಲು, ಆಧ್ಯಾತ್ಮ ತತ್ವಗಳ ದಿಗ್ದರ್ಶನ ಪಡೆಯಲು ಸಹಾಯವಾಗುವುದರ ಜೊತೆಗೆ ಗುರುವಿನ ಸಂಪರ್ಕದ ಹಿತಾನುಭವವನ್ನು ನೀಡುತ್ತಿದೆ.

  ಕಾಲಕಾಲಕ್ಕೆ ಮೂಡಿಬರುವ ಭಕ್ತಿ, ಪುರಾಣ, ಪ್ರಸ್ತುತ ವಿಚಾರಿಕೆ, ಗುರುಪರಂಪರೆ, ಇತ್ಯಾದಿ ಇತ್ಯಾದಿ ವಿಶಯಗಳ ಮೇಲಿನ ಶ್ರೀಗಳ ಒಂದೊಂದೂ ಲೇಖನಗಳು ಅವರ ಅಂತರ್ ದೃಷ್ಟಿಯ ವೈಶಾಲ್ಯತೆಯನ್ನು ತೋರಿಸುತ್ತದೆ….ಅಚ್ಚರಿಯನ್ನು ಮೂಡಿಸುತ್ತಿದೆ. ಪ್ರತಿಯೊಂದು ಬಾಹ್ಯ ವಸ್ತು/ವಿಷಯವನ್ನು ಅಂತರ್ಮುಖವಾಗಿ ನೋಡುವ ಪರಿಯನ್ನು ಕಲಿಸಿಯೂ ಕೊಡುತ್ತಿದೆ.

  ಈ ಭವಭಂದನ ದಿಂದ ಬಿಡುಗಡೆ ಹೊಂದುವ ನಿವೃತ್ತಿ ಮಾರ್ಗದ ಸುಲಭೋಪಾಯವನ್ನು ಶ್ರೀಗಳು ಕರುಣಿಸಬೇಕು. ಕಾರ್ಯಗತಗೊಂಡ ಶ್ರೀಗಳ ಪ್ರಮುಖ ಯೋಜನೆಗಳ ಬಗೆಗಿನ ( ಗುರುಕುಲ, ಆಸ್ಪತ್ರೆ, ವಿದ್ಯಾಶಾಲೆ, ಗೋಶಾಲೆ, ವೈದ್ಯಕೀಯ ಕೇಂದ್ರ..) ವೀಡಿಯೊ ಚುಟುಕುಗಳು ಇದ್ದರೆ ಪ್ರತ್ಯಕ್ಷ ಮಾಹಿತಿ ಸಿಕ್ಕಂತಾಗುವುದು. ಸನಾತನ ಹಿಂದೂ ವೈದಿಕ ಧರ್ಮದ ವಿಧಿ ವಿಧಾನಗಳಾದ ಯಜ್ನೋಪವೀತ ಧಾರಣೆ, ಶಿಖಾಧಾರಣೆ, ಸಂಧ್ಯಾವಂದನೆ, ಅಗ್ನಿಕಾರ್ಯ, ಪರಿಷಂಚನೆ, ಪಿತೃಕಾರ್ಯ, ಕುಂಕುಮಧಾರಣೆ, ಹೋಮ, ಹವನ, ಇತ್ಯಾದಿ ವಿಷಯಗಳ ಬಗ್ಗೆ ಅವುಗಳ ಮಹತ್ವ, ಉದ್ದೇಶ, ಪರಿಣಾಮಗಳ ಬಗ್ಗೆ ಮಾಹಿತಿ ಗುರುಮುಖೇನ ಲಭ್ಯವಾದರೆ ಸಂತೋಷ.

  ಅರ್ಥಸಹಿತ ನಿತ್ಯೋಪಯೋಗದ ಕೆಲವು ಮಂತ್ರಗಳ ಸಂಗ್ರಹ ಈ ತಾಣದಲ್ಲಿ ಸಿಕ್ಕರೆ ಹಲವರಿಗೆ ಉಪಯೋಗವಾಗಬಹುದು. ಬ್ರಹ್ಮಚಾರಿತ್ವದ ಉದ್ದೇಶ, ಗ್ರಹಸ್ತಾಶ್ರಮ ಧರ್ಮ, ಈ ಕಾಲದಲ್ಲಿ ವಾನಪ್ರಸ್ತಾಶ್ರಮದ ಆಚರಣೆ, ಸಂನ್ಯಾಸ ದೀಕ್ಷಾವಿಧಿ, ಮಹಿಳೆಯರು ಪಾಲಿಸಬಹುದಾದ ಪೂಜಾಚರಣೆಗಳ ಬಗ್ಗೆ ಮಾಹಿತಿ, ಗುರು, ಹಿರಿಯರಿಗೆ, ದೇವರಿಗೆ ನಮಸ್ಕರಿಸುವ ವಿಧಾನ, ಗುರು, ಹಿರಿಯರು, ದೇವಸ್ಥಾನಗಳಲ್ಲಿ ಪಾಲಿಸಬೇಕಾದ ನಿಯಮ, ನಡವಳಿಕೆಗಳು ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ-ಮಾರ್ಗದರ್ಶನ ಅವಶ್ಯ ಇದೆ ಎಂದು ಅನಿಸುತ್ತಿದೆ.

  ವೇದ-ಉಪನಿಷತ್ತು ಗಳು ಅರ್ಥವಾಗದೇ, ಪುರಾಣ ಓದಲಾಗದೇ, ವೈದಿಕ ವಿಧಿ ವಿಧಾನ ಸಂಪೂರ್ಣ ಪಾಲಿಸಲಾಗದೇ, ಪುರಾತನ ಆಚರಣೆಗಳನ್ನು ಪೂರ್ಣ ಒಪ್ಪಿಕೊಳ್ಳಲಾಗದೇ, ಪ್ರಸ್ತುತ ಭವದ ವ್ಯವಹಾರ, ಕರ್ತವ್ಯಗಳನ್ನು ಬಿಡಲಾಗದೇ, ಪರಬ್ರಹ್ಮನನ್ನು ಹೊಂದುವ ದಾರಿ ತಿಳಿಯದೆ ತೊಳಲಾಡುವ ನಮಗೆ ಆತ್ಮಸಾಕ್ಷಾತ್ಕಾರದ ಸುಲಭ ಸಾಧನಗಳ ಬಗ್ಗೆ ಶ್ರೀಗಳ ಮಾರ್ಗದರ್ಶನ ಈ ತಾಣದಲ್ಲಿ ಮೂಡಿಬರಲಿ.

  ಇ-ಮಠದಲ್ಲಿ ಓಡಾಡುತ್ತಿರುವ ಧನ್ಯತೆ ಇದೆ.

  ಹರೇ ರಾಮ

  [Reply]

  Raghavendra Narayana Reply:

  ಅದ್ಭುತ.
  .
  ಶ್ರೀ ಗುರುಭ್ಯೋ ನಮಃ

  [Reply]

  Anuradha Parvathi Reply:

  ಮೇಲಿನ ಎಲ್ಲಾ points ಅನ್ನು ಅನುಮೋದಿಸುತ್ತೇನೆ.

  [Reply]

  ಮಂಗ್ಳೂರ ಮಾಣಿ... Reply:

  ನಾನೂ ಅನುಮೋದಿಸುತ್ತೇನೆ.

  [Reply]

  vinootha B Reply:

  ನಾನೂ ಅನುಮೋದಿಸುತ್ತೇನೆ.

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಹರೇ ರಾಮ
  ಅದೆಷ್ಟೋ ವೈದಿಕರು ತಮ್ಮ ಶಿಷ್ಯ ವರ್ಗದವರಿಗೆ ಈ ವಿಷಯಗಳಲ್ಲಿ ಆಸಕ್ತಿ ಎಲ್ಲ ಎಂದು ಮರುಗುತ್ತಿರಬಹುದು. ಎಷ್ಟೋ ಮಂದಿ ಶಿಷ್ಯರು ಇಂತಹ ವಿಷಗಳನ್ನು ತಿಳಿದು ಆಚರಿಸಲು ತವಕಿಸುತ್ತಿರಬಹುದು. ಆಸಕ್ತ ವೈದಿಕರು ಮತ್ತು ಶಿಷ್ಯ ವರ್ಗದವರ ಮಧ್ಯೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನಾವೇನಾದರೂ ಪ್ರಯತ್ನ ಮಾಡಬಹುದೇ?

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಹರೇ ರಾಮ
  ಅದೆಷ್ಟೋ ವೈದಿಕರು ತಮ್ಮ ಶಿಷ್ಯ ವರ್ಗದವರಿಗೆ ಈ ವಿಷಯಗಳಲ್ಲಿ ಆಸಕ್ತಿ ಎಲ್ಲ ಎಂದು ಮರುಗುತ್ತಿರಬಹುದು. ಎಷ್ಟೋ ಮಂದಿ ಶಿಷ್ಯರು ಇಂತಹ ವಿಷಯಗಳನ್ನು ತಿಳಿದು ಆಚರಿಸಲು ತವಕಿಸುತ್ತಿರಬಹುದು. ಆಸಕ್ತ ವೈದಿಕರು ಮತ್ತು ಶಿಷ್ಯ ವರ್ಗದವರ ಮಧ್ಯೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನಾವೇನಾದರೂ ಪ್ರಯತ್ನ ಮಾಡಬಹುದೇ?

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಇದಕ್ಕೋಸ್ಕರ ಹರೇರಾಮ ತಾಣದ ಶಿಷ್ಯ ತಾಣವೊಂದನ್ನು ಬೆಳೆಸೋಣವೇ? ಇದು ಅತ್ಯುತ್ತಮವಾಗಿ ಮೂಡಿ ಬರಬೇಕಾದರೆ ನಾವೆಲ್ಲರೂ ಜೊತೆಯಾಗಿ ನಮಗೆಲ್ಲ ಅತ್ಯಂತ ಉಪಯುಕ್ತವಾಗುವ ರೀತಿಯಲ್ಲಿ ಬೆಳೆಸಬೇಕು.ಎಲ್ಲರ ಸಲಹೆ ಸೂಚನೆಗಳಿಗೆ ಸ್ವಾಗತ… software design, documentation ರೂಪದಲ್ಲಿ ಯಾರಾದರೂ ಕಳುಹಿಸಲು ಬಯಸುವುದಾದರೆ isiri.technology.harerama@gmail.com ಗೆ ಕಳುಹಿಸಬೇಕಾಗಿ ವಿನಂತಿ. ಎಲ್ಲರ ಸಹಕಾರದ ನಿರೀಕ್ಷೆಯಲ್ಲಿ …

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಹರೇ ರಾಮ,
  “ವಿಶ್ವವ್ಯಾಪಿಯೇ ಆಗಿರುವ ಗುರುವು ನನ್ನಲ್ಲೂ ನಿತ್ಯವೂ ದೇದೀಪ್ಯಮಾನವಾಗಿ ಪ್ರಕಾಶಿಸುತ್ತಿದೆ” ಎಂಬುದನ್ನು ಖಂಡಿತವಾಗಿಯೂ ನಾವೆಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ತಿಳಿದುಕೊಳ್ಳಬಹುದು.
  “ಧ್ಯಾನ ಮೂಲಂ ಗುರೋರ್ಮೂರ್ತಿ,
  ಪೂಜಾಮೂಲಂ ಗುರೋರ್ಪದಂ,
  ಮಂತ್ರಮೂಲಂ ಗುರೋರ್ವಾಕ್ಯಂ,
  ಮೊಕ್ಷಮೂಲಂ ಗುರೋಕೃಪಾ ….” ವನ್ನು ಪ್ರಾಮಾಣಿಕವಾಗಿ ಪ್ರಯತ್ನಿಸಿ ನೋಡೋಣ…..

  [Reply]

 24. DR.RAVISHANKAR YELKANA

  photo,vedio,audio ಗಳನ್ನು download ಮಾಡುವ ಅವಕಾಶ ಮಾಡಿಕೊಟ್ಟರೆ ಒಳಿತಿತ್ತು.
  -ವಿದ್ಯಾರವಿಶಂಕರ್ ಮತ್ತು ಡಾ.ರವಿಶಂಕರ ಯೇಳ್ಕಾನ.

  [Reply]

 25. SUBRAHMANYA B.R.

  Hare raama. Shri Gurubhyo Namah

  Please include provision to mail/send the photos writeups & pravachanas to non menmbers

  [Reply]

  DR.RAVISHANKAR YELKANA Reply:

  why can’t they become a member of Hareraama?

  [Reply]

  SUBRAHMANYA B.R. Reply:

  Most of the followers of Shri Samsthana & Shri Mata Know about Hareraama.in But There are many people from other part of the society, who are interested in Gow seve, & also in activities of Mata, are not aware of Hareraama. Instead of telling them, if you happen to send them a sample of what is available in Hareraama, they will become member.They may be brought in to the main stream by giving them a sample of their interest.

  [Reply]

  Raghavendra Narayana Reply:

  Completely agree.
  .
  Shri Gurubhyo Namaha

  [Reply]

  DR.RAVISHANKAR YELKANA Reply:

  I too agree.

  [Reply]

  SUBRAHMANYA B.R. Reply:

  Thank you

  [Reply]

 26. gopalakrishna pakalakunja

  ‘ಹರೇರಾಮ’ ನಿಮಗೆ ಹೇಗನಿಸಿತು ?

  ಇಂತಹದ್ದು ಇನ್ನೊಂದಿಲ್ಲ..ಅದ್ವಿತೀಯ …ನಿತ್ಯ ನೂತನ ..ಇದು ವಿನೂತನ… ಇತರ ಮಠ ಮಾನ್ಯರಿಗೆ ಇದು ಮಾದರಿ.

  ‘ಹರೇರಾಮ’ದಿಂದ ನಿಮ್ಮ ಬದುಕಿಗೆ ಏನಾಯಿತು ?

  ಬೇಕು ಬೇಕೆನಿಸುವಾಗ ಶ್ರೀ ಗುರು ಸಾನ್ನಿಧ್ಯ ,ಒಡನಾಟ, ಮಧುರವಚನಾಮೃತ ಸವಿಯುವ ಅವಕಾಶ..ಶ್ರೀ ಗುರು ಅನುಗ್ರಹೀತರೊಡನೆ ಸತ್ಸ್ಸಂಗ ದೊರೆವಂತಾಯಿತು, ತಡ ರಾತ್ರೆ ಯ ವರೇಗೂ ಈ ಗುಂಗಿನ ಹಂಗಿಗೊಳಾದಂತಾಯಿತು.

  ‘ಹರೇರಾಮ’ ಇನ್ನೇನಾಗಬೇಕಿತ್ತು ?

  ದಿನ ನಿತ್ಯದ ಕಾರ್ಯಕ್ರಮ ಮತ್ತು, ಆಯಾಯ ದಿವಸದ ಚಿತ್ರಪುಟ ಪ್ರತಿನಿತ್ಯವೂ ಈ ತಾಣದಲ್ಲಿ ಕಾಣುವ ಸುಯೋಗ ಲಭಿಸುವಂತಾದರೆ … ( ದಿನ ದಿನ ಬದಲಾಗುತ್ತಾ ಹೊದರೆ ) ಅಪ್ರಸ್ತುತ ವೆನಿಸದೆ ನನ್ನ ಈ ಬೇಡಿಕೆ ನೆರವೇರಿಸಿದರೆ, ಅದಾಗದ ದಿವಸ ಆಗುವ ಬೇಸರ ಇಲ್ಲದಾಗುತ್ತದೆ ಖಂಡಿತ.

  [Reply]

 27. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು……

  ಕಲಿಯುಗ ಅತ್ಯಂತ ಸುಂದರ ಯುಗ……. ದೇವರು ಮನೆ ಮನೆಗೆ, ಮನ ಮನದೊಳಗೆ ಬಂದು……. “ನನ್ನನ್ನು ಪ್ರಾರ್ಥಿಸಿ…. ಒಳಿತಾಗುತ್ತದೆ……” ಎಂದು ಕರೆ ನೀಡುವ ಯುಗ….. ಅಂತಹ ಒಂದು ಮಾಧ್ಯಮ “ಈ” ಹರೇರಾಮ…… ಇದಕ್ಕಿಂತ ಪ್ರಭಾವಿಯಾದ ಒಂದು ಮಾಧ್ಯಮವಿದೆ…….. ಅದುವೇ “ನಮ್ಮ ಮನಸ್ಸು…..ಹೃದಯ……”. ಆ ಮಾಧ್ಯಮದತ್ತ ಕೊಂಡೊಯ್ಯುವುದು…… “ಈ” ಮಾಧ್ಯಮ…… ಪ್ರತಿಯೊಬ್ಬರೂ…… ಇಲ್ಲಿ ಬರೆಯುವಾಗ…… ಓದುವಾಗ…… ಪ್ರತಿಕ್ಷಣವೂ…. “ಬರೆಯುವವನು, ಓದುವವನು,ಓದಿಸುವವನು……” ಎಲ್ಲವೂ “ನೀನೇ….” ಎಂಬ ಭಾವವನ್ನು ಬೆಳೆಸಲು ಪ್ರಾರಂಭಿಸಿ……… ಅಲ್ಲಿಂದ “ಜೀವನ ಪ್ರಾರಂಭ……”. ಅದೆಷ್ಟೋ ಮಂದಿ ಈ ಭಾವದಿಂದ ಇರುವವರಿರಬಹುದು…….. ಅಂತಹವರಲ್ಲಿ……. ನಾನೂ…. ಒಬ್ಬಳು……

  [Reply]

 28. Gururaj D

  ಹರೇ ರಾಮ..ಶ್ರೀ ಗುರುಭ್ಯೋ ನಮಃ..,ಶ್ರೀ ಗುರುಗಳ ಆಶೀರ್ವಚನ ಕೇಳಿದಾಗ ಗುರುಗಳ ಜೊತೆಗೇ ಇರುವಂತೆ ಭಾಸವಾಗುತ್ತದೆ.ಹರೇ ರಾಮ ಜ್ಞಾನಾರ್ಜನೆಗೆ ಉತ್ತಮ ಅಂತರ್ಜಾಲ ತಾಣ.ಗುರುಗಳ ಆಶೀರ್ವಚನದ ವೀಡಿಯೋ ಕೂಡಾ ಲಭ್ಯವಾಗುವುದಿದ್ದರೆ ಉತ್ತಮ.

  [Reply]

 29. Anushree Bandady

  ಹರೇರಾಮ.

  ‘ಹರೇರಾಮ’ವು ಮನಸ್ಸಿಗೆ ನೆಮ್ಮದಿಯೀವ ತಾಣವಾಗಿ, ಜ್ಞಾನದ ಪರಿಧಿ ವೃದ್ಧಿಯಾಗಲು ಕಾರಣವಾಗಿ, ಸರ್ವತ್ರ ಗುರುಗಳ ಕಾಣುವ ಅವಕಾಶವಿತ್ತು, ನಿತ್ಯ ಜೀವನಕ್ಕೆ ದಾರಿದೀಪವಾಗಿ ನಿಂತಿದೆ.
  ದಿನನಿತ್ಯ ಗುರುಗಳ ಆಶೀರ್ವಚನ ಕೇಳುವ ಅವಕಾಶವಿರುವುದಂತೂ ನಮ್ಮೆಲ್ಲರ ಸೌಭಾಗ್ಯವೇ ಸರಿ.
  ಇಂಥ ಅದ್ಭುತ ಅವಕಾಶಗಳನ್ನಿತ್ತ ಶ್ರೀ ಗುರುಗಳಿಗೆ ಅನಂತ ಪ್ರಣಾಮಗಳು.
  ಹರೇರಾಮ.

  [Reply]

  ಮಂಗ್ಳೂರ ಮಾಣಿ... Reply:

  ನಿಜ ಅಕ್ಕಾ. ಇದು ನಮ್ಮೆಲ್ಲರ ಸೌಭಾಗ್ಯವೇ ಹೌದು.

  [Reply]

 30. yajneshbhat

  ಹರೇರಾಮ

  ಪ್ರತಿದಿನ ಬಂದು ಹರೇರಾಮ ನೋಡದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ. ಅದರಲ್ಲೂ ಶ್ರೀಸಂಸ್ಥಾನ ಬರೆಯುವ ಬ್ಲಾಗುಗಳು ಮತ್ತು ಶ್ರೀಸಂಸ್ಥಾನದವರ ಪ್ರವಚನ ತುಂಬಾ ಚೆನ್ನಾಗಿ ಬರುತ್ತಿದೆ.
  ೧) ಶ್ರೀಮಠದಲ್ಲಿ ನಡೆಯುವ ಕಾರ್ಯಕ್ರಮ (ಸುದ್ದಿ ವಿಭಾಗ) ಇಲ್ಲಿ ತಕ್ಷಣ ಬಂದರೆ ಎಲ್ಲರಿಗೂ ಮಾಹಿತಿ ಸಿಕ್ಕ ಹಾಗಾಗುತ್ತದೆ
  ೨) ಮದ್ಯೆ ಮದ್ಯೆ ಎಲ್ಲರಿಗೂ “Polls section” ಇಡಬಹುದು.

  [Reply]

 31. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು….

  ಆಧ್ಯಾತ್ಮ ಎನ್ನುವುದು ಈ ವಿಶ್ವದ ಆದಿ ಜ್ಞಾನ…… ಅದನ್ನು ವಿಜ್ಹಾನ,ಕಲೆ…….. ಏನೆಂದರೂ ಸರಿಯೇ….. ಯಾಕೆಂದರೆ ಎಲ್ಲವೂ ಅದರಲ್ಲಿ ಅಡಗಿದೆ…… ಇಂದಿನ ಅಧುನಿಕ ವಿಜ್ಹಾನವೂ ಅದರ ಒಂದು ಭಾಗವೇ…… ಪ್ರತಿ ಮಗುವಿಗೂ ಹುಟ್ಟಿನಿಂದಲೇ ಆಕಾಶದಲ್ಲಿ ಹಾರಬೇಕೆನಿಸುವುದು ಸಹಜ….
  ಆದರೆ ಮೊದಲಿಗೆ ಅಂಬೆಗಾಲಿಕ್ಕಿ,ಕುಳಿತು,ನಿಂತು ಆಮೇಲಲ್ಲವೇ…. ಹಾರುವ ಪ್ರಯತ್ನ……. ಆದರೆ ಇಂದಿನ ಆಧುನಿಕ ಯುಗದಲ್ಲಿ ನಾವು ನೇರವಾಗಿ ಹಾರುವ ಪ್ರಯತ್ನ ಮಾಡುತ್ತಿದ್ದೇವೆ……. ಇಂತಹ ಸಂದರ್ಭದಲ್ಲಿ….. ಎದೆಹಾಲು ಕುಡಿಸಿ ಬೆಳಸುವಲ್ಲಿಂದ ಪ್ರಾರಂಭಿಸಿ ಕ್ಷಣ ಕ್ಷಣವೂ ಮಕ್ಕಳ ಕೈ ಹಿಡಿದು ಮುನ್ನಡೆಸಿ ಬೆಳೆಸುವ ಅಮ್ಮನ ಪ್ರಯತ್ನವೇ ಈ ಹರೇರಾಮ……

  [Reply]

  Raghavendra Narayana Reply:

  Very true, very very true, fantastic, cheers.
  .
  Shri Gurubhyo Namaha

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…..

  ಹರೇ ರಾಮ,
  ಬರೆಯಿಸುವವನು, ಬರೆಯುವವನು, ಓದುವವನು ಎಲ್ಲವೂ ಅವನೇ ಅಲ್ಲವೇ ರಾಘವೇಂದ್ರಣ್ಣ……

  [Reply]

  Raghavendra Narayana Reply:

  Twameva Pratyksham Tatvamasi |
  Twameva Kevalam Kartasi |
  Twameva Kevalam Dhartasi |
  Twameva Kevalam Hartasi |
  Twameva Sarvam Khalvidam Brahmasi |
  Twam Sakashadatamasi Nityam ||
  .
  Shri Gurubhyo Namaha

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಈ ಭಾವವು ನನ್ನಲ್ಲೂ,ನಿನ್ನಲ್ಲೂ, ಎಲ್ಲರಲ್ಲೂ, ಎಲ್ಲೆಲ್ಲೂ, ಯಾವಾಗಲೂ ತುಂಬಿ ತುಳುಕಲಿ……….

  [Reply]

  SUBRAHMANYA B.R. Reply:

  Twam vaangmayastwam chinmayah l
  Twamaananda mayastwam brahmamayah l
  Twam sacchidaanadadwitiyosi l
  Twam pratyaksham Brahmasi l
  Twam jnaanamayo vijnaanamayosi l

  And What a similarity between Shri Guru & Ganapati ! Isn’t it.

  [Reply]

 32. Shridevi Vishwanath

  ಹರೇರಾಮ ಸಂಸ್ಥಾನ.
  ಶಿಷ್ಯ ಸಮುದಾಯ ವಿಸ್ತಾರವಾಗಿರುವ, ವಿಶ್ವದ ಎಲ್ಲೆಡೆ ಇರುವ, ನಾನಾ ವೃತ್ತಿಯ-ಪ್ರವೃತ್ತಿಯ, ನಮ್ಮ ಮಠದ ಶಿಷ್ಯರೆಲ್ಲರನ್ನು ಒಂದು ಗೂಡಿಸುವ e- ಮಾಧ್ಯಮ ತುಂಬಾ ಚೆನ್ನಾಗಿ ಬರುತ್ತಿದೆ. ಪ್ರಪಂಚದಲ್ಲಿ ಕತ್ತಲು- ಬೆಳಕಿದೆ. ಆದರೆ ಹರೇರಾಮದಲ್ಲಿ, ಬರೇ ಹಗಲು ಮಾತ್ರ. ದಿನದ ಇಪ್ಪತ್ತನಾಲ್ಕು ಗಂಟೆಯೂ ತನ್ನ ಶಿಷ್ಯರಿಗಾಗಿ ತೆರೆದಿರುವ e-ಮಠ.
  ಇದರಲ್ಲಿ, ಗುರುಭೇಟಿಗೆ ಅವಕಾಶವಿದೆ. ಗುರು ಸೇವೆಗೆ ಅವಕಾಶವಿದೆ. ಶ್ರೀ ಗುರುವಾಣಿಯನ್ನು ಆಲಿಸಲು, ಮನದ ಶಂಕೆ ನಿವಾರಿಸುವ ಉತ್ತರಗಳಿಗೆ ಹಾಗೂ ಶ್ರೀ ಗುರುಗಳ ಮಾರ್ಗದರ್ಶನ ಕೊಡುವ ಮಾತುಗಳಿಗೆ ಶ್ರೀಮುಖವಿದೆ. ಮನದ ಮಾತುಗಳನ್ನು ಶ್ರೀಚರಣಗಳಲ್ಲಿ ನಿವೇದಿಸಿಕೊಳ್ಳಲು ಸಮ್ಮುಖವಿದೆ. ನಾಡಿನ ಪ್ರಮುಖರ ಅನುಭವದ ಮಾತುಗಳಿಗೆ ಪ್ರಮುಖವಿದೆ.
  ಶ್ರೀ ಗುರುಗಳ ಭೇಟಿಗೆ ಹೋದಲ್ಲಿ ಮಾತ್ರ ಸಿಗುತ್ತಿದ್ದ ಆಶೀರ್ವಚನ ಇಂದು ನಮಗೆ ಬೇಕಾದಾಗ, ನಮ್ಮ ಅಗತ್ಯಗಳಲ್ಲಿ ದಾರಿ ತೋರುವಂತೆ ನಮಗೆ ದೊರಕುತ್ತಿದೆ. ಯಾವುದೇ ಒಂದು ಪ್ರವಚನದ ಭಾಗವನ್ನು ಕೇಳಿದಲ್ಲಿ, ಮನದ ಶೋಕ ಕಳೆದು ಹೊಸ ಯೋಚನೆ ನಮ್ಮಲ್ಲಿ ತುಂಬುತ್ತದೆ. ರಾಮ ಮತ್ತು ರಾಜ್ಯ ಅಂಕಣಗಳಲ್ಲಿ ಸಂಸ್ಥಾನ ಹರಿಸುತ್ತಿರುವ ಜ್ಞಾನಧಾರೆಯನ್ನು ಅರಗಿಸಿಕೊಳ್ಳಲು ಬಹಳ ಬಾರಿ ಓದಿ ಮನನ ಮಾಡಿಕೊಳ್ಳಬೇಕು. ಆ ನಂತರವೇ ಅದು ನಮ್ಮ ಜೀವನಕ್ಕೆ ಹೊಂದಿದಂತೆ ಮಾಡಿಕೊಳ್ಳಲು ಆಗುತ್ತದೆ. ರಾಮಾಯಣದ ಬಗೆಗೆ ಬರುವ ಮಾಲಿಕೆಯಂತೂ ಪ್ರತಿಸಲ ಹೊಸ ವಿಚಾರವನ್ನು ನಮಗೆ ಕೊಡುತ್ತದೆ. ಫೋಟೋಗಳು ಕೂಡ ಆಕರ್ಷಕವಾಗಿ ಬರುತ್ತಿದ್ದು, ಸಂಸ್ಥಾನ ಪ್ರವಾಸ ಮಾಡಿದೆಲ್ಲೆಡೆ ನಾವೂ ಹೋದಂತೆ ಅನಿಸುತ್ತದೆ. ಇಂದು ಇಲ್ಲಿ ಬರೆಯುವ ಅವಕಾಶ ಇರುವುದೂ ಹರೇರಾಮದಿಂದಲೇ ಅಲ್ಲವೇ?

  ಹರೇರಾಮದಲ್ಲಿ ಏನಿದೆ? ಏನಿಲ್ಲ? ತನ್ನ ಶಿಷ್ಯರಿಗಾಗಿ ಇಷ್ಟೊಂದು ಕಾಳಜಿ ಮಾಡಿ, ಎಲ್ಲರ ಬಗ್ಗೆ ಪ್ರೀತಿ ಇದ್ದು, ಸಮಾಜದ ಉದ್ಧಾರಕ್ಕೆ ಇಷ್ಟೊಂದು ಶ್ರಮ ಪಡುತ್ತಿರುವ ಗುರುಗಳು ಸಿಕ್ಕಿದುದು ನಮ್ಮ ಪುಣ್ಯ!!
  ಈ ಹರೇರಾಮ ವಾಹಿನಿ ಇನ್ನೂ ಬೆಳೆಯಲಿ, ಶಿಷ್ಯವರ್ಗದಲ್ಲಿಯೂ, ಅಂಕಣಗಳ ಸಂಖ್ಯೆಯಲ್ಲಿಯೂ, ಮಾಹಿತಿಗಳ ವಿಚಾರಗಳಲ್ಲಿಯೂ ಹಿಮಾಲಯದ ಉನ್ನತಿ ಪಡೆಯಲಿ. ಶಿಷ್ಯ ವರ್ಗಕ್ಕೆ ಇದೊಂದು ವಿಶ್ವಕೋಶವಾಗಲಿ.

  [Reply]

  ಮಂಗ್ಳೂರ ಮಾಣಿ... Reply:

  ಶ್ರೀ ಅಕ್ಕಾ. ಇದು ನಿಜವ್ವಾದ ವಿಶ್ವ ಕೊಶ.

  [Reply]

 33. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು……

  ಹರೇರಾಮದ ಹಲವು ಓದುಗರಿಗೆ ಅನೇಕಾನೇಕ ಅದ್ಭುತ ಅನುಭವಗಳು(miracles) ಹೇಳಿಕೊಳ್ಳಲು ಇರಬಹುದು……. . ಹೃದಯಾಂತರಾಳದ ಅನುಭವಗಳು ಇನ್ನೊಬ್ಬರಿಗೆ ಪ್ರೇರಣೆ ನೀಡುವಲ್ಲಿ ಅತ್ಯಂತ ಪ್ರಭಾವ ಉಂಟುಮಾಡುತ್ತದೆ…….ಅನೇಕ ಓದುಗರು ಸದಸ್ಯರಾಗಿರಲಿಕ್ಕಿಲ್ಲ ಅಥವಾ ಬಹಿರಂಗವಾಗಿ ಅನುಭವಗಳನ್ನು ಹೇಳಿಕೊಳ್ಳಲು ಸಮಸ್ಯೆಗಳಿರಬಹುದು…….. ಸದಸ್ಯರಲ್ಲದವರಿಗೂ ಪ್ರತಿಕ್ರಿಯೆ ನೀಡಲು ಅಥವಾ ಅನುಭವಗಳನ್ನು ಹೇಳಿಕೊಳ್ಳಲು ಅವಕಾಶವಿದ್ದರೆ ಚೆನ್ನಾಗಿತ್ತೇನೋ……

  [Reply]

 34. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಈ ಬದುಕು ಬಲು ಸೊಗಸಾದ ಆಟ. “ಸಿದ್ದ ಪಡಿಸಿದ ಆಹಾರ ಭಗವಂತ ನಮ್ಮ ಕೈಗೆ ಕೊಡುತ್ತಾನೆ. ಅದನ್ನು ಮತ್ತೆ ಭಗವಂತನಿಗೆ ನೈವೇದ್ಯ ಮಾಡಿ ಎಲ್ಲರೂ ಜೊತೆಯಾಗಿ ಪ್ರಸಾದ ಸ್ವೀಕರಿಸುವುದೇ ಈ ಆಟ”. ಈ ಆಟವನ್ನು ಅಮ್ಮನ ಜೊತೆಗೂಡಿ ಕಲಿತು ನಾವೆಲ್ಲಾ ಧನ್ಯರಾಗೋಣ….. ಕಲಿಸುವ ತಾಣವೇ ಈ ಹರೇರಾಮ….

  [Reply]

 35. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಗುರವೋ ಬಹವಸ್ಸಂತಿ ಶಿಷ್ಯ ವಿತ್ತಾಪಹಾರಕಃ
  ದುರ್ಲಭಃ ಸ ಗುರುರ್ಲೋಕೆ ಶಿಷ್ಯ ಚಿತ್ತಾಪಹಾರಕಃ

  ಶಿಷ್ಯರ ಚಿತ್ತದ ತಾಪಗಳಿಗೆ ಉಪಶಮನಗಳನ್ನು ನೀಡುವಂಥ ಗುರುಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಅತ್ತ್ಯುತ್ತಮ ಸಾಧನ ಈ ಹರೇರಾಮ

  [Reply]

 36. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು

  ಈ ಹರೇರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಭಗವಂತನ ಒಂದು ಸಣ್ಣ ಸೇವೆ. ಭಗವಂತನ ಸೇವೆಯ ಸ್ವರೂಪವೆಂದರೆ “ನಾವು ಕೊಡುವುದು, ಕಳಕೊಳ್ಳುವುದು ಏನೇನೂ ಇಲ್ಲ….. ಆದರೆ ಪಡೆದುಕೊಳ್ಳುವುದು ತುಂಬಾ ಇದೆ…..”. ಕೆಲವೊಮ್ಮೆ ಅನ್ನಿಸುತ್ತದೆ – ಶಂಕರಾಚಾರ್ಯರ “ರತ್ಹ್ನೈಕಲ್ಪಿತಮಾಸನಂ ಹಿಮಜಲೈ ……..” ಇದರ ಇನ್ನೊಂದು ರೂಪವೇ ಈ ಹರೇರಾಮ ಎಂದು.

  [Reply]

 37. Raghavendra Narayana

  ಬರಡು ಬರಡೆ೦ದರು..
  ಮರಳು ಮರಳೆ೦ದರು..
  ಇಲ್ಲೇನಿದೆ ಜೀವಸೆಲೆಯೆ೦ದರು..
  ಇದೆ೦ತಹ ದೇವನೆಲೆಯೆ೦ದರು..
  ಮಾತೆ ನಿನ್ನೊಡಲು ಬಡವೆ..?
  ವಸು೦ಧರೆ ನಿನ್ನ ಕಾವ್ಯಧಾರೆಗಳಿಗೆ ಬರವೆ..?
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಮರಳಾಗಿರುವ ಮನಕ್ಕೆ, ಮರುಳಾಗಿರುವ ಮನಕ್ಕೆ, ಬರಡಾಗಿರುವ ಸಮಾಜಕ್ಕೆ, ಬರಿದಾಗಿರುವ ಸಮಾಜಕ್ಕೆ, ಬೇಕೇ ಬೇಕು ಈ ಲೇಖನಗಳು..
  ಚಿ೦ತನೆಗೆ ಪ್ರೇರೆಪಿಸುವ, ಚಿ೦ತೆಯ ಮನವನ್ನು ಸ೦ತ್ವಾನಗೊಳಿಸುವ, ಮು೦ದಿನ ಪೀಳಿಗೆಗಳಿಗೂ ಬೇಕಾದ ಈ ಲೇಖನಗಳು ಬೇಕೇ ಬೇಕು..
  ಚಿತೆಗೇರುವ ಮುನ್ನ, ಯಮ ಕೇಳುವ ಮುನ್ನ, ಆನ೦ದದ ಆಲಿ೦ಗನ ನೀಡುವ ಯಮನಿಗೆ, ಅದ್ವೈತದಾನ೦ದ ಪಡೆಯುವ ಬದಲಿಗೆ..
  .
  ಬೇಕೇಬೇಕು ಈ ಲೇಖನಗಳು, ಪ್ರವಚನಗಳು, ಮಠದ ಸರ್ವ ಸಮಾಜ ಕಾರ್ಯಗಳು..
  ಶ್ರೀ ಗುರುಭ್ಯೋ ನಮಃ

  [Reply]

 38. Sri Samsthana

  ಆತ್ಮಸಂಗಾತಿಗಳೇ…

  ನೀವು ಕೇಳಿದ್ದನ್ನು, ಕೇಳಿದಾಗ, ಕೇಳಿದಷ್ಟು ಕೊಡಲಾಗದ ಅತೃಪ್ತಿಯಿತ್ತು ಮನದಲ್ಲಿ..
  ಇಂದು ನಿಮ್ಮ ತೃಪ್ತಿಯನ್ನು ಕಂಡು ಪರಮತೃಪ್ತಿಯಾಯಿತು..

  ಎಷ್ಟು ಹೇಳಿ ಏನು..? ಇಷ್ಟೇ ಹೇಳುವೆವು..
  ಕೂಡಿ ಬಾಳೋಣ,
  ಹಂಚಿ ತಿನ್ನೋಣ,
  ದುರ್ಗಮವಾದ ಈ ಬಾಳಮಾರ್ಗದಲ್ಲಿ ಒಬ್ಬರೊಬ್ಬರ ಕೈಹಿಡಿದುಕೊಂಡು ಜೊತೆಯಾಗಿ ಸಾಗೋಣ..

  [Reply]

  VISHNU NANDANA Reply:

  Sashtanaga Pranamagalu…

  Dhanyavayithu Shishyarellara baduku…

  “Aathmasangathigale” yendu nammellaranna sambhodisada reethi nannannu bhava paravasharannagi madithu.

  Shishyara mele inthaha adamya preethiyanna ittiruva nimaga sashtanaga namanagalu.

  [Reply]

  Raghavendra Narayana Reply:

  ನಮ್ಮೊಡನೆ..
  ಆದಿ ಶ೦ಕರಾಚಾರ್ಯರಿರುವರು, ಪರಮ ಶಿವನಿರುವ, ಮಹಾ ವಿಷ್ಣುವಿರುವನು, ಪರಮಾತ್ಮನಿರುವ ನಮ್ಮೊಡನೆ..
  ಸೀತೆ ರಾಮ ಹನುಮ ಭರಥ ಶಬರಿ ಜಟಾಯು ಲಕ್ಷಣ ಅಯೋಧ್ಯೆ ಪರಬ್ರಹ್ಮನಿರುವ ನಮ್ಮೊಡನೆ
  ವಾಲ್ಮಿಕಿಗಳು ವಶಿಷ್ಠರು ವಿಶ್ವಾಮಿತ್ರರು ವ್ಯಾಸರು ಸಕಲ ಋಷಿಗಣ ಪರತತ್ವ ನಮ್ಮೊಡನೆ
  ಹರೇರಾಮ ರಾಮಾಯಣ ಗುರುಗಳು ಸ೦ಗಡ ಓದುಗರು ಕೇಳುಗರು ಅನುಭವಿಪರು ಅನುರಕ್ತಿ ಇರುವುದು ನರ ನಾರಾಯಣರಿರುವರು ನಮ್ಮೊಡನೆ
  ನಮ್ಮೊಡನೆ ನಮ್ಮ ಮಧ್ಯದಲ್ಲಿ ನಮ್ಮ ಕೈ ಹಿಡಿದು ನಮ್ಮಗಳ ಕೈ ಬೆಸೆದು ನಡು ನಡುವಲಿ, ಗುರಿ ಕಾಣುತಿರುವಾಗ ನಡೆಯುತಿರುವಾಗ ಗುರಿ ಸೇರುವಾಗ ಸ್ವಾಗತಿಸಲು ಯಾರಿಹರು ಎಲ್ಲರೂ ಕೈ ಬೆಸೆದಿರುವಾಗ.
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಲೋಕ ಲೋಕಗಳೆಲ್ಲವು ಬೂದಿ, ಶಿವನೋರ್ವನೆ ಅಲ್ಲಿ, ದಿಗ೦ಬರನಾಗಿ ನಡೆಯುತಿರುವನು, ಮೌನ, ಮಹಾಕಾಲವೆ ಕಾಲ ಕಾಲದಿ೦ದ ಕಾಯುತ್ತಿರುವುದು ಆ ಕಾಲನ ಕಾಲ ಸ್ಪರ್ಶಕ್ಕಾಗಿ, ಹರನೇ ನಿನ್ನಡಿಗೆ ಹಿಡಿದ ಬೂದಿ ನಾ, ನಿನ್ನೊಡನಿರುವೆ.
  .
  ಶ್ರೀ ಗುರುಭ್ಯೋ ನಮಃ

  [Reply]

  shobha lakshmi Reply:

  ಹರೇರಾಮ…ಗುರುದೇವಾ…
  ಆತ್ಮಸ೦ಗಾತಿಗಳೇ ಎನ್ನುವ ಪದ ..ಕೇಳಿ ಹ್ರುದಯತು೦ಬಿ ಬ೦ತು…ಪರಮಾನ೦ದ ಆತು..ಗುರುಗಳ ಆತ್ಮ ಸ೦ಗಾತಿಗಳಲ್ಲಿ ಆನೊಬ್ಬಳು…ಎನಗಿದು ತ್ರುಪ್ತಿ ..ಸ೦ತೋಷ..ಖ೦ಡಿತ ಕೂಡಿ ಬಾಳೋಣ..

  [Reply]

 39. Jayashree Neeramoole

  ಭವ ಸಾಗರವನ್ನು ದಾಟಿಸುವ ಅಂಬಿಗನು ಜೊತೆಗಿರಲು ನಮಗಿನ್ಯಾವುದರ ಭಯ…….ಎಂದೆಂದೂ ಬರುವೆವು ನಾವು ಜೊತೆಯಾಗಿ……

  [Reply]

 40. seetharama bhat

  ಹರೇರಾಮ,

  ಅ೦ಬಿಗೆ ಇ೦ಬುಗಾರನ ಭಲವಲ್ಲವೇ
  ಅ೦ಬಿಗ ನಲ್ಲವೇ ದೋಣಿಗೆ ಭಲ
  ನ೦ಬಿಗೆಯಲ್ಲವೆ ಬಾಳಿಗೆ ಭಲ
  ನ೦ಬಿರುವಾಗ ಗುರುದೇವನಿನ್ನ ಎಲ್ಲಿದೆ ಭಯ.

  ವ೦ದನೆಗಳು

  [Reply]

 41. govindaraj korikkar

  i)Hasida,balalida manasige ,Hannagi, neraleeva vrikshavagi anisithu

  ii)Hareraama,Badukina janjadagalige alpa virama,

  iii)Samsthana, bayasidavarige vaiyaktikavagi siguvante bagilondu theredare……….!

  Sadaa thirugatadalle iddaroo,thannavarellara baleyolage(net) tharuva,thanmoolaka ellarodane sadaa iruva prayathnakke, vishalathege sharanu,sharanu….Thabbaliyu navalla

  [Reply]

 42. Pradeep Shankar M

  ಹರೇ ರಾಮ….

  [Reply]

 43. Muralidhar Adkoli

  ||Hare Raama||

  Website is very informative and guiding light to many unknown information and facts of life. One who follws Hareraama is really blessed…

  We need to share about this website and its utility to others (who do not know or don’t bother to know). We shall convey them about the great change that can happen to their life. Then alone we can be true life to this website. Regards,

  [Reply]

 44. Sharada Jayagovind

  Hareraama Samsthana

  caught in the web which will liberate us from other webs …oh master weaver…
  pranamagalu

  sharadakka

  [Reply]

 45. K.N.BHAT

  Hare Raama.

  Raamana taanadalli Raamana Jotege iruvaga doreyuva anubhava ananya. Ananda avarnaneeya. Mane mandi ella joteyagi anandisuva tana…..
  Enu bekendu kelalariyada namage ,ellavannu tane anugrahisuva Guruvinalli innenagraha….
  Shree Gurucharana Kamalagalige Ananta Pranamagalu…

  [Reply]

 46. gopalakrishna pakalakunja

  ವೇದಾಂತ……..
  ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ |
  ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||

  ಲೆಕ್ಕ ಪಾಥ…….
  ಅನಂತ ಕ್ಕೆ ಅನಂತ ಕೂಡಿದರೂ ಅನಂತ,
  ಅನಂತ ದಿಂದ ಅನಂತ ಕಳೆದರೂ ಅನಂತ,
  ಅನಂತ ಗುಣಿಸು ಅನಂತ ಉತ್ತರ ಅನಂತ
  ಅನಂತ ಭಾಗಿಸು ಅನಂತ ಅದೂ ಅನಂತ.

  ಪ್ರತ್ಯಕ್ಷ ಅನುಭವ …..
  ಅನುಭವಿಸ ಬೇಕಿದ್ದರೆ ಬನ್ನಿ ನಮ್ಮ ಕುಲ ಗುರು ಕಕ್ಷೆಯೋಳಗೆ..
  ಆ ಮಧುರತೆ ಹಾಗೂ ಹೄದಯ ತುಂಬಿದ ಪೂರ್ಣಾನುಗ್ರಹ ವಾಗಲಿ..
  ಮನಬಿಚ್ಹಿ ಪ್ರೀತಿ ವಿಶ್ವಾಸಗಳ ರಸಧಾರೆಯ ಅಮೄತ ಸಿಂಚನ ವಾಗಲಿ…
  ಶುದ್ಧ ಕನ್ನಡಿಯಂತೆ ತನ್ನ ದರ್ಶನ ಪಡೆವ ಸರ್ವರಿಗೂ ಧರ್ಮಸಮ್ಮತ ನ್ಯಾಯ ದೊರಕಿಸುವಂತೆ
  ಮೊಗೆ ಮೊಗೆದಷ್ಟೂ ಅನಂತ …ಅನಂತ… ವಾಗುವ ಮತ್ತೂ ಅನಂತವೇ ಉಳಿಯುವ ಪ್ರೀತಿಯ ಅಪೂರ್ವ ನಿಧಿ ಶ್ರೀ ಸಂಸ್ಥಾನ.

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಸಂಪೂರ್ಣ ಸತ್ಯ…… ಅನಂತ…… ಅಧ್ಬುತ…..

  [Reply]

  seetharama bhat Reply:

  ಹರೇರಾಮ,

  ಅನ೦ತ ಶ್ರಿನಿಧಿ
  ಅನ೦ತದ ಸನ್ನಿಧಿ
  ಅನ೦ತ ಶರಧಿ

  ಇಲ್ಲ ಇಧಕೆ ಪರಿಧಿ
  ನಿಲ್ಲದಿಲ್ಲಿ ಬೇಗುಧಿ
  ಬನ್ನಿ ಎಲ್ಲ ಬೇಗದಿ

  [Reply]

  SUBRAHMANYA B.R. Reply:

  ಓ ನನ್ನ ಚೇತನ ಆಗು ನೀ ಅನಿಕೆತನ……..ಎ೦ಬ ಸಾಹಿತ್ಯದ ಅರ್ಠ ಪೂರ್ಣವಾಗುವುದು ಇಲ್ಲಿನಿತ್ಯ ಸತ್ಯ

  [Reply]

 47. K.N.BHAT

  Nee Ananta ….Ananta….Ananta….
  Anantananta….

  [Reply]

 48. yashodhadevi

  ಹರೇರಾಮ..
  ಶ್ರೀ ಗುರುಭ್ಯೋ ನಮಃ…
  “ಕರುನಾಳು ಬಾ ಬೆಳಕೆ
  ಮುಸುಕಿದೀ ಮಬ್ಬಿನಲಿ
  ಕೈ ಹಿಡಿದು ನಡೆಸೆನ್ನನು….”
  ಗುರುದೇವಾ ಈ ಜನ್ಮ ಸಾರ್ಥಕ ಆತು….
  ಹರೇರಾಮ…

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು,

  ನಿಜ. ಈ ಹರೇರಾಮನ… ಅನಂದಸಾಗರನ….. ಕೈಹಿಡಿದೆವೆಂದರೆ ಜನ್ಮ ಸಾರ್ಥಕವಾದಂತೆ….. ಮುಂದೆ ಬೆಳಕೇ….ಬೆಳಕು…… ಕೈ ಹಿಡಿದು ನಡೆಯುವುದೊಂದೇ ನಮ್ಮ ಕೆಲಸ……

  [Reply]

 49. mamata hegde

  ಹರೇ ರಾಮ

  ಶ್ರೀ ಗುರುಭ್ಯೋ ನಮಃ

  ಧನ್ಯನಾದೆ ಗುರುದೇವ “ಆತ್ಮಸಂಗಾತಿಗಳೇ ” ಎಂಬ ಪದ ಇಡೀ ಜೀವಮಾನದಲ್ಲಿ ದೊರೆತ ಅತ್ಯಂತ ದೊಡ್ಡ ಸಂಪತ್ತು
  ಧನ್ಯನಾದೆ ಧನ್ಯನಾದೆ……………….

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು,

  ನಿಜ. ಈ ಹರೇರಾಮಕ್ಕೆ ಪ್ರವೇಶಿಸುವುದೆಂದರೆ ಸಂಪತ್ತಿನ ಖಜಾನೆಯೊಳಗೆ ಪ್ರವೇಶಿಸುವುದು…… ನಂತರ ಮೊಗೆದಷ್ಟೂ ಅನಂತ…ಅಕ್ಷಯ……

  [Reply]

 50. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಈ ಹರೇರಾಮದ ಸಹಾಯದಿಂದ ಯಾರು ಬೇಕಾದರೂ ಅತ್ಯಂತ ಸುಲಭವಾಗಿ ಸಂಪೂರ್ಣ ಜೀವನ ಪಾಠವನ್ನು ಕಲಿಯಬಹುದು. ಅರೋಗ್ಯ,ನೆಮ್ಮದಿ, ಆನಂದ, ಶಾಂತಿ, ತೃಪ್ತಿ ಇವುಗಳಿಂದ ಕೂಡಿದ ಜೀವನವನ್ನು ನಡೆಸಬಹುದು.

  ೧. ಮೊದಲಿಗೆ ತಾನೊಬ್ಬ ಜೀವನದ ಬಗ್ಗೆ ಏನೇನೂ ಅರಿಯದ ವಿದ್ಯಾರ್ಥಿಯಾಗಬೇಕು.
  ೨. ಸರ್ವಜ್ಹನೂ, ಸರ್ವಾಂತರ್ಯಾಮಿಯೂ ಅದ ಸಾಕ್ಷಾತ್ ಶ್ರೀರಾಮಚಂದ್ರನು ತನ್ನ ಗುರುವಾಗಿರುವುದರಿಂದ, ಅವನಿಗೆ ತನ್ನ ಜೀವನದ ಪೂರ್ವಾಪರಗಳ ಬಗ್ಗೆ ಸಂಪೂರ್ಣ ತಿಳಿದಿರುವುದರಿಂದ ನಮ್ಮ ಜೀವನವನ್ನು ಪ್ರತಿಕ್ಷಣ ಅವನು ಅವಲೋಕಿಸುತ್ತಿರುತ್ತಾನೆ ಎನ್ನುವುದು ಸದಾ ನೆನಪಿನಲ್ಲಿರಬೇಕು.
  ೩. ನಾವು ಮಾಡಿದ ಸರಿ ತಪ್ಪುಗಳಿಗೆ, ನಮ್ಮ ಸಂಶಯಗಳಿಗೆ ಸರಿಯಾದ ಉತ್ತರವನ್ನು ಯಾರಾದರೊಬ್ಬರ ಪ್ರತಿಕ್ರಿಯೆಯ ಮೂಲಕವಾಗಿಯೂ ಗುರುಗಳು ಅನುಗ್ರಹಿಸಬಹುದು.

  ಈ ಸಿದ್ದತೆಗಳೊಂದಿಗೆ ನಾವೆಷ್ಟು ಗಂಭೀರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತೆವೋ ಅಷ್ಟು ಬೇಗ ಯಶಸ್ಸು ನಮ್ಮದಾಗುವುದು.

  [Reply]

Leave a Reply

Highslide for Wordpress Plugin