ಮರುಮಹಾರಾಜನು ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವನ್ನು ಪುನಃ ಬೆಳಗಿಸುವವನಾದರೆ ಚಂದ್ರವಂಶದ ದೇವಾಪಿಯು ಈ ಯುಗಾಂತ್ಯದಲ್ಲಿ ಚಂದ್ರವಂಶವನ್ನು ಪುನಃ ಮುಂದುವರೆಸುವನು. ಶಂಭಲ ಎಂಬ ಗ್ರಾಮದಲ್ಲಿ ವಿಷ್ಣುಯಶಸ ಎಂಬ ಮಹಾತ್ಮನಾದ ಬ್ರಾಹ್ಮಣನಮನೆಯಲ್ಲಿ ಪ್ರಾದುರ್ಭವಿಸುವ ಕಲ್ಕಿಯ ಆಜ್ಞೆಯಂತೆ ಮರು ಮಹಾರಾಜ ಹಾಗೂ ದೇವಾಪಿಯರೀರ್ವರೂ ಸತ್ಯಯುಗದಲ್ಲಿ ಸನಾತನಧರ್ಮವನ್ನು ಬೆಳೆಸುತ್ತಾರೆ. ಇವರಿಬ್ಬರು ಅದ್ಭುತ ಯೋಗಶಕ್ತಿಯನ್ನು ಪಡೆದವರಾಗಿದ್ದು ಈಗ “ಕಲಾಪ” ಗ್ರಾಮದಲ್ಲಿ ಗೋಪ್ಯವಾಗಿ ತಪಸ್ಸನ್ನಾಚರಿಸುತ್ತಿದ್ದಾರೆ.. ದೇವಾಪಿ :- ಭೀಷ್ಮಪಿತಾಮಹನ ತಂದೆಯಾದ… Continue Reading →
ಬದುಕು ಸಮೃದ್ಧವಾಗಬೇಕು..
ಬದುಕು ಸಾರ್ಥಕವೂ ಆಗಬೇಕು..
ಬದುಕು ಸಮೃದ್ಧವಾಗಲು ತಾಯಿ ಲಕ್ಷ್ಮಿಯ ಕೃಪೆ ಬೇಕು..
ಬದುಕು ಸಾರ್ಥಕವಾಗಲು ತಂದೆ ನಾರಾಯಣನ ಕೃಪೆ ಬೇಕು..
ಲಕ್ಷ್ಮಿಯು ಅರ್ಥದ ರೂಪದಲ್ಲಿ ಹರಿಯುತ್ತಿದ್ದರೆ ಬದುಕಿಗೆ ಸಮೃದ್ಧಿ..
ನಾರಾಯಣನು ಧರ್ಮದ ರೂಪದಲ್ಲಿ ನೆಲೆ ನಿಂತರೆ ಬದುಕಿಗೆ ಸಾರ್ಥಕತೆ..
ಧರ್ಮವು ನೆಲೆ ನಿಲ್ಲಬೇಕೆಂದರೆ ಅರ್ಥವು ಸರಿಯಾದ ದಾರಿಯಲ್ಲಿ ಹರಿಯುತ್ತಲೇ ಇರಬೇಕು..
ಅರ್ಥವು ಧರ್ಮದ ದಾರಿಯಲ್ಲಿ ಒಳಹರಿದು ಬರಬೇಕು..
ಅರ್ಥವು ಧರ್ಮದ ದಾರಿಯಲ್ಲಿಯೇ ಹೊರಹರಿದು ಹೋಗಬೇಕು..
ಇದು ಅಯೋಧ್ಯೆಯ ಅರ್ಥ ನೀತಿ..