LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಯಾತ್ರಿಕರು ನಾವು…-ಕಗ್ಗ

Author: ; Published On: ಗುರುವಾರ, ಫೆಬ್ರವರಿ 10th, 2011;

Switch to language: ಕನ್ನಡ | English | हिंदी         Shortlink:

ಬೆಂಗಳೂರು ಫೆಬ್ರವರಿ ೧೦– ಶ್ರೀ ಜೆಡ್ಡು ರಾಮಚಂದ್ರ ಭಟ್ಟ ಇವರ ಮನೆಯಲ್ಲಿ ನಡೆದ ಭಿಕ್ಷಾ ಕಾರ್ಯಕ್ರಮದಲ್ಲಿ ಶ್ರೀಗಳವರು ನೀಡಿದ ಪ್ರವಚನ.

[audio:DailyPravachana/February_2011/Yatrikaru_Naavu_10-feb-11-kagga.mp3]


26 Responses to ಯಾತ್ರಿಕರು ನಾವು…-ಕಗ್ಗ

 1. Raghavendra Narayana

  ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ |
  ಸತ್ರದಲಿ ನೇಮದಿ೦ದರಲಿಕೆಡೆಯು೦ಟು ||
  ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ, ಪಾರು- |
  ಪತ್ಯದವ ಮೆಚ್ಚುವನು – ಮ೦ಕುತಿಮ್ಮ ||
  .
  ಶ್ರೀ ಗುರುಭ್ಯೋ ನಮಃ

  [Reply]

 2. Raghavendra Narayana

  “ಎಲ್ಲೋ ಕೆಲವು ಪುಣ್ಯಚೇತನರ ದೇಹದ ಮನೆಯ ಮಾತಿನ ಕಿಟಕಿಯಿ೦ದ ಜಗವನ್ನೊಮ್ಮೆ ಇಣುಕಿ ನೋಡುವ ಆ ಮಹಾಚೇತನಕ್ಕೆ ಪ್ರಣಾಮಗಳನ್ನ ಮೊದಲಾಗಿ ಸಮರ್ಪಣೆ ಮಾಡುತ್ತೇವೆ..”
  .
  “ಭೋಧನೆಗಿ೦ತ ಸಾಧನೆ ಶೋಧನೆ ಜಾಸ್ತಿ ಆಗಬೇಕು. ಸಾಧನೆ ಶೋಧನೆ ಎಷ್ಟು ಮಾಡುತ್ತೇವೊ ಅದರ ಒ೦ದು ಅ೦ಶ ಮಾತ್ರ ಭೋಧನೆ ಮಾಡಲು ಸಾಧ್ಯ, ಅಷ್ಟು ಮಾತ್ರ ಪ್ರಪ೦ಚಕ್ಕೆ ಕೊಡಲು ಸಾಧ್ಯ”
  .
  ———————————————
  ಖ೦ಡಿತಾ ಕೇಳಲೇಬೇಕಾದ ಪ್ರವಚನವಿದು.
  ———————————————
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ನಾರಾಯಣ ನಾ ಕೈ ಚಾಚಿದ ಕಡೆಯೆಲ್ಲ ನಿನ್ನ ಕೈ, ನಾ ಶಿರ ಬಾಗಿಸಿ ಹಣೆಯ ಸ್ಪರ್ಶಿಸಿದ ಎಡೆಯೆಲ್ಲ ನಿನ್ನ ಪಾದ, ನಾ ಬಳಲಿ ಮ೦ಡಿಯೂರಿ ದೇಹ ವಾಲುವ ಕಡೆಯೆಲ್ಲ ನಿನ್ನ ಮಡಿಲು. ಎನ್ನ ಕಣ್ಣು ಮ೦ಜಾಗಿ, ಶಿರ ಮೆದುವಾದಾಗ ನಿನ್ನ ಹೃದಯ, ಎಲ್ಲೋ ಒಮ್ಮೆ ಕಣ್ಣು ತೆರೆದಾಗ, ನಿನ್ನ ಹೃದಯದ ಕಿಟಕಿಯ ಮೂಲಕ ಸೃಷ್ಟಿಯ ಸೌ೦ದರ್ಯವನ್ನೊಮ್ಮೆ ನೋಡಿ ನಕ್ಕು ಮತ್ತೆ ಕಣ್ಮುಚ್ಚುವೆನು.
  .
  .
  ಆನ೦ದಸಾಗರದ ಒಡಯನೇ ಕ್ಷಮಿಸು ಎನ್ನೀ ನೋವಿನ ಕಣ್ಣೀರ ಬಿ೦ದುಗಳ, ನೀ ಇಟ್ಟ ಆಟ-ಪಾಠಗಳಲ್ಲಿ ನಾ ಸಮನಾಗಲಿಲ್ಲ, ಆದರೆ ನೀ ಎನ್ನ ತ೦ದೆ ಎ೦ದು ಮಾತ್ರ ಅರಿತಿರುವೆ – ಆದ್ದರಿ೦ದ ಆ ನೋವಿನ ಕಣ್ಣೀರ ಬಿ೦ದು ಆನ೦ದಸಾಗರವ ಮುಟ್ಟುವ ಕ್ಷಣ ಮೊದಲು ಆನ೦ದಬಿ೦ದುವೆ ಆಗುತ್ತದೆ. ಸಮವಲ್ಲಾಗುತ್ತದೆ.
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  “ಅಮೃತವಾಹಿನಿಯೊ೦ದು ಹರಿಯುತ್ತಿದೆ ಮಾನವನ ಎದೆಯಿ೦ದಲೆದೆಗೆ ಸತತ” – ಅಡಿಗರ ಸೃಷ್ಟಿ ಅದ್ಭುತ.
  “ಇ೦ದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು,
  ಕರಗೀತು ಮುಗಿಲ ಬಳಗ,
  ಬ೦ದೀತು ಸೊದೆಯ ಮಳೆ, ತು೦ಬೀತು ಎದೆಯ ಹೊಳೆ,
  ತೊಳೆದೀತು ಒಳಗೂ ಹೊರಗ.”
  .
  ಈ ಸೊದೆಯ ಮಳೆಯಲ್ಲಿ ನೆನೆಯುತ್ತಲೆ ಇರಬಹುದು ಬಹುಕಾಲ..
  .
  ಶ್ರೀ ಗುರುಭ್ಯೋ ನಮಃ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  “ಎಲ್ಲೋ ಒಮ್ಮೆ ಕಣ್ಣು ತೆರೆದಾಗ, ನಿನ್ನ ಹೃದಯದ ಕಿಟಿಕಿಯ ಮೂಲಕ ಸೃಷ್ಟಿಯ ಸೌಂದರ್ಯವನ್ನೊಮ್ಮೆ ನೋಡಿ ನಕ್ಕು ಮತ್ತೆ ಕಣ್ಣು ಮುಚ್ಚುವೆನು”

  ಮಹದಾನಂದದ ಕ್ಷಣವದು…

  [Reply]

 3. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  “ಈ ಜಗತ್ತು ಅತ್ಯಂತ ಸುಂದರವಾಗಿದೆ. ನಾವು ನೋಡುವ ದೃಷ್ಟಿ ಮಾತ್ರ ಬದಲಾಗಬೇಕಿದೆ”

  “ಡಾಕ್ಟ್ರೆ… ನನಗೇನಾಗಿದೆಯೂ ಗೊತ್ತಿಲ್ಲ… ನೀನೆ ಸರಿ ಮಾಡು ಎಂದು ಭವ ರೋಗ ವೈದ್ಯನ ಮುಂದೆ ಸಂಪೂರ್ಣ ಶರಣಾದರೆ ಸಂಪೂರ್ಣ ಮುಕ್ತಿ”

  ಜಗತ್ತು ಸುಂದರವಾಗಿದೆ. ನಮ್ಮ ರೋಗವನ್ನು ವಾಸಿ ಮಾಡುವ ವೈದ್ಯರು ಇಲ್ಲಿದ್ದಾರೆ. ಇನ್ನೇನು ಬೇಕು ಜೀವನದಲ್ಲಿ?

  [Reply]

 4. gopalakrishna pakalakunja

  ಹರೇ ರಾಮ !

  ದಿವ್ಯ ಸಂದೇಶವಿದು ಯಾತ್ರಿಕರಾಗಿರ್ಪೆರೆಲ್ಲರಿಗೆ

  ಪುಣ್ಯ ವಿಶೇಷದಿಂ ಲಭಿಸಿರ್ಪುದೀ ಛತ್ರವೆಮಗೆ

  ನಿಯಮದಿಂದಿರ್ಪ ಮೂ ರು ದಿನದೊಳಗೆ ಕರುಣಿಸೈ

  ದಿವ್ಯ ಪದಕಮಲದಾ ಸತ್ಯ ಪಮಾನುಗ್ರಹ ದಿ ಗುರುವೇ !!

  [Reply]

 5. Raghavendra Narayana

  “ಜೀವನ – ಒ೦ದು ಯಾತ್ರೆ
  ಜೀವಿಗಳು – ಯಾತ್ರಿಕರು
  ಈ ಲೋಕ – ದಿವ್ಯ ಕ್ಷೇತ್ರ
  ಈ ಶರೀರ – ಅದು ಸತ್ರ ಅಥವಾ ಛತ್ರ”

  “”ಯಾ” ಅ೦ದರೆ ಯಾನ / ಪ್ರಯಾಣ, “ತ್ರಾ” ಅ೦ದರೆ ರಕ್ಷಣೆ, “ಯಾತ್ರಾ” ಅ೦ದರೆ ರಕ್ಷಣೆಯನ್ನ ಅರಸಿ ಪ್ರಯಾಣ”

  “ಬದುಕು ಏನು ಎ೦ದರೆ ನಿರ೦ತರ ಪ್ರಯಾಣ, ಅದು ಭದ್ರತೆಯನ್ನ ಆಸರೆಯನ್ನ ಆಶ್ರಯವನ್ನ ಅರಸಿ ಪ್ರಯಾಣ”

  “ಬದುಕು ಎ೦ದರೆ ಪ್ರಯಾಣ, ನೆಲೆ? ಮುಕ್ತಿ. ಎಲ್ಲಿಯವರೆಗೆ ಮುಕ್ತಿಯಾಗುವುದಿಲ್ಲವೊ, ಅಲ್ಲಿಯವರೆಗೆ ಯಾತ್ರೆ ಮು೦ದುವರಿಯುತ್ತದೆ. ದೇಹಗಳು ಬದಲಾಗಬಹುದು ಲೋಕಗಳು ಬದಲಾಗಬಹುದು ಅವಸ್ಥೆಗಳು ಬದಲಾಗಬಹುದು ಪ್ರಯಾಣ ಮಾತ್ರ ಮು೦ದುವರಿಯುತ್ತ ಇರುತ್ತದೆ”
  .
  “ಜೀವನಯಾತ್ರೆ ಅ೦ದರೆ “ಜೀವ”ನ ಯಾತ್ರೆ”
  .
  Listen to this Pravachana for more..
  .
  ಶ್ರೀ ಗುರುಭ್ಯೋ ನಮಃ

  [Reply]

  gopalakrishna pakalakunja Reply:

  ಹರೇ ರಾಮ !
  ವ್ಹಾ !!

  ಬಹಳ ಚೆನ್ನಾಗಿದೆ !!

  ಜೀವನಯಾತ್ರೆ ಅ೦ದರೆ “ಜೀವ”ನ ಯಾತ್ರೆ”!!!

  [Reply]

  Raghavendra Narayana Reply:

  ಹೌದು, ಇದು ವ್ಹಾ, ವೇದಾ೦ತದ ಉಪನಿಷತ್ತಿನ ಸಾರಗಳನ್ನೆಲ್ಲ ಸಿಹಿಮಿಠಾಯಿಯ ರೂಪದಲ್ಲಿ ಗುರುಗಳು ನಮಗೆ ಹ೦ಚುತ್ತಾರೆ..
  .
  ಶ್ರೀ ಗುರುಭ್ಯೋ ನಮಃ

  [Reply]

 6. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ನಾವೆಲ್ಲ ಪುಣ್ಯಚೇತನಗಳು “ಗೊತ್ತು” ನಲ್ಲಿ ಬಂದು ನಿಂತಿದ್ದೇವೆ. ಇನ್ನು ಕಣ್ಣು ತೆರೆಯುವುದೊಂದೇ ಬಾಕಿ. ಕಣ್ಣು ತೆರೆಸು ದೇವ…

  [Reply]

 7. Raghavendra Narayana

  ———————
  “ಈ ಲೋಕ ಯಾಕೆ ದಿವ್ಯ ಕ್ಷೇತ್ರ ಅ೦ದರೆ, ಈ ಲೋಕ ದಿವ್ಯದ ಸೃಷ್ಟಿ, ಒ೦ದು ದಿವ್ಯ ವಸ್ತು ಇದನ್ನ ಸೃಷ್ಟಿ ಮಾಡಿದೆ. ಕಾರಣ-ಗುಣ ಕಾರ್ಯದಲ್ಲಿ ಬರಲೇಬೇಕು. ನೀವು ಮಣ್ಣಿನಲ್ಲಿ ಮಡಿಕೆ ಮಾಡುತ್ತೀರಿ, ಮಣ್ಣಿನ ಗುಣಗಳು ಏನು ಉ೦ಟೋ ಮಣ್ಣೀನ ಸುಗ೦ಧ ಏನು ಉ೦ಟೋ ಅದು ಮಡಿಕೆಯಲ್ಲು ಬರಲೇಬೇಕು. ಭಗವ೦ತ ಮಣ್ಣಾದರೆ, ಈ ಪ್ರಪ೦ಚ ಮಡಿಕೆ, ಹಾಗಾಗಿ ಅವನ ಗುಣಗಳು ಇಲ್ಲಿ ಬರಲೇಬೇಕು, ಅವನು ದಿವ್ಯನಾದದ್ದರಿ೦ದ ಈ ಪ್ರಪ೦ಚವು ದಿವ್ಯವೆ”
  .
  “ಈ ಪ್ರಪ೦ಚವೆನ್ನುವುದು ಪವಿತ್ರವಾಗಿರತಕ್ಕ೦ತಹುದು, ಏಕೆ೦ದರೆ ಪವಿತ್ರದಲ್ಲಿ ಪವಿತ್ರನಾಗಿರತಕ್ಕ೦ತಹ ಅವನ(ಪರಮಾತ್ಮನ) ಸೃಷ್ಟಿ”
  .
  “ದಿವ್ಯರ ಸೃಷ್ಟಿ, ದಿವ್ಯರ ನೆಲೆ, ದಿವ್ಯರು ಯಾರು ಎ೦ದರೆ ನಾವೇ ಎಲ್ಲ”
  .
  “ನಮ್ಮ ಮೂಲಸ್ವರೂಪದಲ್ಲಿ ನಾವೆಲ್ಲರು ಆನ೦ದಮಯರು, ಜ್ಞಾನಮಯರು, ಅವಿನಾಶಿಗಳು, ಅಮೃತರು ನಾವೆಲ್ಲರು ಕೂಡ. ಹಾಗಾಗಿ ನಮ್ಮೆಲ್ಲರ ನೆಲೆ ಇದು. ಇ೦ತಹ ಅಸ೦ಖ್ಯ ದಿವ್ಯಚೇತನಗಳು ದಿವ್ಯಜೀವಿಗಳು ಇಲ್ಲಿ ಹರಿದಾಡುತ್ತವೆ”
  .
  “ಹೇಗೆ ತ೦ದೆ ತನ್ನ ಮಕ್ಕಳಿಗಾಗಿ ಮನೆ ಕಟ್ಟುತ್ತಾನೆ, ಹಾಗೆ ಭಗವ೦ತ ಕೂಡ ತನ್ನ ಕೋಟಿ ಕೋಟಿ ಮಕ್ಕಳಿಗಾಗಿ ದೊಡ್ಡದೊ೦ದು ಮನೆಯನ್ನ ಒ೦ದು ಊರನ್ನೆ ಕಟ್ಟಿದ ಅದೇ ಈ ದಿವ್ಯಕ್ಷೇತ್ರ ಅಥವಾ ಈ ಲೋಕ”
  .
  “ದಿವ್ಯಕ್ಷೇತ್ರ ಯಾಕೆ ಅ೦ದರೆ, ದಿವ್ಯವು ಯಾವಾಗಲು ಇಳಿದು ಬರುವ ತಾಣ ಇದು. ಈ ಭೂಮಿಯನ್ನು ಆರಿಸುತ್ತಾನೆ ಭಗವ೦ತ ತಾನು ಇಳಿದು ಬರಬೇಕಾದರೆ”
  .
  _______________
  Listen to this Pravachana for more… listen these pravachanas more and more..
  .
  ಕೇಳುವ ಇಚ್ಛೆ ಹೆಚ್ಚು ಹೆಚ್ಚಾದರೆ, ಅನುಗುಣವಾಗಿ ನಮ್ಮಲ್ಲಿ ಪ್ರಕೃತಿಯಲ್ಲಿ ಬದಲಾವಣೆಗಳಾಗುತ್ತವೆ…???
  .
  ಶ್ರೀ ಗುರುಭ್ಯೋ ನಮಃ

  [Reply]

 8. laxmi

  ಓ ಗುರುವೇ; ಜೀವನದ ಪ್ರಯಾಣದಲ್ಲಿ ನಾವು ಗುರಿಯಲ್ಲದೇ ಸಾಗುತ್ತಿದ್ದೇವೆ…ನಿಮ್ಮ ದಿವ್ಯ ಸ೦ದೇಶವೇ ನಮಗೆ ದಾರಿದೀಪವಾಗಿ ಮುನ್ನಡೆಯಲು ಸಹಕಾರಿಯಾಗಲಿ……ಹರೇ ರಾಮ….

  [Reply]

 9. SUBRAHMANYA B.R.

  ಹರೆ ರಾಮ

  ಇ೦ದು ನಮ್ಮ ದೇಶದ ಬಹಳಷ್ಟು ಸಮಾಜ – ಹಿ೦ದೆ ಗುರುವಿಲ್ಲ ಮು೦ದೆ ಗುರಿಯಿಲ್ಲ ಸಾಗುತಿದೆ ಕುರಿಗಳಾ ಹಿ೦ಡು- ಎ೦ಬ೦ತೆ ಜೀವನ ನಡೆಸುತ್ತಿದೆ. ಆದರೆ. ನಮ್ಮ ಹಿ೦ದಿನ ಜನ್ಮದ ಪುಣ್ಯ -ನಮಗೆ ಸಾಕ್ಷಾತ್ ಶ್ರಿ ರಾಮನೆ ಗುರುವಾಗಿ ದೊರೆತಿದ್ದಾರೆ. ಹಾಗಾಗಿ ನಮ್ಮ ಜೀವನ- ಹಿ೦ದೆ ಗುರುವಿರಲು ಮು೦ದೆ ಗುರಿಯಿರಲು ಸಾಗುತಿದೆ ಕೆಚ್ಹೆದೆಯ ದ೦ಡಿನ೦ತೆ ಸಾಗುವುದು ನಿಶ್ಚಿತ.

  ಶ್ರೀ ಗುರುಭ್ಯೋ ನಮಃ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಹೌದು. “ಗೋಮಾತೆಯ ಮಕ್ಕಳು”, “ಪ್ರಕೃತಿ ಮಾತೆಯ ಮಕ್ಕಳು”, ” ಈ ಗುರುಗಳ ಶಿಷ್ಯರು” ಎನ್ನುವ ಸಮಾಜದಲ್ಲಿರುವ ನಾವು ನಿಜವಾಗಿಯೂ ಭಾಗ್ಯವಂತರಲ್ಲಿ ಭಾಗ್ಯವಂತರು. ಹಲವು ಜನ್ಮಗಳ ಪುಣ್ಯದ ಫಲ ಇದು. ನಿಜವಾಗಿಯೂ ಹೆಮ್ಮೆ ಪಡಬೇಕಾದ ವಿಷಯ. ಅದರೂ ಇಷ್ಟೊಂದು ಭಾಗ್ಯಶಾಲಿಗಳಾದ ನಾವು ಇನ್ನೂ ಕೂಡ ಗೋಮತೆಗಾಗಿ, ಪ್ರಕೃತಿ ಮಾತೆಗಾಗಿ ಏನೇನೂ ದುಡಿದಿಲ್ಲ ಎನ್ನುವ ಅತೃಪ್ತಿ ಕಾಡುತ್ತದೆ…. ತುಂಬಾ ದುಃಖ ಆಗುತ್ತದೆ…. ನಾವೆಲ್ಲ ಒಂದಾಗಿ ದುಡಿಯೋಣ…. ಗುರುಗಳ ಹೆಮ್ಮೆಯ ಶಿಷ್ಯರಾಗೋಣ……

  [Reply]

 10. Raghavendra Narayana

  “ರಾಮಾವತಾರದ ಕೊನೆಯಲ್ಲಿ ಒ೦ದು ಸ೦ಧರ್ಭ ಬರುತ್ತದೆ. ಸರಯು ನದಿಯನ್ನು ಸ್ಪರ್ಶ ಮಾಡಿ ರಾಮ ದಿವ್ಯ ಶರೀರನಾಗಿ ತನ್ನ ಮೂಲಸ್ವರೂಪದಲ್ಲಿ ಮೇಲೆ ದಿವಿಗೆ ಏರುತ್ತಿರುವಾಗ, ರಾಮನನ್ನು ಚತುರ್ಮುಖ ಬ್ರಹ್ಮ ಕೇಳುತ್ತಾನೆ ಒ೦ದು ಪ್ರಶ್ನೆಯನ್ನ “ತಾವು ಮೂಲಸ್ವರೂಪದಲ್ಲಿ ನಿರ್ಗುಣ ಸ್ವರೂಪದಲ್ಲಿ ವಿಲೀನವಾಗುವಿರೋ ಅಥವಾ ಇದೇ ಸ್ವರೂಪವನ್ನು ಇಟ್ಟುಕೊಳ್ಳುವಿರೊ ಯಾವಾಗಲು?”, “ಇದೇ ಸ್ವರೂಪವನ್ನೆ ಇಟ್ಟುಕೊಳ್ಳುತ್ತೇನೆ ಏಕೆ೦ದರೆ ಅದು ಮು೦ದೆ ನನ್ನ ಭಕ್ತರಿಗೆ ಬೇಕು, ಅವತಾರ ಮುಗಿದಿರಬಹುದು, ಆದರೆ ಮು೦ದೆ ಬರುವ ಯುಗಗಳಲ್ಲೂ ಕೂಡ ಯಾರು ನನ್ನನ್ನು ಸ್ಮರಿಸಿತ್ತಾರೆ ಅವರಿಗೆ ನಾನು ಈ ರೂಪದಲ್ಲಿ ಪ್ರಕಟವಾಗಬೇಕು, ಈ ರೂಪ ಉಳಿಯಬೇಕು ಯಾವಾಗಲು” ಎ೦ದು ಹೇಳುತ್ತಾನೆ ರಾಮ. ಹಾಗಾಗಿ ಪಾ೦ಚಭೌತಿಕ ರೂಪ ಮರೆಯಾಗಬಹುದೇ ಹೊರತು, ಅವನು ಒ೦ದು ಸಲ ಇಳಿದು ಬ೦ದರೆ, ಆ ರೂಪ – ಆ ರೂಪ ಬರುವುದಕ್ಕಿ೦ತ ಮು೦ಚೆಯು ನ೦ತರವು ಯಾವಾಗಲು ಶಾಶ್ವತವಾಗಿರುತ್ತದೆ. ಆ ದಿವ್ಯದಲ್ಲಿ ದಿವ್ಯವಾದ ಶಕ್ತಿ ಇಳಿದು ಬರುವ ತಾಣ ಆಗಿರುವ ಕಾರಣ ಇದು ದಿವ್ಯ ಕ್ಷೇತ್ರ”
  .
  “ದಿವ್ಯದ ಬಗೆಬಗೆಯ ರೂಪಗಳು ಈ ಪ್ರಪ೦ಚವೆ೦ದರೆ”
  —————————-
  .
  ಶ್ರೀ ಗುರುಭ್ಯೋ ನಮಃ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  “ಇದೇ ಸ್ವರೂಪವನ್ನೇ ಇಟ್ಟುಕೊಳ್ಳುತ್ತೇನೆ. ಏಕೆಂದರೆ ಅದು ಮುಂದೆ ನನ್ನ ಭಕ್ತರಿಗೆ ಬೇಕು. ……ಈ ರೂಪ ಉಳಿಯಬೇಕು ಯಾವಾಗಲೂ….”

  ರಾಮ….. ಅದೆಂಥ ಪ್ರೀತಿ ನಿನಗೆ ಭಕ್ತರ ಮೇಲೆ….

  ಒಂದು ಸಲ ರಾಮ…. ಎನ್ನಲು ಪ್ರಯತ್ನಿಸಿದರೆ…… ಹತ್ತು ಸಲ ರಾಮ ಎಂದು ಹೇಳಿಸುತ್ತೀ…. ಹತ್ತು ಸಲ ಹೇಳಿದರೆ…… ನೂರು ಸಲ…….ಕೊನೆಗೆ ರಾಮಸಾಗರದತ್ತ ……. ಆನಂದಸಾಗರ…….. ಕರುಣಾಸಾಗರ…….ರಾಮ….ರಾಮ…..ರಾಮ….

  [Reply]

 11. seetharama bhat

  ಹರೇರಾಮ್,

  ಜೀವಕ್ಕೋ೦ದು ಗುರಿ ಬೇಕು
  ಜೀವನಕ್ಕೊಬ್ಬ ಗುರು ಬೇಕು
  ಅಧನ್ನು ನಾವು ಅರಿಯಬೇಕು
  ಇ೦ತಹ ಗುರುವರ್ಯನೇ ಬೇಕು

  [Reply]

 12. raghu gs

  ಹರೇ ರಾಮ!

  [Reply]

 13. Raghavendra Narayana

  “ನಾವು ಹೇಗೆ ಒ೦ದು ಅ೦ಗಿ ಹಾಕಿಕೊ೦ಡು ಬರುತ್ತೇವೆ, ಬಟ್ಟೆ ಉಟ್ಟುಕೊ೦ಡು ಬರುತ್ತೇವೆ, ಹಾಗೆ ಭಗವ೦ತ ಬಟ್ಟೆ ಹಾಕಿಕೊ೦ಡದ್ದು ಈ ವಿಶ್ವವೆ೦ದರೆ. ಅವನ ವೇಷವಿದು. ಈ ವೇಷ ತೆಗೆದರೆ ನಿರ್ಗುಣನಾಗಿರುತ್ತಾನೆ ನಿರುಪಾದಿಕನಾಗಿರುತ್ತಾನೆ ಚೈತನ್ಯಮಯನಾಗಿರುತ್ತಾನೆ ಕೇವಲ ಒ೦ದೇ ಒ೦ದು ಬೆಳಕಾಗಿರುತ್ತಾನೆ, ಅವನಿಗೆ ಅ೦ಗಿ ಹಾಕಿಕೊಳ್ಳಬೇಕು ಎ೦ದು ಎಣಿಸಿ ಅ೦ಗಿ ಹಾಕಿಕೊ೦ಡರೆ ಅದು ಪ್ರಪ೦ಚವಾಗುತ್ತದೆ”
  ————
  ಶ್ರೀ ಗುರುಭ್ಯೋ ನಮಃ

  [Reply]

 14. Anuradha Parvathi

  ’ಕೊನೆಗೂ ದೇವರ ದರ್ಶನ ಮಾಡಲೇ ಇಲ್ಲ’ ಅಂತ ಗುರುಗಳು ಹೇಳುವಾಗ, ಹೊಟ್ಟೆಯಲ್ಲಿ ಒಂದು ತರಹದ ತಳಮಳ, ಎದೆಯಲ್ಲಿ ನೋವು. ಎರಡು ದಿನ ಆಯ್ತು, ಮೂರನೇಯ ದಿನದ ಬೆಳಗ್ಗೆ ಇದ್ದೇನೆ. ಸಾಧನೆ ಮಾಡಬೇಕು. ಎಲ್ಲಿಂದ, ಹೇಗೆ ಶುರು ಮಾಡಲಿ ಗುರುದೇವ?

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  “ಗರ್ಭಗುಡಿಯ ಸುತ್ತ ಓಡಾಡುವ ಜಿರಲೆಗಳ, ಕೀಟಗಳ ಮೇಲೆ ಗಮನ ಕೊಡದೆ ತದೇಕ ಚಿತ್ತದಿಂದ ದೇವರನ್ನು ಪ್ರಾರ್ಥಿಸಿದರೆ” ದೇವನು ಖಂಡಿತವಾಗಿಯೂ ಪ್ರತ್ಯಕ್ಷನಾಗುತ್ತಾನೆ

  [Reply]

 15. Raghavendra Narayana

  “ನಾವು ಹೇಗೆ ಒ೦ದು ಅ೦ಗಿ ಹಾಕಿಕೊ೦ಡು ಬರುತ್ತೇವೆ, ಬಟ್ಟೆ ಉಟ್ಟುಕೊ೦ಡು ಬರುತ್ತೇವೆ, ಹಾಗೆ ಭಗವ೦ತ ಬಟ್ಟೆ ಹಾಕಿಕೊ೦ಡದ್ದು ಈ ವಿಶ್ವವೆ೦ದರೆ. ಅವನ ವೇಷವಿದು. ಈ ವೇಷ ತೆಗೆದರೆ ನಿರ್ಗುಣನಾಗಿರುತ್ತಾನೆ ನಿರುಪಾದಿಕನಾಗಿರುತ್ತಾನೆ ಚೈತನ್ಯಮಯನಾಗಿರುತ್ತಾನೆ ಕೇವಲ ಒ೦ದೇ ಒ೦ದು ಬೆಳಕಾಗಿರುತ್ತಾನೆ, ಅವನಿಗೆ ಅ೦ಗಿ ಹಾಕಿಕೊಳ್ಳಬೇಕು ಎ೦ದು ಎಣಿಸಿ ಅ೦ಗಿ ಹಾಕಿಕೊ೦ಡರೆ ಅದು ಪ್ರಪ೦ಚವಾಗುತ್ತದೆ”
  .
  “ರಾವಣ ವಧೆಯ ನ೦ತರ ರಾಮನನ್ನು ಬ್ರಹ್ಮ ಸ್ತುತಿಸಿದ್ದು ಹೀಗೆ – “ಈ ಪ್ರಪ೦ಚವೆಲ್ಲ ನಿನ್ನ ಮೈ. ಸೃಷ್ಟಿ ಎ೦ದರೆ ಏನು ಅ೦ದರೆ, ನೀನು ಕಣ್ಣು ತೆಗೆದರೆ ಸೃಷ್ಟಿ, ಕಣ್ಣು ಮುಚ್ಚಿದರೆ ಪ್ರಳಯ””
  .
  ಶ್ರೀ ಗುರುಭ್ಯೋ ನಮಃ

  [Reply]

 16. Raghavendra Narayana

  “ದಿವ್ಯಕ್ಷೇತ್ರವಿದು. ಪ್ರಪ೦ಚದಲ್ಲಿ ಕೆಟ್ಟದ್ದು ಅನ್ನುವುದು ಇಲ್ಲ. ಕೆಡುಕೆ೦ಬುದು ಇಲ್ಲವೇ ಇಲ್ಲ. ನಾವು ಕೆಟ್ಟದ್ದು ಎ೦ದು ಯಾವುದು ಅ೦ದುಕೊಳ್ಳುತ್ತೇವೆ ಅದು ಕೂಡ ಒಳ್ಳೇಯದೆ. ಉದಾಹರಣೆಗೆ ನೋವಿದೆ, ಅದು ನಲಿವಿಗಿ೦ತ ಒಳ್ಳೆಯದು. ನಮ್ಮ ಅನುಭವನ್ನೊ ಅಥವಾ ನಮ್ಮ ಅ೦ತರಾಳವನ್ನೊ ಹೋಗಿ ಕೇಳಿದರೆ ನಮಗೆ ನೋವು ಮಾಡಿದಷ್ಟು ಉಪಕಾರವನ್ನು ನಲಿವು ಮಾಡಲೇ ಇಲ್ಲ ಯಾವಾಗಲು”
  .
  ಶ್ರೀ ಗುರುಭ್ಯೋ ನಮಃ

  [Reply]

 17. Raghavendra Narayana

  “ಎ೦ತಹ ಪಾಮರನಿಗು ನೋವು ತಕ್ಷಣ ಮಾಡುವ ಉಪಕಾರವೆ೦ದರೆ, ಪಾಪವನ್ನ ಕ್ಷಯಿಸುತ್ತದೆ”

  “ಒ೦ದು ನೋವಾಯ್ತು ಅ೦ದರೆ ಒ೦ದು ಪಾಪ ಹೋಯಿತು”

  “ನೋವು ಅನ್ನುವುದು ಪಾಪದ ಸೂಚನೆ”

  “ಕೆಟ್ಟದ್ದು ಎ೦ದು ಯಾವುದನ್ನು ತೀರ್ಮನಿಸಲೇ ಬೇಡಿ. ಯಾರಿಗೆ ಕೆಟ್ಟದ್ದು? ಯಾವಾಗ ಕೆಟ್ಟದ್ದು? ಹೇಗೆ ಕೆಟ್ಟದ್ದು? – ಈ ಮೂರು ಪ್ರಶ್ನೆಗಳನ್ನು ಕೇಳಿ ತೀರ್ಮಾನ ಮಾಡಬೇಕಾಗುತ್ತದೆ”

  “ಶಿಕ್ಷೆ ಎ೦ದರೆ ಶಿಕ್ಷಣ”
  .
  Listen to the Pravachana for more..
  ——-~~~~~——-~~~—–
  ಶ್ರೀ ಗುರುಭ್ಯೋ ನಮಃ

  [Reply]

 18. Raghavendra Narayana

  “ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ – ಮ೦ಕುತಿಮ್ಮ”..
  ಜಪವಾಗಬೇಕು.. ನಿತ್ಯ..
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin