ಯಾರಿಂದಲೂ ನಿರೀಕ್ಷೆ ಇಟ್ಟುಕೊಳ್ಳಬೇಡಿ. ನೀರಿಕ್ಷೆಯೇ ದುಃಖಕ್ಕೆ ಮೂಲ. ನಾವು ದೇವರಿಂದ ನಿರೀಕ್ಷೆ ಇಟ್ಟುಕೊಂಡು, ಅದು ಈಡೇರಿಲ್ಲ ಎಂದರೆ ನಾವು ದೇವರನ್ನು ದೂರುತ್ತೇವೆ ಮತ್ತು ದೂರ ಮಾಡುತ್ತೇವೆ.
ಶ್ರೀರಾಮಚಂದ್ರಾಪುರ ಮಠದ ಕುಂಬಳೆ ವಲಯ ಪರಿಷತ್ತಿನ ಆಶ್ರಯದಲ್ಲಿ ಅಗೋಸ್ತ್ 7 ರಿಂದ 15 ರ ತನಕ ಮುಜುಂಗಾವು ಶ್ರೀಪಾರ್ಥಸಾರಥಿ ಕೃಷ್ಣ ದೇವಸ್ಥಾನದಲ್ಲಿ ವಾಲ್ಮೀಕಿ ರಾಮಾಯಣ ಪಾರಾಯಣ ಕಾರ್ಯಕ್ರಮ ನಡೆಯಲಿದೆ.
ಶ್ರೀ ಸಂಸ್ಥಾನದವರ ಯೋಜನೆಯಂತೆ ಛಾತ್ರಪುರಸ್ಕಾರದಲ್ಲಿ ರಾಷ್ಟ್ರಮಟ್ಟದಲ್ಲಿ ಗಾಯನ ಹಾಗೂ ಭರತನಾಟ್ಯ ಪಟು ವಿದೂಷಿ ದೀಕ್ಷಾ ಅವರನ್ನು ಶ್ರೀಗಳು ಸನ್ಮಾನಿಸಿದರು. ಶ್ರೀ ಭಾರತಿ ಪ್ರಕಾಶನದ ವತಿಯಿಂದ ಪರಮಪದ ಸೋಪಾನ ಎಂಬ ವಿನೂತನ ಮಾದರಿಯ ಆಟಿಕೆಯನ್ನು ಕುಮಾರಿ ವಿದೂಷಿ ದೀಕ್ಷಾ ಅವರಿಂದ ಲೋಕಾರ್ಪಣೆಗೊಳಿಸಲಾಯಿತು
ಗುರುಗಳ ಹತ್ತಿರ ಇದ್ದವರ ಮೇಲೆ ಸಹಜವಾಗಿ ಹಲವರಿಗೆ ಅಸೂಯೆ ಮೂಡುತ್ತದೆ. ಹಾಗಾಗಬಾರದು, ಸಮಾಜದ ಶುಭ ಹಾರೈಕೆ ಎಲ್ಲ ಪರಿವಾರದವರ ಮೇಲೆ ಇರಲಿ. ಅಣ್ಣ-ತಮ್ಮಂದಿರ ಹಾಗೆ. ಮನೆಯ ಮಕ್ಕಳ ಹಾಗೆ ಸಂಬಂಧ ಇರಲಿ. ಎಲ್ಲರಿಗೂ ರಾಮನ ಆಶೀರ್ವಾದ ಇರಲಿ, ಹಾಗೂ ಎಲ್ಲರಿಗೂ ಕ್ಷೇಮವನ್ನು ಅಪ್ಪಣೆ ಮಾಡಿದರು.